ತುಳು ಲಿಪಿ

Tribute

 • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
  His Holiness Sri Sri Sri Keshavananda Bharati Swamiji
  Sri Edaneeru Samsthanam
 • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
  Dr. Veerendra Heggade
 • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
  Dr. Ramananda Banari
 • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
  Dr. Prabhakara Joshi
 • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
  Ramachandra Uchchila
 • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
  Dr. Kayyara Kinyanna Rai
 • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
  Dr. Amrita Someshwar
 • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
  Dr. Srikrishna Bhat Arthikaje
 • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
  Dr. Radhakrishna Bellur
 • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
  Dr. Chandrashekara Damle

ಗಾಳಿಪಟ

ಎತ್ತರ ಎತ್ರರ ಹಾರಾಡುತಲಿದೆ

ನೋಡದೊ ನನ್ನಯ ಗಾಳಿಪಟ

ಬೀಸುವ ಗಾಳಿಗೆ ಆಚೆಗೆ ಈಚೆಗೆ

ಬಾಲವ ಝಾಡಿಸಿ ಪಟಾ ಪಟಾ

ಸೂರ್ಯನ ಬಳಿಗೆ ಚಂದ್ರನ ಬಳಿಗೆ

ಹಾರುತಲಿಹುದದೊ ನನ್ನ ಪಟ

ಆದರೆ ದಾರವ ತಪ್ಪಿಸಿ ಓಡಲು

ಬಿಡೆ ನಾನೆಂಬುದು ನನ್ನ ಹಟ

ಎಲ್ಲಾ ಊರಿನ ಜನರೂ ನೋಡಲಿ

ನನ್ನೀ ಕಲೆಯಾ ಚೆಲುನೋಟ

ಬಾನಲಿ ಆ ಕಡೆ ಈ ಕಡೆ ಓಡುವ

ಮೋಡಕೆ ಇದು ಕಲಿಸಲಿ ಪಾಠ

 

 

ನನ್ನ ಕೊಡೆ

ಕೊಡೆ ಕೊಡೆ ನನ್ನ ಕೊಡೆ

ಯಾರಿಗೂ ಅದನ್ನು ಕೊಡೆ

ಪುಟ್ಟ ಕಾಲು ಇರುವ ಕೊಡೆ

ಕಪ್ಪು ಬಟ್ಟೆ ಹೊಲಿದ ಕೊಡೆ

ಎಂಟು ಕಡ್ಡಿ ಬಿಗಿದ ಕೊಡೆ

ದುಡ್ಡು ಕೊಟ್ಟು ತಂದ ಕೊಡೆ

ಕೊಡೆ ಕೊಡೆ ನನ್ನ ಕೊಡೆ

ಯಾರಿಗೂ ಅದನ್ನು ಕೊಡೆ

ಮಳೆಯ ನೀರ ತಡೆವ ಕೊಡೆ

ಸೆಕೆಗೆ ತಂಪು ಕೊಡುವ ಕೊಡೆ

ಮಡಚುವಾಗ ಸಣ್ಣ ಕೊಡೆ

ಬಿಡಿಸುವಾಗ ದೊಡ್ಡ ಕೊಡೆ

ಕೊಡೆ ಕೊಡೆ ನನ್ನ ಕೊಡೆ

ಯಾರಿಗೂ ಅದನ್ನು ಕೊಡೆ

ಎಷ್ಟು ಚಂದ ನನ್ನ ಕೊಡೆ

ನನ್ನ ಕೊಡೆಯ ನಾನು ಬಿಡೆ

ಬಂತು ಮಳೆಯು ತಡೆ ತಡೆ

ಕೊಡೆಯ ಹಿಡಿದು ನಡೆ ನಡೆ

ಕೊಡೆ ಕೊಡೆ ನನ್ನ ಕೊಡೆ

ಯಾರಿಗೂ ಅದನ್ನು ಕೊಡೆ

 

 

ಆನೆ ಬಂತು ಆನೆ

ಆನೆ ಬಂತು ಆನೆ

ಗಣಗಣ ಗಂಟೆಯ ಆನೆ

ಡೊಳ್ಳಿನ ಹೊಟ್ಟೆಯ

ಬಟ್ಟಲು ಹೆಜ್ಜೆಯ

ಆನೆ ಬಂತು ಆನೆ

ಕೊರಳಿನ ಗಂಟೆಯ

ಆನೆ

ಕಂಬದ ಕಾಲಿನ

ಜಂಬದ ಮೂರ್ತಿಯ

ಆನೆ ಬಂತು ಆನೆ

ತುಂಬ ಎತ್ತರದ ಆನೆ

ಗೆರಸೆಯ ಕಿವಿಯ

ಪಿಳಿ ಪಿಳಿ ಕಣ್ಣಿನ

ಆನೆ ಬಂತು ಆನೆ

ಚಂದದ ದಂತದ ಆನೆ

ಸೊಂಡಿಲನೆತ್ತಿ

ಬಾಲವ ಬೀಸಿ

ಆನೆ ಬಂತು ಆನೆ

 

 

ಬೆಳಕು ಎಲ್ಲೆಡೆಯಿಂದಲೂ ಬರಲಿ

ಬೆಳಕು ಎಲ್ಲೆಡೆಯಿಂದಲೂ

ಬರಲಿ ಬಾಳಿನುದ್ದಕೂ

ಎದೆಯ ಅಂಗಳ ತುಂಬುವಂಥಾ

ಹೃದಯಮಂದಿರ ಬೆಳಗುವಂಥಾ

ನೀಲಿ ಬಾನಿನ ಹರಹಿನಿಂದಾ

ಇರುಳ ಕಳೆಯುವ

ಕಾಂತಿಯಿಂದಾ

ನೀಲಿ ಕಡಲಿನ ಆಳದಿಂದಾ

ರತ್ನರಾಶಿ ಸಮೂಹದಿಂದಾ

ಸೂರ್ಯದೇವನ ಸಾಲ ಪಡೆದಾ

ಚಂದ್ರಗೋಳದ ನಡುವಿನಿಂದ

ಶುಭದ ಆಶಯ ನುಡಿಯುವಂಥ

ನಮ್ಮ ಮಿತ್ರರ ಹೃದಯದಿಂದಾ

ಗುಡಿಯ ದೇವರಿಗಿರಿಸಿದಂಥ

ನಿತ್ಯನಂದಾದೀಪದಿಂದ

ಗಿಡದೊಳರಳಿದ ಚೆಲುವ

ಮೊಗ್ಗೆಯ

ನಡುವೆ ಅರಳಿದ ನಗುವಿನಿಂದ

ಭೂಮಿಯೊಳಗಡೆ ಹರಡಿದಂಥ

ಹೊನ್ನ ಗನಿಗಳ ನಡುವಿನಿಂದ

ನಭದ ಚುಕ್ಕೆಯ ರಾಶಿಯಿಂದ

ಜ್ಞಾನ ನಿಧಿಗಳ ಜ್ಞಾನದಿಂದ

 

 

ವರ್ಷ ಋತು

ಬಂದಳಿದೊ ಬಂದಳಿದೊ ವರ್ಷ ಋತು ಬಾಲೆ

ತಂದಳಿದೊ ತಂದಳಿದೊ ಋತು ವರ್ಷ ಧಾರೆ

ಕಾರ್ಮುಗಿಲ ಕುರುಳನು ತಿರುವಿ ಬಾಚುತ್ತ

ಕಾಮಧೇನುವಿನ ಹುಬ್ಬುಗೆರೆಯ ತೀಡುತ್ತ

ಕಾಮಿಗಳ ಕಣ್ಣಂಚ ಮಿಂಚ ಮಿಂಚಿಸುತ

ಕಾಮಿನಿಯು ಬಂದಳಿದೊ ಮುಗುಳುನಗು

ನಗುತ

ನದಿ ಕಣಿವೆಗಳ ನಡುವೆ ನೀರೊಸರಿ ಬಂತು

ಬದಿಯ ನೆಲಹೊಲಗಳಲಿ ಹೊಸ ಬೆಳೆಯು ಬೆಳೆದು

ಸುದತಿಯಧರವ ಪೋಲ್ವ ಚಿಗುರುಗಳು ಚಿಗುರಿ

ಮುದದಿ ಫಲಫಲಿಸಿತ್ತು ಮನದಾಸೆ ಕುದುರಿ

ತಣಿಸಿದಳು ಜನಮನವ ಬಂದ ಋತು ಬಾಲೆ

ದಣಿಸಿದಳು ತೂಗಿದಳು ಪ್ರೇಮದುಯ್ಯಾಲೆ

ಉಣಿಸಿದಳು ರಾಗರಸ ಸುಧೆಯ ಮೇಲ್ಮೇಲೆ

ಕುಣಿಸಿದಳು ಮಣಿಸಿದಳು ಹಾಡಿ ಸುವ್ವಾಲೆ

 

 

ಜೋಕುಲು

ಜೋಕುಲೆಂಕುಲು ಜೋಕುಲೆಂಕುಲು

ತುಳುವ ಮಣ್ಣ್ದ ಜೋಕುಲು

ಅಪ್ಪೆ ನೇತ್ರಾವತಿನ ಮೋಕೆದ

ಪೇರ್ ಪರ್ತಿನ ಜೋಕುಲು

ರಾಣಿ ಅಬ್ಬಕ್ಕೆನ ಪರಾಕ್ರಮೊ

ಪಡೆತ್ ಪುಟ್ಟಿನ ಜೋಕುಲು

ಕಡಲ ನೀರ್ಡ್ ಮೀತ್ ಬುಲೆತಿನ

ಕಡಲ್ತಪ್ಪೆನ ಜೋಕುಲು

ಕೆಸರ್ ಮಣ್ಣ್ಡ್ ಬೆನ್ಪಿನಂಚಿನ

ಮಣ್ಣ್ದಪ್ಪೆನ ಜೋಕುಲು

ಸತ್ಯದರ್ಮೊಗು ನ್ಯಾಯ ನೀತಿಗ್

ಮಾತ್ರ ಬಗ್ಗುವೊ ಎಂಕುಲು

ದುಕ್ಕೊ ಕೊರ್ಪಿನ ದುರ್ಜನೊಂಕ್ಲೆಗ್

ಕೋಟಿಚೆನ್ನಯೆರೆಂಕುಲು

ಕಷ್ಟ ಮಾರ್ಗೊಡು ಕಾರ್ಲಗೋಮಟ

ಲೆಕ್ಕೊ ಉಂತುವೊ ಎಂಕುಲು

ಭಾರೊ ತುಂಬ್ಯರ ಲಕ್ಕ್ದುಂತಿನ

ಅಗೊಳಿಮಂಞಣೆರೆಂಕುಲು

ಕೊಟ್ಟ ಗುದ್ದೂಲಿ ಪತ್ದ್ ಗುಡ್ಡೆನೆ

ತಟ್ಟ್ ಮಲ್ಪಿನ ವೀರೆರ್

ತುಂಡ್ ಬೈರಾಸ್ಡ್ ನಡಪ್ಪಿನ

ಅರೆಬೆತ್ತಲೆದ ಪಕೀರೆರ್

ಗೆಜ್ಜೆ ಕಟ್ಟ್ದ್ ಯಕ್ಷಗಾನೊಡು

ಲಾಯ್ಪಿ ಅರ್ಜುನ ಭೀಮೆರ್

ಹೀಜೊ ಮಂಜಟಿಗೋಣೆರೆಗ್ಲಾ

ಪಲವೆ ಮುಟ್ಟುನ ಧೀರೆರ್

ಕೆಡ್ಡಸೊತ ದಿನೊ ಬೂಮಿದೇವಿನ

ಚಾಕ್ರಿ ಮಲ್ಪುನ ತೂಯೆರಾ

ಎಡ್ಡೆ ಬಿರುಪಗರಿಲೆನ್ ಪತ್ದ್

ಬೋಂಟೆ ಪೋಪುನ ತೂಯೆರಾ

ಆಟಿಕಲೆಂಜಗ್ ಸೋಣ ಜೋಗಿಗ್

ದರ್ಮೊ ಕೊರ್ಪಿನ ತೂಯೆರಾ

ಬೂತೊ ನೇಮೊಡು ತೂಕ್ ಲಾಯ್ತ್ದ್

ಮಾಯೆ ಮೆರೆಪಿನ ತೂಯೆರಾ

ಹೌಂದರಾಯೆರೆ ವಾಲಗೊತಕುಲು

ಕೋಲು ಪದೊತಾ ಕುಡಂಬಿಲು

ಗುಮಟೆ ಬೊಟ್ಟ್ದ್ ತಾಳೊ ಪಾಡ್ದ್

ನಲಿಪಿ ಜವನೆರ್ ಎಂಕುಲು

ಬಡವು ಬಾಜೆಲ್ ಕಷ್ಟೊ ಬಂಗೊತ

ಗೊಡವೆ ಮಾತಲ ಮದತ್ದ್

ದುಡಿನ ಬೊಟ್ಟ್ದ್ ತುಳ್ಳುನಂಚಿನ

ತುಳುವ ಮಣ್ಣ್ದ ರಸಿಕೆರ್

 

 

ಪಾರಿಜಾತೊ

ಪಾರಿಜಾತೊದ ಪೂವು ಮಲ್ಪಡಾ ಯೆನನ್

ಬದ್ಕೊನ್ಪೆ ಬಹುಕಾಲೊ ಯಾನ್