ಗ್ರಂಥರೂಪವಾಗಿ ತುಳುವಿನಲ್ಲಿ ದೊರೆತಿರುವ ಪುರಾತನ ಸಾಹಿತ್ಯಕೃತಿಗಳು ಮೂರು. ಶ್ರೀಭಾಗವತೊ, ಕಾವೇರಿ ಮತ್ತು ದೇವೀಮಹಾತ್ಮೆ. `ಶ್ರೀಭಾಗವತೊ’ವನ್ನು ಮಂಗಳೂರು ವಿಶ್ವವಿದ್ಯಾಲಯವೂ`ಕಾವೇರಿ’ ಮತ್ತು `ದೇವೀಮಹಾತ್ಮೆ’ ಕೃತಿಗಳನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವೂ ಪ್ರಕಟಿಸಿವೆ.
ಈ ಮೂರು ಕೃತಿಗಳೂ ಏಕೈಕ ಹಸ್ತಪ್ರತಿ(Codex Unicus)ಯಾಗಿಯೇ ದೊರೆತುದರಿಂದ ಇಲ್ಲಿ ಪಾಠಾಂತರಗಳ ಗೊಂದಲವಿಲ್ಲವಾದರೂ ಗ್ರಂಥಸಂಪಾದನೆಗೆ ಅದೊಂದು ತೊಡಕೂ ಹೌದು. ಒಂದು ಪಾಠ ಅರ್ಥವಾಗದಿದ್ದರೆ ಇನ್ನೊಂದನ್ನಾದರೂ ಹುಡುಕೋಣವೆಂದರೆ ಅದಕ್ಕೆ ಇಲ್ಲಿ ಅವಕಾಶವಿಲ್ಲ. ಲಿಪಿಕಾರನ ಸ್ಖಾಲಿತ್ಯಗಳನ್ನು ಸಹಿಸಿಕೊಂಡೇ ಸಂಪಾದನಕಾರ್ಯ ಮುಂದುವರಿಯಬೇಕಾಗುತ್ತದೆ.
ಈ ಮೂರು ಗ್ರಂಥಗಳಲ್ಲೂ ಬಳಸಲಾಗಿರುವ ಭಾಷೆ ಸುಮಾರು 400-500ವರ್ಷಗಳ ಹಿಂದಿನದು. ಐನೂರು ವರ್ಷಗಳ ಹಿಂದೆ ನಮ್ಮ ಜನರು ಹೇಗೆ ತುಳು ಮಾತಾಡುತ್ತಿದ್ದರೆಂದು ಅರಿತುಕೊಳ್ಳಲು ಬೇರೆ ಯಾವ ದಾಖಲೆಗಳೂ ನಮಗೆ ಲಭ್ಯವಿಲ್ಲ; ಶಬ್ದಕೋಶ, ವ್ಯಾಕರಣಗ್ರಂಥ ಮುಂತಾದವುಗಳ ನೆರವೂ ನಮಗೆ ಸಿಗುವುದಿಲ್ಲ.
ತುಳುವಿನ ಆದಿಕಾವ್ಯವೆನಿಸಿದ ತುಳುಭಾಗವತವು `ವಿಷ್ಣುತುಂಗ' ಕವಿಯ ಒಂದು ಅಪೂರ್ವಕೃತಿ. ತುಳುವಿನಲ್ಲಿ ಶಿಷ್ಟಸಾಹಿತ್ಯವೇ ಇದ್ದಿರಲಿಲ್ಲ ಎಂಬ ಊಹೆಯನ್ನು ತೊಡೆದುಹಾಕಿ ಕಾವ್ಯರಚನೆಗೆ ಈ ಭಾಷೆ ತೊಡಕಾಗದು ಎಂದು ಪ್ರಮಾಣೀಕರಿಸಿ ತೋರಿಸಿದ ವಿಷ್ಣುತುಂಗನ ಸಾಹಸ ಶ್ಲಾಘನೀಯ.
ಜನಪದಕಾವ್ಯಗಳಿಗೆತುಳುವಿನಲ್ಲಿಕೊರತೆಯಿಲ್ಲ. ಭೂತಾರಾಧನೆಯ ಉದ್ದೇಶಕ್ಕಾಗಿ ಹುಟ್ಟಿಕೊಂಡ ನೂರಾರು ಪಾಡ್ದನಗಳು, ವ್ಯವಸಾಯದ ಹಾಡುಗಳು (ಓಬೇಲೆ ಪದಗಳು) ಹಾಗೂ ಇನ್ನಿತರ ಮನೋರಂಜನೆಯ ಗೀತಗಳು ಇಂದಿಗೂ ಜೀವಂತವಾಗಿವೆ. ಕಥೆ, ವರ್ಣನೆ, ಗಾತ್ರ, ಶೈಲಿಗಳಲ್ಲಿ ಅದ್ಭುತವೂ ರಮ್ಯವೂ, ವೈವಿಧ್ಯಮಯವೂ ಆದ ಪಾಡ್ದನಗಳ ಪ್ರಪಂಚತುಳುಸಾಹಿತ್ಯದಲ್ಲಿ ಒಂದು ದೊಡ್ಡ ವಿಭಾಗವೇ ಆಗಿದೆ. ಇವೆಲ್ಲಕ್ಕಿಂತ ಹೊರತಾದ ಹಾಗೂ ಸಂಪೂರ್ಣವ್ಯತ್ಯಸ್ತವಾದ ಒಂದು ವಿನೂತನ ಸಾಹಿತ್ಯರೂಪಕ್ಕೆ ತುಳುಭಾಗವತ ನಾಂದಿಹಾಡುತ್ತದೆ.
ಹಳಗನ್ನಡ ಕಾವ್ಯಗಳಂತೆ ಸುಪುಷ್ಟವೂ ವಿಸ್ತಾರವೂ ಆತ ತುಳುಭಾಗವತ ಮಹಾಕಾವ್ಯವು ಹಲವಾರು ಅಂಶಗಳಿಂದ ಮನನೀಯವಾಗಿದೆ. ಮುಖ್ಯವಾಗಿ ಇಲ್ಲಿಯ ಭಾಷೆಯೇ ಹಳೆಯ ಕಾಲದ್ದು. ಇಲ್ಲಿ ಬಳಸಿರುವ ತುಳು, ಈಗ ಮಾತಾಡುವ ತುಳು ಭಾಷೆಗಿಂತ ಭಿನ್ನವಾದುದು. ಕನ್ನಡದಲ್ಲಿ ಹಳಗನ್ನಡ ಇದ್ದಂತೆ, ತುಳುವಿನಲ್ಲೂ `ಹಳೆಯ ತುಳು’ ಎಂಬ ಪ್ರಭೇದವನ್ನು ಈ ಕೃತಿಯ ಮೂಲಕ ನಾವು ಗುರುತಿಸಬಹುದು.
`ತುಳುಭಾಷೆಗೆ ಲಿಪಿಯಿಲ್ಲ. ತುಳುಭಾಷೆಯಲ್ಲಿ ಪ್ರಾಚೀನ ಲಿಖಿತ ಸಾಹಿತ್ಯವಿಲ್ಲ’ - ಎಂಬ ಇದುವರೆಗಿನ ಸಂಶೋಧಕರ ಮಾತನ್ನು ಅಲ್ಲಗಳೆದು `ಶ್ರೀಭಾಗವತೊ’ ಪ್ರಾಚೀನ ತುಳುಕಾವ್ಯವು ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ 1984ರಲ್ಲಿ ಪ್ರಕಟವಾದಾಗ ತುಳುಸಾಹಿತ್ಯಚರಿತ್ರೆಯಲ್ಲಿಯೇ ಒಂದು ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.
`ಶ್ರೀಭಾಗವತೊ’ ಪ್ರಕಟವಾದ ಬಳಿಕ, ಇತ್ತೀಚೆಗೆ ನಮ್ಮ ಅವಗಾಹನೆಗೆ ಬಂದ ಇನ್ನೊಂದು ಪ್ರಾಚೀನಕೃತಿಯೇ `ಕಾವೇರಿ’ ತುಳುಕಾವ್ಯ. ತಾಡವಾಲೆಗಳಲ್ಲಿ ಬರೆಯಲಾಗಿದ್ದ ಈ ಕೃತಿಯು ಅಪೂರ್ಣವಾಗಿದ್ದರೂ, ದೊರೆತಷ್ಟು ಭಾಗವು ಅತ್ಯಂತ ಕುತೂಹಲಕಾರಿಯಾಗಿದೆ. ಇದನ್ನು ಬರೆದ ಕವಿಯು ಯಾರು? ಈತ `ಶ್ರೀಭಾಗವತೊ’ವನ್ನು ಬರೆದ ಮಹಾಕವಿ ವಿಷ್ಣುತುಂಗನ ಸಮಕಾಲೀನನೆ? ಇತ್ಯಾದಿ ವಿಚಾರಗಳು ಇನ್ನೂ ತಿಳಿದುಬಂದಿಲ್ಲ. ಇದರ ಪ್ರಾರಂಭದ 119 ವಾಲೆ(Folio)ಗಳೂ, ಮಧ್ಯಭಾಗದ 23 ವಾಲೆಗಳು (Folio 211ರಿಂದ 233 ವರೆಗೆ) ಕೊನೆಯ ಕೆಲವು ವಾಲೆಗಳೂ ನಷ್ಟವಾಗಿವೆ. ಒಟ್ಟು 15 ಅಧ್ಯಾಯಗಳಿರಬೇಕಾದ ಈ ಕಾವ್ಯದ 6ನೆಯ ಅಧ್ಯಾಯದ ಕೊನೆಯ ಭಾಗ, 7-8 ಅಧ್ಯಾಯಗಳ ಸಮಗ್ರಭಾಗ, 9ನೆಯ ಅಧ್ಯಾಯದ ಮುಕ್ಕಾಲುಭಾಗ, 10ನೆಯ ಅಧ್ಯಾಯದ ಕೊನೆಯ ಭಾಗ ಮತ್ತು 11ನೆಯ ಅಧ್ಯಾಯದ ಒಟ್ಟು ಆರು ಪದ್ಯಗಳು ಹೀಗೆ ಇಷ್ಟು ಮಾತ್ರ ನಮಗೆ ಸಿಕ್ಕಿವೆ. ಅಂತೂ ಸಮಗ್ರಕಾವ್ಯದ ಮೂರನೆಯ ಒಂದು ಭಾಗ ಮಾತ್ರ ನಮಗೆ ಸಿಕ್ಕಿದೆಯೆಂದು ಹೇಳಬಹುದು.
`ತುಳು ದೇವೀಮಹಾತ್ಮೆ’ - ಈಗ ತುಳುವಿನಲ್ಲಿ ದೊರೆತಿರುವ ಪ್ರಪ್ರಥಮ ಗದ್ಯಕೃತಿ. ಹಳೆಯ ತುಳುವಿನ ಏನೇನೂ ಪರಿಚಯವಿಲ್ಲದಿರುವ ನಮಗೆ ಈ ಭಾಷೆ ಓದಲು ತೊಡಕೆನಿಸುವುದು ಸಹಜ. ಹಿಂದಿನ ಕಾಲದ ತುಳುವರು ಹೀಗೂ ಒಂದು ಭಾಷೆಯನ್ನು ಮಾತಾಡುತ್ತಿದ್ದಿರಬಹುದೆ - ಎಂದು ಸೋಜಿಗವಾಗಬಹುದು. ಈ ಉಪಭಾಷೆಯ ಸ್ವರೂಪವು ಶ್ರೀಭಾಗವತೊ - ಕಾವೇರಿ ಗದ್ಯಗಳ ಭಾಷೆಗಿಂತ ಅನೇಕಾಂಶಗಳಲ್ಲಿ ಭಿನ್ನವಾಗಿದೆ. ಪದಪ್ರಯೋಗ, ವಾಕ್ಯರಚನೆ (Struucture) ಶೈಲಿ ಎಲ್ಲವೂ ಇಲ್ಲಿ ಅಪೂರ್ವವಾಗಿ ಕಾಣಿಸುತ್ತದೆ.
ಶ್ರೀಭಾಗವತೊ-ಕಾವೇರಿ ಕೃತಿಗಳು ಪದ್ಯರೂಪದಲ್ಲಿರುವುದರಿಂದ ಅಲ್ಲಿಯ ಭಾಷೆ ಹೆಚ್ಚು `ಕಾವ್ಯಾತ್ಮಕ’ವಾಗಿದ್ದರೆ, ಇಲ್ಲಿಯ ಭಾಷೆ ಗದ್ಯರೂಪದಲ್ಲಿದ್ದು ಬಹುಮಟ್ಟಿಗೆ `ವಿವರಣಾತ್ಮಕ’ವಾಗಿದೆ.
ಮಾರ್ಕಂಡೇಯ ಪುರಾಣಾಂತರ್ಗತವಾದ ದೇವೀಮಹಾತ್ಮೆಯ ಕಥೆಯನ್ನು ತುಳುಗದ್ಯದಲ್ಲಿ ಹೇಳುವುದು ಈ ಗ್ರಂಥಕಾರನ ಉದ್ದೇಶ. ವಚನಭಾರತ, ವಚನ ಭಾಗವತ ಮುಂತಾದ ಕನ್ನಡ ಕೃತಿಗಳ ಹಾಗೆ ಇದು `ವಚನದೇವೀಮಹಾತ್ಮೆ’ ಎಂದೂ ಹೆಸರಿಸಬಹುದಾದ ಒಂದು ಪ್ರಾಚೀನಕೃತಿ ಎನ್ನಬಹುದು. ಇದು ಹಳೆಯ ತುಳುಭಾಷೆಯಲ್ಲಿರುವುದರಿಂದ ಅತ್ಯಂತ ಮೌಲಿಕವಾಗಿದೆ. ಆಧುನಿಕತುಳುವಿನಲ್ಲಿಲ್ಲದ, ಶ್ರೀಭಾಗವತೊ - ಕಾವೇರಿಗಳಲ್ಲೂ ಇಲ್ಲದ, ಕೆಲವು ಅಪೂರ್ವ ತುಳುಪದಗಳು ಇಲ್ಲಿ ಕಾಣಸಿಗುತ್ತವೆ.
ಅರುಣಾಬ್ಜಕವಿಯ `ತುಳುಮಹಾಭಾರತ’ವು ತುಳುಸಾಹಿತ್ಯದ ಒಂದು ಅಮೂಲ್ಯಕೃತಿ. ಈಗ ದೊರೆತಿರುವ ತುಳುಕಾವ್ಯಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದುದು. ಹಾಗೆಂದು ಅರುಣಾಬ್ಜನೇ ತುಳುವಿನ ಆದಿಕವಿಯಲ್ಲ; ಮಹಾಭಾರತವೇ ತುಳುವಿನ ಆದಿಕಾವ್ಯವೂ ಅಲ್ಲ. ಮಹಾಭಾರತಕ್ಕಿಂತಲೂ ಮೊದಲು ತುಳುವಿನಲ್ಲಿ ರಾಮಾಯಣಕಾವ್ಯ ರಚನೆಯಾಗಿತ್ತು ಎಂದು ಆತನೇ ಸೂಚಿಸಿರುತ್ತಾನೆ:
ತೆಳಿವುಳ್ಳಾಕುಳು ಭೂಮಿ-
ತುಳೈ ರಾಮಾಯಣ ಕಾವ್ಯೊ
ತುಳುಭಾಷೆ ಕವಿಕುಳು ವಿಸ್ತರಿತೆರೈಯೇರ್
ಅಳಿಯೇನಾಕುಳೆ ಪಾದ-
ನಳಿನೊಂತಾ ಮಧುವುಣ್ಕೀ
ಯಿಳೆಟ್ೀ ಭಾರತಕಾವ್ಯೊ ರಚಿಯೀಪುಪ್ಪೆ
(ಸಂಧಿ-1; ಪಾಡ್-9)
`ತುಳುಭಾಷೆ ಕವಿಕುಳು’ ಎಂದು ಬಹುವಚನವನ್ನು ಹೇಳಿರುವುದರಿಂದ ಕನಿಷ್ಠ ಪಕ್ಷ ಇಬ್ಬರಾದರೂ ತುಳುವಿನಲ್ಲಿ ರಾಮಾಯಣವನ್ನು ರಚಿಸರಬೇಕು - ಎಂಬ ಊಹೆಗೆ ಅವಕಾಶವಿದೆ. ಅಂತಹ ಅಜ್ಞಾತಕವಿಗಳ `ಪಾದಕಮಲಗಳ ತುಂಬಿ ನಾನು’ ಎಂಬ ಮಾತಿನಲ್ಲಿ ಆತನಿಗೆ ಪೂರ್ವಕವಿಗಳ ಬಗ್ಗೆ ಇರುವ ಗೌರವಭಾವವು ವ್ಯಕ್ತವಾಗುತ್ತದೆ.
`ಹರಿಯಪ್ಪ’ ಎಂಬ ಹೆಸರಿನಿಂದ ಪ್ರಸಿದ್ಧನಾದ ಈ ಅರಸನನ್ನು ಎರಡನೆಯ ಹರಿಹರ ಎಂದು ಚರಿತ್ರೆಯಲ್ಲಿ ಗುರುತಿಸಿದ್ದಾರೆ. ಮಹಾಜ್ಞಾನಿಯಾದ ಸಾಯಣಾ ಚಾರ್ಯರುಇವನಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಅರಸನ ಸಲಹೆಯಂತೆ ಸಾಯಣಾ ಚಾರ್ಯರು ಋಗ್ವೇದ-ಯಜುರ್ವೇದ-ಸಾಮವೇದಗಳಿಗೆ ಭಾಷ್ಯ ಬರೆದರೆಂದು ಇತಿಹಾಸ ಹೇಳುತ್ತದೆ. ತುಳುಲಿಪಿಯಲ್ಲಿ ಬರೆದ ಸಾಯಣಭಾಷ್ಯದ ತಾಳೆಯೋಲೆಯ ಹಸ್ತಪ್ರತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕøತಿಸಂಶೋಧನ ಗ್ರಂಥಾಲಯದಲ್ಲಿದೆ. ಒಂದು ಕಾಲದಲ್ಲಿ ವಿಜಯನಗರ ಅರಸರ ಅರಮನೆಯಲ್ಲಿ ತುಳುಭಾಷೆ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಹರಿಯಪ್ಪನ ತುಳು ಕರ್ಣಪರ್ವವೇ ಸಾಕ್ಷಿ.
ಹಸ್ತಪ್ರತಿಗಳಲ್ಲಿರುವ ಹಳೆಯ ಸಾಹಿತ್ಯಕೃತಿಗಳನ್ನು ಹುಡುಕಿ ಓದುವುದು ಮತ್ತು ಅವುಗಳ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ನನಗೆ ಬಾಲ್ಯದಿಂದಲೂ ಆಸಕ್ತಿಯಿತ್ತು. ನನ್ನ ಪುಂಡೂರು ಮನೆತನದ ಹಿರಿಯರಲ್ಲಿ ಹಲವರು ಯಕ್ಷಗಾನಾಸಕ್ತರು; ಕೆಲವರು ಯಕ್ಷಗಾನಪ್ರಸಂಗಕರ್ತರು; ಕೆಲವರು ಪ್ರಸಂಗಗಳ ಪ್ರತಿಕಾರರು. ಈ ಹಿನ್ನೆಲೆಯಿಂದ ಬಂದ ನನಗೆ ಯಕ್ಷಗಾನಪ್ರಸಂಗಗಳೂ ಸೇರಿದಂತೆ ನಮ್ಮ ಪರಿಸರದಲ್ಲಿರುವ ಕಾಗದದ ಮತ್ತು ತಾಡವಾಲೆಯ ಹಸ್ತಪ್ರತಿಗಳನ್ನು ಸಂಗ್ರಹಿಸುವ ಮತ್ತು ಸಂಶೋಧನೆ ಮಾಡುವ ಅಭ್ಯಾಸ ಬೆಳೆಯಿತು.
ಹೀಗೆನಾನು ಸಂಗ್ರಹಿಸಿದವುಗಳಲ್ಲಿ ಕೆಲವನ್ನು ಉಪಯೋಗಿಸಿ ಮಾಹಿತಿ ಪಡೆದು, ಆಯಾ ಹಸ್ತಪ್ರತಿಗಳನ್ನು ರಕ್ಷಿಸಿಕೊಂಡುಬಂದವರಲ್ಲೇ ಕೊಟ್ಟು ಅದನ್ನು ಮುಂದೆಯೂ ಸಂರಕ್ಷಿಸಿಕೊಂಡು ಬರುವಂತೆ ಸೂಚನೆಗಳನ್ನು ಕೊಟ್ಟುದುಂಟು. ಕೆಲವನ್ನು ಆಯಾ ವಿಷಯದಲ್ಲಿ ಆಸಕ್ತರಾದ ಸಂಶೋಧಕವಿದ್ವಾಂಸರಿಗೆ ಉಪಯೋಗಕ್ಕಾಗಿ ನೀಡಿದ್ದುಂಟು. ಕೆಲವನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕೊಟ್ಟದ್ದುಂಟು. ಕಲ್ಲಿಕೋಟೆ ವಿಶ್ವವಿದ್ಯಾನಿಲಯದವರು ಪ್ರೋ. ಉಣಿತ್ತಿರಿಯವರ ನೇತೃತ್ವದಲ್ಲಿ ಕಾಸರಗೋಡು ಪರಿಸರಲ್ಲಿ ಹಸ್ತಪ್ರತಿಗಳ ಸಂಶೋಧನೆ ನಡೆಸುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ನಾನು ಅದಾಗಲೇ ಒಂದಿಷ್ಟು ದುಡಿದವನಾದುದರಿಂದ ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡರು. ಈ ಪರಿಸರದ ಹಲವಾರು ಹಳೆಯ ಮನೆಗಳಲ್ಲಿ ಸಂರಕ್ಷಿತವಾದ ಅನೇಕ ತಾಡವಾಲೆ ಗ್ರಂಥಗಳನ್ನು ಆಗ ಸಂಗ್ರಹಿಸಲಾಯಿತು. ಅವೆಲ್ಲ ಇಂದು ಕಲ್ಲಿಕೋಟೆ ವಿಶ್ವಿವಿದ್ಯಾನಿಲಯದಲ್ಲಿ ಸಂರಕ್ಷಿಸಿ ಇಡಲ್ಪಟ್ಟಿವೆ.
'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.
By Dr. Venkataraja Puninchathaya
By Dr. Venkataraja Puninchathaya
ತುಳು ಲಿಪಿ Tulu Kavya Puninchathaya Sri Bhagavatho Tulu Mahabharatho Devi Mahaatme ತುಳು Research Karnaparvo Tuluva Shivalli Pongadiru Kaaveri
This site is dedicated to 'Tulu Mahatma' Venkataraja Puninchathaya. All rights reserved ©
"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430
Powered by AEVUM DEVELOPERS
ಗ್ರಂಥರೂಪವಾಗಿ ತುಳುವಿನಲ್ಲಿ ದೊರೆತಿರುವ ಪುರಾತನ ಸಾಹಿತ್ಯಕೃತಿಗಳು ಮೂರು. ಶ್ರೀಭಾಗವತೊ, ಕಾವೇರಿ ಮತ್ತು ದೇವೀಮಹಾತ್ಮೆ. `ಶ್ರೀಭಾಗವತೊ'ವನ್ನು ಮಂಗಳೂರು ವಿಶ್ವವಿದ್ಯಾಲಯವೂ `ಕಾವೇರಿ' ಮತ್ತು `ದೇವೀಮಹಾತ್ಮೆ' ಕೃತಿಗಳನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವೂ ಪ್ರಕಟಿಸಿವೆ.
ಈ ಮೂರು ಕೃತಿಗಳೂ ಏಕೈಕ ಹಸ್ತಪ್ರತಿ(Codex Unicus)ಯಾಗಿಯೇ ದೊರೆತುದರಿಂದ ಇಲ್ಲಿ ಪಾಠಾಂತರಗಳ ಗೊಂದಲವಿಲ್ಲವಾದರೂ ಗ್ರಂಥಸಂಪಾದನೆಗೆ ಅದೊಂದು ತೊಡಕೂ ಹೌದು. ಒಂದು ಪಾಠ ಅರ್ಥವಾಗದಿದ್ದರೆ ಇನ್ನೊಂದನ್ನಾದರೂ ಹುಡುಕೋಣವೆಂದರೆ ಅದಕ್ಕೆ ಇಲ್ಲಿ ಅವಕಾಶವಿಲ್ಲ. ಲಿಪಿಕಾರನ ಸ್ಖಾಲಿತ್ಯಗಳನ್ನು ಸಹಿಸಿಕೊಂಡೇ ಸಂಪಾದನಕಾರ್ಯ ಮುಂದುವರಿಯಬೇಕಾಗುತ್ತದೆ.
ಈ ಮೂರು ಗ್ರಂಥಗಳಲ್ಲೂ ಬಳಸಲಾಗಿರುವ ಭಾಷೆ ಸುಮಾರು 400-500 ವರ್ಷಗಳ ಹಿಂದಿನದು. ಐನೂರು ವರ್ಷಗಳ ಹಿಂದೆ ನಮ್ಮ ಜನರು ಹೇಗೆ ತುಳು ಮಾತಾಡುತ್ತಿದ್ದರೆಂದು ಅರಿತುಕೊಳ್ಳಲು ಬೇರೆ ಯಾವ ದಾಖಲೆಗಳೂ ನಮಗೆ ಲಭ್ಯವಿಲ್ಲ; ಶಬ್ದಕೋಶ, ವ್ಯಾಕರಣಗ್ರಂಥ ಮುಂತಾದವುಗಳ ನೆರವೂ ನಮಗೆ ಸಿಗುವುದಿಲ್ಲ.
ಹೀಗಾಗಿ ಈ ಗ್ರಂಥಗಳ ಸಂಪಾದನಕಾರ್ಯ ನನಗೊಂದು ಹೊಸ ಅನುಭವ ವನ್ನೇ ಕೊಟ್ಟಿತು. ಮೊದಲನೆಯದು ಲಿಪಿಸಮಸ್ಯೆ, ಈಗ ರೂಢಿಯಲ್ಲಿರುವ ತುಳುಲಿಪಿ1 ಗಿಂತ ಭಿನ್ನವಾದ ಮೋಡಿ ಲಿಪಿಯಲ್ಲಿ ಈ ಗ್ರಂಥಗಳು ಇರುವುದರಿಂದ, ಲಿಪಿಯ ಅಧ್ಯಯನವೇ ಮೊದಲ ಕೆಲಸವಾಯಿತು. ತುಳುವಿನಲ್ಲಿ ÙರÙಳಾಕ್ಷರವಿದೆಯೆಂದರೆ ಯಾರೂ ನಂಬುವ ಮಾತಲ್ಲ. ಹಳಗನ್ನಡದಲ್ಲಿದೆ; ತಮಿಳು ಹಾಗು ಮಲೆಯಾಳ ಭಾಷೆಗಳಲ್ಲೂ ಇದೆ. ತುಳುಲಿಪಿಯಲ್ಲಿ ಇದಕ್ಕೆ ಕೊಟ್ಟಿರುವ ಸಂಕೇತವೂ ಹೊಸತಾದುದು. ಅದು ಹಳಗನ್ನಡದಲ್ಲಿರುವಂತೆಯೂ ಇಲ್ಲ; ತಮಿಳುಮಲೆಯಾಳಗಳಲ್ಲಿರುವಂತೆಯೂ ಇಲ್ಲ. ತುಳುಲಿಪಿಗೂ ತಮಿಳು, ಮಲೆಯಾಳ, ತಿಗಳಾರಿಲಿಪಿಗಳಿಗೂ ಸಾಕಷ್ಟು ಹೋಲಿಕೆಗಳಿವೆ. ಕೇರಳದಲ್ಲಿ ಈ ಲಿಪಿಗೆ 'ತುಳು-ಮಲೆಯಾಳಂ' ಲಿಪಿ (`ಮಲೆಯಾಳಂ-ತುಳು ಲಿಪಿ' ಎಂದಲ್ಲ) ಎಂದೇ ಹೆಸರು. ಎಂದರೆ, ಒಂದು ಕಾಲದಲ್ಲಿ ತುಳುವಿಗೂ ಮಲೆಯಾಳಕ್ಕೂ ಸಮಾನಲಿಪಿಯು ಬಳಕೆಯಲ್ಲಿತ್ತು. ಆಮೇಲೆ ಅದು ತುಸು ಭಿನ್ನರೂಪಗಳನ್ನು ತಾಳಿ, ಕೇರಳದಲ್ಲಿ ಮಲಯಾಳವಾಗಿ, ತುಳುನಾಡಿನಲ್ಲಿ ತುಳುವಾಗಿ, ಉತ್ತರಕನ್ನಡ ಜಿಲ್ಲೆ ಮುಂತಾದ ಕಡೆಗಳಲ್ಲಿ ತಿಗಳಾರಿಯಾಗಿ ನಾಮಾಂತರಗಳನ್ನು ಹೊಂದಿತು ಎನ್ನಬಹುದು.
ಸ್ಟ್, ಸ್ದ್, ಸ್ತ್ - ಎಂಬ ಅಪೂರ್ವ ಲಿಪಿಸಂಕೇತ:
ಪ್ರಾಚೀನ ತುಳುವಿನಲ್ಲಿ ಅ್ಕಾರಾಂತವಾಗಿಯೇ ನಿತ್ಯಬಳಕೆಯಲ್ಲಿರುವ ಒಂದು ಅಪೂರ್ವ ಧ್ವನಿಮಾ ಇದ್ದುದಾಗಿ ಮೇಲಿನ ಮೂರು ಗ್ರಂಥಗಳಿಂದ ತಿಳಿದುಬರುತ್ತದೆ. ಶ್ರೀಭಾಗವತೊ, ಕಾವೇರಿಗಳಲ್ಲಿ ಅದು 'ಸ್ಟ್' ಎಂದಿದ್ದರೆ, ದೇವೀಮಹಾತ್ಮೆಯಲ್ಲಿ ಅದು 'ಸ್ದ್' ಆಗಿ, ಹಾಗೂ ಇತ್ತೀಚೆಗೆ ನನಗೆ ದೊರೆತ ಇನ್ನೊಂದು ತಾಡವಾಲೆ(ವೈದ್ಯಕೀಯ ವ್ಯಾಖ್ಯಾನ ಗ್ರಂಥ)ಯಲ್ಲಿ 'ಸ್ತ್' ಆಗಿ ಬಳಕೆಗೊಂಡಿದೆ. ಶ್ರೀಭಾಗವತೊ, ಕಾವೇರಿಗಳಲ್ಲಿ - ಧ್ವನಿಮಾಕ್ಕೆ ಶಿಥಿಲದ್ವಿತ್ವವಿದ್ದಂತೆಯೂ ಕಾಣುತ್ತದೆ.
ಲಿಪಿಸ್ವರೂಪದ ಪ್ರಕಾರ 'ಸ್ಟ್' ಎಂದು ಓದಬೇಕಾಗಿರುವ ಈ ಅಪೂರ್ವ ಧ್ವನಿಮಾದ ನಿಜವಾದ ಉಚ್ಚಾರ ಇನ್ನೂ ಸಂದೇಹಾಸ್ಪದವಾಗಿಯೇ ಇದೆ. ಹೊಸ ತುಳುವಿನಲ್ಲಿ ಇದು 'ತ'ಕಾರದ್ವಿತ್ವವನ್ನೋ, 'ತ'ಕಾರವನ್ನೋ, 'ದ'ಕಾರವನ್ನೋ ಹೊಂದಿದ ಉದಾಹರಣೆಗಳಿವೆ.
ಬೂÙಳ್ಸ್ಟ್ > ಬೂಳ್ತ್ತ್, ಬೂರ್ತ್, ಬೂರ್ದ್
ನಿಂಜಿಸ್ಟ್ > ನಿಂಜಿತ್, ದಿಂಜಿದ್
ಕೆರ್ಸ್ಟ್ > ಕೆರ್ತ್ತ್, ಕೆರ್ತ್, ಕೆರ್ದ್
ಪೋಸ್ಟ್ > ಪೋತ್ತ್, ಪೋದ್
'ಸ್ಟ್' ಲಿಪಿಸಂಕೇತವನ್ನೊಳಗೊಂಡ ಇನ್ನೊಂದು ರೀತಿಯ ಪದಪ್ರಯೋಗವನ್ನೂ ಇಲ್ಲಿ ಕಾಣಬಹದು. ಉದಾ:
ಆಸ್ಟೆರ್ - ಆಗಿದ್ದರು (ಆಸ್ಟ್ + ಎರ್)
ಪಿದಾಡ್ಸ್ಟೆನ್ - ಹೊರಟಿದ್ದೇನೆ (ಪಿದಾಡ್ಸ್ಟ್ + ಎನ್)
ಅಸ್ಟೆಕ್ - ಅದಕ್ಕೆ (ಅಸ್ಟ್ + ಎಕ್)
ಸ್ಟ್ ಕಾರದಿಂದಲೇ ಆರಂಭವಾಗುವ ಪದಗಳನ್ನು ನೋಡಿದರೆ ಇನ್ನೂ ಆಶ್ಚರ್ಯ ವೆನಿಸುತ್ತದೆ.
ಸ್ಟ್ಬೆರ್ - ಇವರು
ಸ್ಟೀಕುಳು - ನೀವು
ಸ್ಟ್ಪ್ಪೊಡು - ಇರಬೇಕು
ಇದು ವತ್ಸ್ರ್ಯಧ್ವನಿಯಾಗಿರಬಹುದೇ ಎಂಬ ಸಂದೇಹವನ್ನು `ಶ್ರೀಭಾಗವತೊ' ಗ್ರಂಥದ ಪ್ರಸ್ತಾವನೆಯಲ್ಲಿ ನಾನು ಮಂಡಿಸಿದ್ದೇನೆ.2 ಆದರೆ ಇದು ಸಂದೇಹ ಮಾತ್ರ. ಇದರ ಸರಿಯಾದ ಉಚ್ಚಾರವನ್ನು ತಿಳಿಯಲು ಯಾವುದೇ ಆಧಾರಗಳು ಇದುವರೆಗೆ ಲಭ್ಯವಾಗಿಲ್ಲ.
ಈಗ ರೂಢಿಯಲ್ಲಿರುವ ತುಳುಲಿಪಿ ಅಥವಾ ತುಳುಮಲೆಯಾಳಲಿಪಿಯಲ್ಲಿ 'ಎ'ಕಾರ 'ಒ'ಕಾರಗಳಿಗೆ ಪ್ರತ್ಯೇಕ ಲಿಪಿಸಂಜ್ಞೆಗಳಿಲ್ಲ. ಸಂಸ್ಕೃತದಲ್ಲಿರುವ ಹಾಗೆ ಹ್ರಸ್ವಕ್ಕೂ ದೀರ್ಘಕ್ಕೂ ಇಲ್ಲಿ ಒಂದೇ ಸಂಜ್ಞೆಯಿದೆ. ಮಲೆಯಾಳದಲ್ಲಿ ಎರಡಕ್ಕೂ ಬೇರೆ ಬೇರೆ ಸಂಜ್ಞೆಗಳಿವೆ. ಇದು ಅನಂತರದ ಬೆಳವಣಿಗೆಯೆನ್ನಬಹುದು. ÙರÙಳಕ್ಕೂ ಸ್ಟ್ ಧ್ವನಿಮಾಕ್ಕೂ ಹೊಸ ಲಿಪಿಸಂಕೇತಗಳನ್ನು ಒದಗಿಸುವ ಪ್ರಯತ್ನಮಾಡಿದ ತುಳುಲಿಪಿಕಾರರು, 'ಎ'ಕಾರ 'ಒ'ಕಾರಗಳಿಗೂ, ಅವುಗಳ ಸಂವೃತ ವಿವೃತ ರೂಪಗಳಿಗೂ ಪ್ರತ್ಯೇಕ ಲಿಪಿ ಸಂಕೇತಗಳನ್ನು ಒದಗಿಸದಿರುವುದು ಅಚ್ಚರಿಯಾಗಿದೆ.
ಅ್ಕಾರವನ್ನು ತುಳುನಿಘಂಟಿನಲ್ಲಿ ತುಳುವರ್ಣಮಾಲೆಯ ಮೊದಲ ಅಕ್ಷರವನ್ನಾಗಿ ಪರಿಗಣಿಸಲಾಗಿದೆ. ಅ್ “A Letter of the Tulu Alphabet to represent a centralized u sound with unrounded lips; occurs in more words in south dialects as well as in the Tulu Bhagvatho and Kaveri.”
ಹೀಗೆ ಅ್ ವರ್ಣದಿಂದಲೇ ತುಳುನಿಘಂಟು ಆರಂಭವಾಗುತ್ತದೆ, ತುಳುನಿಘಂಟಿನ ಪೀಠಿಕೆಯಲ್ಲಿ ಶ್ರೀಭಾಗವತೊ - ಕಾವೇರಿ ಗ್ರಂಥಗಳ ಕುರಿತು ಹೀಗೆ ಪ್ರಸ್ತಾವಿಸಲಾಗಿದೆ.
“The recent discovery of a couple of inscriptions as well as two epic poems “Sri Bhgavatho” and “Kaveri” in what is known as the tuluscript,,has completely shaken our notions about the use of this language in mass media and creative in ancient times.”
ಕ್ರಿ.ಶ. 16ನೆಯ ಶತಮಾನದ ರತ್ನಾಕರವರ್ಣಿ ತುಳು ಮಾತೃಭಾಷೆಯವನು ಹಾಗು ತುಳುನಾಡಿನವನು, ಆತ ತನ್ನ `ಭರತೇಶವೈಭವ'ದಲ್ಲಿ -
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ
(ಭರತೇಶವೈಭವಸಂಗ್ರಹ, ಆಸ್ಥಾನಸಂಧಿ ಪದ್ಯ - 4
ಸಂ. ಟಿ. ಎಸ್. ಶಾಮರಾಯ 1972)
- ಎಂದು ಹೇಳಿದ್ದಾನೆ. ತುಳುವರಿಗೆ ಕನ್ನಡ ಬರುತ್ತದೆ; ಅರ್ಥವಾಗುತ್ತದೆ. ಅವರು ಅವರ ಕಾವ್ಯವನ್ನು ಓದಿ `ಅಯ್ಯಯ್ಯ ಎಂಚ ಪೊರ್ಲಾಂಡ್' ಎಂದು ಹೊಗಳಿಯಾರು. ಆದರೆ ತೆಲುಗ? ತೆಲುಗುಲಿಪಿಗೂ ಕನ್ನಡಲಿಪಿಗೂ ಹೋಲಿಕೆಯುಂಟು. ತುಳು-ಮಲೆ ಯಾಳಗಳೊಳಗೆ ಹೋಲಿಕೆಯಿದ್ದ ಹಾಗೆ ಇದೆ. ಆದರೆ ಭಾಷೆಗಳೊಳಗೆ ಹೋಲಿಕೆಯಿಲ್ಲ ವಲ್ಲ! ಅವರು ಇವನ ಕನ್ನಡ ಕಾವ್ಯವನ್ನು ತಿಳಿಯಬೇಕಾದರೆ ಮೊದಲು ಕನ್ನಡ ಕಲಿಯ ಬೇಕು. ಇರಲಿ; ಪರಭಾಷೆಯವರೂ ಕನ್ನಡವನ್ನು ಕಲಿಯಲಿ - ಕಲಿತು ಕಾವ್ಯವನ್ನು ಅರ್ಥಮಾಡಿಕೊಳ್ಳಲಿ. ಮತ್ತೆ 'ರಯ್ಯ ಮಂಚಿದಿ'ಯೆಂದು ಹೊಗಳಲಿ ಎಂಬುದು ರತ್ನಾಕರನ ಉದ್ದೇಶವಿರಬೇಕು. `ಅಯ್ಯಯ್ಯ ಎಂಚ ಪೊರ್ಲಾಂಡ್' ಎಂದು ತುಳುವರು ಹೊಗಳಬೇಕು ಎಂದು ಆಸೆಪಟ್ಟ ರತ್ನಾಕರವರ್ಣಿ ತನ್ನ ಮಾತೃಭಾಷೆ ತುಳುವಾದರೂ, ಕನ್ನಡದಲ್ಲೇ ಕಾವ್ಯವನ್ನು ಬರೆದ. ತುಳು ಮಾತೃಭಾಷೆಯ ಮುದ್ದಣನೂ ಕನ್ನಡದಲ್ಲೇ ಕಾವ್ಯ ಬರೆದು, ತುಳುವರಿಂದಲೂ ಕನ್ನಡಿಗರಿಂದಲೂ ಹೊಗಳಿಸಿಕೊಂಡ. ರತ್ನಾಕರನ ಪರಂಪರೆಯನ್ನೇ ವಿಷ್ಣು ತುಂಗನೂ ಮುಂದುವರೆಸಿದ. ವಿಷ್ಣು ತುಂಗನ ಮಾತೃಭಾಷೆ ಕನ್ನಡ. ಆದರೆ ಕಾವ್ಯ ಬರೆದುದು ತುಳುವಿನಲ್ಲಿ. ಆತ್ಮೀಯತೆಗೆ ಮಾತೃಭಾಷೆಯೇ ಆಗ ಬೇಕೆಂದಿಲ್ಲ. ಯಾವ ಭಾಷೆಯೂ ಯಾರಿಗೂ ಪ್ರಿಯವಾಗಬಹುದು - ಆತ್ಮೀಯವಾಗ ಬಹುದು.
ಶ್ರೀ ಭಾಗವತೊ - ಕವಿಯ ಕಾಲನಿರ್ಣಯ :
ನಾನು ಸಂಪಾದಿಸಿದ ಮೊತ್ತಮೊದಲ ತುಳು ಪ್ರಾಚೀನಗ್ರಂಥ - ಶ್ರೀಭಾಗವತೊ. ಇದರಲ್ಲಿ ಬಳಕೆಯಾದ ಭಾಷೆ ಇಂದು ನಿನ್ನೆಯ ತುಳುವಲ್ಲ. ಕನ್ನಡದಲ್ಲಿ ಹಳಗನ್ನಡ ಇದ್ದಂತೆ, ಇದು ಹಳೆಯ ತುಳು. 'ಪಳಂತುಳು' ಎಂಬೊಂದು ಪದವನ್ನು ನಾನು ಕೇಳಿದ್ದೇನೆ, ಬಹುಶಃ ಅದು ಇದೇ ಆಗಿರಬಹುದು. ಆದರೆ ಈ ಭಾಷೆ ಎಷ್ಟು ವರ್ಷಗಳ ಹಿಂದಿನದು ಎಂದು ತಿಳಿಯಲು, ಕವಿ ಮಾಡಿದ ದೊಡ್ಡ ಉಪಕಾರವೆಂದರೆ ಆತನ ಜಾತಕವನ್ನು ಕಾವ್ಯದ ಆರಂಭದಲ್ಲಿ ವಿವರಿಸಿದ್ದು. ಕವಿಯು ಜಾತಕವನ್ನು ಉಲ್ಲೇಖಿಸಿದ ಉದ್ದೇಶವೇನೇ ಇದ್ದರೂ, ಇದು ಕಾಲನಿರ್ಣಯಕ್ಕೆ ಅತ್ಯುಪಕಾರವಾಯಿತು. ಪದ್ಯದಲ್ಲಿ ಹೇಳಿದ ಪ್ರಕಾರ ಕವಿಯ ಜಾತಕ ಕುಂಡಲಿ ಹೀಗಿದೆ:
× |
× |
× |
× |
ಚಂದ್ರ |
|
ಕೇತು |
|
ರಾಹು |
× |
||
ಶನಿ |
ಬುಧರವಿ,ಕುಜ |
× |
ಗುರು |
ಈ ಜಾತಕದ ಆಧಾರದಂತೆ ವಿಷ್ಣು ತುಂಗನು ಹುಟ್ಟಿದ ವರ್ಷವು ಕ್ರಿ. ಶ. 1636 ಆಗುತ್ತದೆ. ಆಗ ಗುರುವು ಕನ್ಯೆಯಲ್ಲೂ, ಶನಿಯು ಧನುರಾಶಿಯಲ್ಲೂ, ರಾಹುವು ಮಕರದಲ್ಲೂ ಇರಬಲ್ಲರು. ಚಂದ್ರನು ಇಪ್ಪತ್ತೇಳು ದಿನಗಳಿಗೊಮ್ಮೆ ಹೇಗೂ ಕುಂಭರಾಶಿಗೆ ಬರುವನು. ಈ ಮಧ್ಯೆ ಕುಜ ರವಿ ಬುಧರು ವೃಶ್ಚಿಕದಲ್ಲೂ ಸಂಚರಿಸುವ ಸಾಧ್ಯತೆಯಿದೆ. ಜಾತಕದಲ್ಲಿ ಕವಿಯು ಶುಕ್ರನ ಸ್ಥಾನವನ್ನು ನಿರ್ದೇಶಿಸಿಲ್ಲವಾದರೂ ಕಾಲನಿರ್ಣಯಕ್ಕೆ ಅದು ಬಾಧಕವಾಗದು.
ಎರಡನೆಯ ಕೃತಿಯಾದ 'ಕಾವೇರಿ' ಕೂಡ ಹೆಚ್ಚು ಕಡಮೆ ಇದೇ ಕಾಲದಲ್ಲಿ ರಚಿತವಾಗಿರಬೇಕು. ಆದರೆ 'ದೇವೀ ಮಹಾತ್ಮೆ'ಯೆಂಬ ಗದ್ಯಗ್ರಂಥ ಇವೆರಡಕ್ಕಿಂತಲೂ ಪ್ರಾಚೀನವಾದುದೆಂಬುದರಲ್ಲಿ ಸಂದೇಹವಿಲ್ಲ. ಭಾಷೆಯಲ್ಲಿ ತುಸು ಪ್ರಾದೇಶಿಕ ಭಿನ್ನತೆಯೂ ಇದ್ದಂತೆ ಕಾಣುತ್ತದೆ.
ಅರ್ಥಾನ್ವೇಷಣೆ :
ಉಪಲಬ್ಧವಾಗಿರುವ ಮೂರು ಪ್ರಾಚೀನತುಳುಗ್ರಂಥಗಳ ಭಾಷೆ 'ಪಳಂತುಳು' ವಾದ್ದರಿಂದ, ಅದರ ಅರ್ಥವನ್ನು ತಿಳಿಯಲು ಮ್ಯಾನರ್ನ ಕೋಶ ಪ್ರಯೋಜನಕಾರಿ ಯಾಗಲಿಲ್ಲ; ಪಣಿಯಾಡಿಯವರ ವ್ಯಾಕರಣವೂ ಸಹಕಾರಿಯಾಗಲಿಲ್ಲ, ಇತರ ಸಗೋತ್ರ ಭಾಷೆಗಳಲ್ಲಿಯ ಸಾಮ್ಯಪದಗಳನ್ನು ಬೇಟೆಯಾಡಿ ತನ್ಮೂಲಕ ಮೂಲಾರ್ಥವನ್ನು ಹುಡುಕುವ ಪ್ರಯತ್ನಮಾಡಬೇಕಾಯಿತು. ಕನ್ನಡ-ತಮಿಳು-ಮಲೆಯಾಳ ನಿಘಂಟುಗಳ ಸಹಾಯವೂ ಬೇಕಾಯಿತು. ಸುಮಾರು ಎರಡುಸಾವಿರಕ್ಕೂ ಮಿಕ್ಕಿದ ಅಪೂರ್ವಪದಗಳು ಉಪಲಬ್ಧವಾದುವು. ಕೆಲವೊಮ್ಮೆ ಯಾವ ಭಾಷೆಯಲ್ಲೂ ಸಾಮ್ಯಪದಗಳು ಸಿಗದಿದ್ದಾಗ, ಕನ್ನಡ, ಸಂಸ್ಕೃತ, ಭಾಗವತಗಳನ್ನು ಮುಂದಿಟ್ಟುಕೊಂಡು ಸಂದರ್ಭ ನೋಡಿ ಅದರ ಅರ್ಥವನ್ನು ಊಹಿಸಿ ಬರೆಯಬೇಕಾಯಿತು. ಊಹೆಗೂ ನಿಲುಕದ ಪದಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ.
ತುಳುಭಾಗವತದಲ್ಲಿ ಒಂದೆಡೆ - `ವಿಶಾ ಪೋಲಾಂದೆ ಮಹೀಶೆ' ಎಂಬ ವಾಕ್ಯವಿದೆ. ವಿಶಾ ಎಂದರೆ ಏನು? ಸರಿಯಾಗಿ ಅರ್ಥವಾಗಲಿಲ್ಲ; ಆ ದಿನವಿಡೀ ಅದೇ ನನ್ನ ತಲೆಯಲ್ಲಿತ್ತು. ಸಂಜೆ ಎಡನೀರು ಸಂಕ ದಾಟುತ್ತಿದ್ದಾಗ ಒಂದು ಘಟನೆ ನಡೆಯಿತು. ಆ ಕಡೆಯಿಂದ ಒಂದು ಲಾರಿ ಬರುತ್ತಿತ್ತು. ನನ್ನ ಹಿಂದೆ ಬರುತ್ತಿದ್ದ ವೃದ್ಧೆಯೊಬ್ಬಳು ಆಕೆಯ ಒಟ್ಟಿಗಿದ್ದ ಮಗುವಿನೊಡನೆ ಬೀಸ ಬಲ್ಲ, ಲಾರಿ ಬರ್ಪುಂಡು (ಬೇಗನೆ ಬಾ, ಲಾರಿ ಬರುತ್ತಿದೆ) ಎಂದಳು. `ವಿಶಾ ಪೋಲ-ಬೀಸ ಬಲ್ಲ' ಈ ಮಾತುಗಳಲ್ಲಿ ವಿಶಾಕ್ಕೂ ಬೀಸಕ್ಕೂ ಏನಾದರೂ ಸಂಬಂಧವಿರಬಹುದೇ ಎಂದು ಯೋಚಿಸಿದೆ. ನೇರವಾಗಿ ಮನೆಗೆ ಹೋದೆ. ಎಲ್ಲೆಲ್ಲಿ ವಿಶಾ ಎಂಬ ಪದ ಬಳಕೆಯಾಗಿದೆಯೋ ಅಲ್ಲೆಲ್ಲ ಬೀಸ (ಬೇಗ) ಎಂಬ ಅರ್ಥ ಹೊಂದಿಕೆಯಾಯಿತು.
ತುಳುಭಾಗವತದಲ್ಲಿ 'ಕುಡಿಕೂರೆ' ಎಂಬೊಂದು ಪದವಿದೆ. ಕೃಷ್ಣನು ದ್ವಾರಕೆಗೆ ಹೋಗುವ ಸಂದರ್ಭದಲ್ಲಿ ಆತನನ್ನು ಸ್ವಾಗತಿಸುವುದಕ್ಕಾಗಿ ಕುಡಿಕೂರೆಯನ್ನು ಹಿಡಿದಿದ್ದ ರಂತೆ. ಕುಡಿಕೂರೆಯ ಅರ್ಥ ನನಗೆ ಒಗಟಾಯಿತು. ಒಮ್ಮೆ ಪಾಡಿಯಿಂದ ಎಡನೀರಿಗೆ ಭೂತದ ಮೆರವಣಿಗೆ ಬರುತ್ತಿತ್ತು. ಅವರಲ್ಲೊಬ್ಬನನ್ನು ಕರೆದು `ಕುಡಿಕೂರೆ' ಎಂದರೇನು ಎಂದು ವಿಚಾರಿಸಿದೆ. ಆತನಿಂದ ನನಗೆ ಸರಿಯಾದ ಉತ್ತರ ಸಿಕ್ಕೀತು ಎಂಬ ಭರವಸೆ ಇರಲಿಲ್ಲ. ಆದರೆ, ಆತ ಹೇಳಿದ ಕುಡಿಕೂರೆ ಅಂದರೆ ಮನುಷ್ಯಾಕೃತಿಯ ಚಿತ್ರವುಳ್ಳ ಒಂದು ತರಹದ ಬಾವುಟ. ಹಿಂದೆ ನಾವು ಭೂತದ ಮೆರವಣಿಗೆಯಲ್ಲಿ ಅದನ್ನು ಬಳಸು ತ್ತಿದ್ದೆವು. ಈಗ ಕೆಲವು ವರ್ಷದಿಂದ ಅದನ್ನು ಹೊರಲು ಜನವಿಲ್ಲ; ಹಾಗೆ ಕೈಬಿಟ್ಟಿದ್ದೇವೆ ಎಂಬ ಮಾತುಗಳಿಂದ ನನಗೆ ಆಶ್ಚರ್ಯವಾಯಿತು. ಕುಡಿಕೂರೆಯ ಸರಿಯಾದ ಅರ್ಥ ಆಗ ನನಗೆ ದೊರೆಯಿತು.
`ತುರಗಮೇಧೊಮಿ ಮುಕ್ಕಳ್ ಸಲ್ಪೋಸ್ಟ್' ಎಂಬ ಪದ್ಯದಲ್ಲಿ 'ಮುಕ್ಕಳ್' ಅರ್ಥವಾಗಲಿಲ್ಲ. ಒಮ್ಮೆ ಮಧೂರು ಉಳಿಯತ್ತಾಯರ ಮನೆಗೆ ಹೋಗಿದ್ದಾಗ, ನನ್ನ ಮಿತ್ರ ಶ್ರೀ ಕೋಟೆಕುಂಜ ನಾರಾಯಣ ಶೆಟ್ಟರು ಅಲ್ಲಿ ಕಾಣಸಿಕ್ಕಿದರು. ದಾನೆ ಸೆಟ್ರೆ, ಎಂಚ ಉಳ್ಳರ್? (ಏನು ಶೆಟ್ರೆ? ಹೇಗಿದ್ದೀರಿ) ಎಂದು ಕೇಳಿದೆ. ಇಂಚ ಉಳ್ಳೆಂದೆ ಮುಳ್ಪ ಮುಕ್ಕೋಳ್ ಉಂಡೊಂದು (ಹೀಗೆ ಇದ್ದೇನೆ ಇಲ್ಲಿ 'ಮುಕ್ಕೋಳ್' ಉಣ್ಣುತ್ತಾ) ಎಂದು ನಗುತ್ತಾ ಹೇಳಿದರು. ಮುಕ್ಕೋಳು ಪದ ನನಗೆ ಹೊಸದು. ಅವರಲ್ಲೇ ಅದರ ಅರ್ಥ ಕೇಳಿದೆ. ಮುಕ್ಕೋಳ್ ಅಂದ್ರೆ ಮೂರು ಬಾರಿ ಎಂದರ್ಥ ಎಂದರು. ಈ ಮುಕ್ಕೋಳುವೇ ತುಳುಭಾಗವತದಲ್ಲಿ 'ಮುಕ್ಕಳ್' ಆಗಿದೆಯೆಂದು ಊಹಿಸಲು ನನಗೆ ಕಷ್ಟವಾಗಲಿಲ್ಲ.
ಹೀಗೆ ತುಳು ಭಾಗವತದ ಅರ್ಥಾನ್ವೇಷಣೆಯ ಕಾರ್ಯದಲ್ಲಿ ನಮ್ಮೂರಿನ ಅನೇಕ ಜನಪದರು ನನಗೆ ಸಹಕರಿಸಿದ್ದಾರೆ. ಆದರೂ `ಒಂಪಾಲೊ, ಶರಭಾಕ್ತಿನ, ಕಾಯಕಲ್ಪನ, ಬಲಸ್ಸ್, ಓವತ್ತೆ, ಓಡೆ, ಪಾರ್ಪಡ್, ಕೈಪಡನಾ, ಧೂಸ, ಪುಳೆಲ್ಪ್ಪು, ಮುಡಮಿತ್ತ್, ಮುಡುಪಾಯ್' ಇತ್ಯಾದಿ ಪದಗಳು ಭಾಗವತದಲ್ಲೂ, `ಅಂಜಿ (ಹೆದರು ಎಂದರ್ಥವಲ್ಲ), ಅತ್ರೈಳೆ, ತಿರಿ (ಚಿಗುರು ಎಂಬರ್ಥವಲ್ಲ), ಮೆಲ್ಲಿ, ವಾಂತಾರ' ಇತ್ಯಾದಿ ಪದಗಳು ಕಾವೇರಿಯಲ್ಲೂ, 'ಒಸ್ದ್ನ್, ವಲ್ಲಚರ್ಮೊ, ಕಬ್ಯಲ' ಮುಂತಾದ ಪದಗಳು ದೇವೀಮಹಾತ್ಮೆ ಯಲ್ಲೂ ಅರ್ಥವಾಗದೆ ಉಳಿದಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.
[`ಸಾರ್ಥಕ' - ಪ್ರೊ. ಎಂ. ಮರಿಯಪ್ಪ ಭಟ್ಟ ಸಂಸ್ಮರಣ ಗ್ರಂಥ, ಸಂ.: ಡಾ. ಶ್ರೀಕೃಷ್ಣ ಭಟ್, ಅರ್ತಿಕಜೆ, ಚೆನ್ನೈ, 1995 -ಇದರಲ್ಲಿ ಪ್ರಕಟಿತ]
`ತುಳುಭಾಷೆಗೆ ಲಿಪಿಯಿಲ್ಲ. ತುಳುಭಾಷೆಯಲ್ಲಿ ಪ್ರಾಚೀನ ಲಿಖಿತ ಸಾಹಿತ್ಯವಿಲ್ಲ' - ಎಂಬ ಇದುವರೆಗಿನ ಸಂಶೋಧಕರ ಮಾತನ್ನು ಅಲ್ಲಗಳೆದು `ಶ್ರೀಭಾಗವತೊ' ಪ್ರಾಚೀನ ತುಳುಕಾವ್ಯವು ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ 1984ರಲ್ಲಿ ಪ್ರಕಟವಾದಾಗ ತುಳುಸಾಹಿತ್ಯಚರಿತ್ರೆಯಲ್ಲಿಯೇ ಒಂದು ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.
`ಶ್ರೀಭಾಗವತೊ' ಪ್ರಕಟವಾದ ಬಳಿಕ, ಇತ್ತೀಚೆಗೆ ನಮ್ಮ ಅವಗಾಹನೆಗೆ ಬಂದ ಇನ್ನೊಂದು ಪ್ರಾಚೀನಕೃತಿಯೇ `ಕಾವೇರಿ' ತುಳುಕಾವ್ಯ. ತಾಡವಾಲೆಗಳಲ್ಲಿ ಬರೆಯ ಲಾಗಿದ್ದ ಈ ಕೃತಿಯು ಅಪೂರ್ಣವಾಗಿದ್ದರೂ, ದೊರೆತಷ್ಟು ಭಾಗವು ಅತ್ಯಂತ ಕುತೂಹಲಕಾರಿಯಾಗಿದೆ. ಇದನ್ನು ಬರೆದ ಕವಿಯು ಯಾರು? ಈತ `ಶ್ರೀಭಾಗವತೊ' ವನ್ನು ಬರೆದ ಮಹಾಕವಿ ವಿಷ್ಣುತುಂಗನ ಸಮಕಾಲೀನನೆ? ಇತ್ಯಾದಿ ವಿಚಾರಗಳು ಇನ್ನೂ ತಿಳಿದುಬಂದಿಲ್ಲ. ಇದರ ಪ್ರಾರಂಭದ 119 ವಾಲೆ(ಈಠಟಠ)ಗಳೂ, ಮಧ್ಯಭಾಗದ 23 ವಾಲೆಗಳು (ಈಠಟಠ 211ರಿಂದ 233 ವರೆಗೆ) ಕೊನೆಯ ಕೆಲವು ವಾಲೆಗಳೂ ನಷ್ಟವಾಗಿವೆ. ಒಟ್ಟು 15 ಅಧ್ಯಾಯಗಳಿರಬೇಕಾದ ಈ ಕಾವ್ಯದ 6ನೆಯ ಅಧ್ಯಾಯದ ಕೊನೆಯ ಭಾಗ, 7-8 ಅಧ್ಯಾಯಗಳ ಸಮಗ್ರಭಾಗ, 9ನೆಯ ಅಧ್ಯಾಯದ ಮುಕ್ಕಾಲು ಭಾಗ, 10ನೆಯ ಅಧ್ಯಾಯದ ಕೊನೆಯ ಭಾಗ ಮತ್ತು 11ನೆಯ ಅಧ್ಯಾಯದ ಒಟ್ಟು ಆರು ಪದ್ಯಗಳು ಹೀಗೆ ಇಷ್ಟು ಮಾತ್ರ ನಮಗೆ ಸಿಕ್ಕಿವೆ. ಅಂತೂ ಸಮಗ್ರಕಾವ್ಯದ ಮೂರನೆಯ ಒಂದು ಭಾಗ ಮಾತ್ರ ನಮಗೆ ಸಿಕ್ಕಿದೆಯೆಂದು ಹೇಳಬಹುದು.
ಕವಿ-ಕಾಲ ವಿಚಾರ:
`ಕಾವೇರಿ' ಕಾವ್ಯದ ಪ್ರಾರಂಭದ ಭಾಗವು ನಮಗೆ ಲಭ್ಯವಾಗದೆ ಹೋದುದರಿಂದ ಈ ಕೃತಿಯನ್ನು ಬರೆದ ಕವಿಯ ಬಗ್ಗೆ ಏನನ್ನು ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಅಂತೂ ಕಾವ್ಯದ ಭಾಷೆ ಮತ್ತು ಬಳಸಿರುವ ಛಂದಸ್ಸುಗಳನ್ನು ಪರಿಶೀಲಿಸಿದಾಗ ಬಹುಮಟ್ಟಿಗೆ ವಿಷ್ಣುತುಂಗನ `ಶ್ರೀಭಾಗವತೊ' ಕೃತಿಯ ಶೈಲಿಯನ್ನೇ ಇದು ಹೋಲುತ್ತದೆ. ಆದರೆ ಅನೇಕ ಪದಪ್ರಯೋಗಗಳು `ಶ್ರೀಭಾಗವತೊ'ದಲ್ಲಿ ಇರುವುದಕ್ಕಿಂತ ಭಿನ್ನರೂಪ ದಲ್ಲಿವೆ. ಕಾವ್ಯಭಾವಗಳು ಮತ್ತು ಅಲಂಕಾರಗಳು ಕೆಲವೆಡೆ ವಿಷ್ಣುತುಂಗನ ರಚನೆಗಿಂತಲೂ ಚೆನ್ನಾಗಿವೆ. ಛಂದೋರಚನೆಯಲ್ಲಿ ವಿಷ್ಣುತುಂಗನಿಗಿರುವಷ್ಟು ಶಾಸ್ತ್ರೀಯ ಶ್ರದ್ಧೆ ಈತನಿಗಿದ್ದಂತೆ ಕಾಣಿಸುವುದಿಲ್ಲ. ಈಯೆರಡು ಕಾವ್ಯಗಳ ಶೈಲಿಗಳಲ್ಲಿಯೂ ಬಹುಮಟ್ಟಿನ ಹೋಲಿಕೆ ಹಾಗೂ ಅಷ್ಟೇ ವ್ಯತ್ಯಾಸಗಳೂ ಇರುವುದರಿಂದ ಯಾರಿಂದ ಯಾರು ಪ್ರಭಾವಿತರಾದರು ಎಂದು ಸದ್ಯ ದೊರೆತಿರುವ ಆಧಾರಗಳಿಂದ ಊಹಿಸಲು ಅಸಾಧ್ಯವಾಗಿದೆ. ಅಂತೂ ಭಾಷೆಯ ಆಧಾರದಿಂದ ಹೇಳುವುದಾದರೆ ಈತ ಕಾಸರಗೋಡು ಪರಿಸರದಲ್ಲಿ ಜೀವಿಸಿದ್ದ ಕವಿಯೆಂದು ಊಹಿಸಬಹುದು.
ಪ್ರಾಜೋತ್ಪತ್ಯ ಸುವತ್ಸರೊಂಟೀ ಕಥೆನೊರಿ ಬ್ರಾಹ್ಮಣ ಮುಖ್ಯೆ
ಈ ಜೀವಿಕುಳೇನನುರಾಗತೆಟ್ ಮಹಲೋಕ ಹಿತೊಂಕ್
ವ್ಯಾಜೋ ತೆರಿತಾತ್ ರೆಚೀತ್ಣವೂ ಸರ್ವಜ್ಞೆರೆ ಕೇಂಡ್
ಸೂಜೀ ಮುನೆತಾತ ತರೋ ವರನಂ(ದೊಮೆ ತಿದರ್್)ಕ್ಣಯ್ಯೋ
(ಅಧ್ಯಾಯ - 10, ಪದ್ಯಗಳು 61)
ಈ ಪದ್ಯದ ಆಧಾರದಂತೆ ಒಬ್ಬಾತ ಬ್ರಾಹ್ಮಣ ಕವಿಯು ಪ್ರಜೋತ್ಪತ್ತಿ ಸಂವತ್ಸರದಲ್ಲಿ ಈ ಕಾವ್ಯವನ್ನು ಬರೆದು ಮುಗಿಸಿದನೆಂದು ತಿಳಿದುಬರುತ್ತದೆ. ವಿಷ್ಣುತುಂಗನ ಕಾಲವು ಕ್ರಿ.ಶ. 1636 (ನೋಡಿ - ಶ್ರೀಭಾಗವತೊ - ಪ್ರಸ್ತಾವನೆ - ಪು. 8-9) ಎಂದು ನಿರ್ಧರಿಸುವುದಾದರೆ ಆ ಶತಮಾನದಲ್ಲಿ ಎರಡು ಬಾರಿ (1631ರಲ್ಲಿ ಮತ್ತು 1691ರಲ್ಲಿ) ಪ್ರಜೋತ್ಪತ್ತಿ ಸಂವತ್ಸರಗಳು ಬರುತ್ತವೆ. ಈ ಕವಿ ಅದೇ ಶತಮಾನದವನು ಎಂದು ಊಹಿಸುವುದಾದರೆ, ಆಯೆರಡರಲ್ಲಿ ಯಾವುದಾದರೊಂದು ಸಂವತ್ಸರದಲ್ಲಿ ಈ ಕಾವ್ಯವು ಬರೆದು ಪೂತರ್ಿಯಾಗಿರಬಹುದು. ಕವಿಯು ಪ್ರತಿ ಅಧ್ಯಾಯದ ಆದಿಯಲ್ಲಿ ಮತ್ತು ಅಂತ್ಯ ದಲ್ಲಿ ತಪ್ಪದೆ ಶಿವನನ್ನು ಸ್ತುತಿಸಿರುವುದರಿಂದ ಈತ ಶೈವಕವಿಯೆಂದು ತಿಳಿಯಬಹುದು.
ಅಂತೂ ಈಗ ದೊರೆತಿರುವ ಈಯೆರಡು ಕಾವ್ಯಗಳ ಆಧಾರದಿಂದ ಕ್ರಿ.ಶ. ಸುಮಾರು 16-17ನೇ ಶತಮಾನಗಳಲ್ಲಿ ತುಳುವಿನಲ್ಲಿ ಸಾಹಿತ್ಯವ್ಯವಸಾಯ ನಡೆದಿತ್ತೆಂದೂ ತುಳುವಿಗೆ ತನ್ನದೇ ಆದ ಒಂದು ಕಾವ್ಯಪರಂಪರೆ ಇತ್ತೆಂದೂ ನಾವು ನಿಧರ್ಾರವಾಗಿ ಹೇಳಬಹುದು.
`ಕಾವೇರಿ' ಕಾವ್ಯದ ತುಳು ಭಾಷಾಪ್ರಭೇದ:
`ಶ್ರೀಭಾಗವತೊ' ಮತ್ತು `ಕಾವೇರಿ' ಕಾವ್ಯಗಳ ಭಾಷೆಯಲ್ಲಿ ಬಹುತೇಕವಾದ ಹೋಲಿಕೆ ಕಂಡುಬಂದರೂ ಕೆಲವೊಂದು ಪದರೂಪಗಳಲ್ಲಿ ಅಲ್ಪಸ್ವಲ್ಪವಾದ ವ್ಯತ್ಯಾಸವಿದೆ. ಉದಾ:
ಕಾವೇರಿ ಶ್ರೀಭಾಗವತೊ
ಚುತ್ತ (ಸುತ್ತಲೂ) ಚುತ್ಥ
ಪತ್ತ (ಎಲ್ಲ) ಪತ್ಥ
ತಾಲ್ವರೆ (ತಪ್ಪಲು ಪ್ರದೇಶ) ತಾಳ್ವರೆ
ಅಲ್ಗ್ (ಮುಳುಗು) ಅಂÙಳ್ಗ್
ಕÙಳೆ (ಜಲಾಶಯ) ಕಯ
ಒÙಳ್, ಒÙಳ್ಗ್ (ಹರಿಯು) ಒÙಳ್
ನೆನ್ನಿ (ನನ್ನನ್ನು) ಎನಿನ್, ಎನಿನಿನ್
ಇಯ್ಯಿ, ನೀಯಿ (ನೀನು) ಈಯ್ಯ್, ನೀಯ್ಯ್
ಮೆನ (ನನ್ನ) ಎನ, ನೆನ
ನೆನ್ಕ್ (ನನಗೆ) ಎನಿಕ್, ನನ್ಕ್
ಅನುರಾಗೊ (ಪ್ರೀತಿ) ಅನರಾಗೊ
ಪುಲಂಜ್ (ತಿಳಿಯು) ಪುಲೆಂಜ್
`ಶ್ರೀಭಾಗವತೊ'ದಲ್ಲಿರುವಂತೆ ÙರÙಳಾಕ್ಷರ ಮತ್ತು ಸ್ಟ್ ಧ್ವನಿಮಾಗಳು ಈ ಕಾವ್ಯ ದಲ್ಲಿಯೂ ಇವೆ. ಪದಾದಿಯ ವ್ಯಂಜನವು ಎಕಾರಾಂತವಾಗಿರುವ ಅನೇಕ ಉದಾ ಹರಣೆಗಳು ಸಿಗುತ್ತವೆ. ಉದಾ: ಜೆನೊ, ಜೆಗತ್ತ್, ಗೆಂಗೆ, ರೆಶ್ಮಿ, ರೆಕ್ಷಿಪು, ರೆಚಿಪು ಇತ್ಯಾದಿ. ಆದರೆ ಪಾದಪೂರಣೆಗಾಗಿ ಅಲ್ಲಲ್ಲಿ ಬರುವ ``ಆಪು'', ``ಅತ್'' ಮುಂತಾದ ಪದಗಳು ಮಾತ್ರ ಅಷ್ಟಾಗಿ ಕಾಣಿಸುವುದಿಲ್ಲ. ಅನೇಕ ಸಮಸ್ತಪದಗಳಲ್ಲಿ ಪೂವರ್ೋತ್ತರಪದಗಳು ಸ್ಥಾನಪಲ್ಲಟ ಹೊಂದಿದ ಕೆಲವೊಂದು ಉದಾಹರಣೆಗಳನ್ನು ಇಲ್ಲಿ ಕಾಣಬಹುದು. ಉದಾ: ಮಂಡಲಜಗೊ (ಜಗನ್ಮಂಡಲ); ಕಂಧರಾಶಶಿ (ಶಶಿಕಂಧರ); ಕಂಜುÙಳೆ (ಉÙಳೆಕಂಜಿ); ಪುಂಗದ್ವಿಜೇಂದ್ರ (ದ್ವಿಜೇಂದ್ರಪುಂಗವ) ಇತ್ಯಾದಿ.
ಕಾವೇರಿ ಕಾವ್ಯದ ಮೂಲವಸ್ತು:
ಕಾವೇರಿ ಕಾವ್ಯದ ಮೂಲವಸ್ತುವು ಸ್ಕಾಂದಪುರಾಣಾಂತರ್ಗತವಾದ ಕಾವೇರಿ ಮಹಾತ್ಮೆ. ಸಂಸ್ಕೃತದಲ್ಲಿ 15 ಅಧ್ಯಾಯಗಳಷ್ಟು ವಿಸ್ತಾರವಾದ ಕಾವೇರಿಯ ಕಥೆಯನ್ನು ಕವಿಯು ತುಳುಭಾಷೆಯಲ್ಲಿ ವಿವಿಧ ವೃತ್ತಗಳ ರೂಪದಲ್ಲಿ ಹೆಣೆದಿದ್ದಾನೆ. ಆದರೆ ಇದು ಸಂಸ್ಕೃತಮೂಲದ ತದ್ರೂಪ ಅನುವಾದವಲ್ಲ. ಕವಿಯು ತನಗೆ ಬೇಕಾದಲ್ಲಿ ಕಥೆಯನ್ನು ವಿಸ್ತರಿಸಿಕೊಂಡು ಬೇಡವೆನಿಸಿದಲ್ಲಿ ಸಂಕ್ಷೇಪಿಸಿಕೊಂಡಿದ್ದಾನೆ.
ಕನ್ನಡದಲ್ಲಿ `ಕಾವೇರಿ'ಯ ಕಥೆಯನ್ನು ವಣರ್ಿಸುವ ಕೃತಿಗಳು :
1. ಕಾವೇರಿಪುರಾಣ (ಭಾಮಿನಿ ಷಟ್ಪದಿ) - ಬೊಬ್ಬೂರು ರಂಗಕವಿ; 2. ಕಾವೇರಿ ಪುರಾಣ - ಗೊರೂರು ನರಸಿಂಹಾರ್ಯಕವಿ: 3. ಅಖಂಡ ಕಾವೇರಿಮಹಾತ್ಮೆ - ಮುಮ್ಮಡಿ ಕೃಷ್ಣರಾಜ; 4. ತುಲಾಕಾವೇರಿಮಹಾತ್ಮ್ಯೆ (ಗದ್ಯ) - ಚೆಲುವಾಂಬೆ; 5. ಕಾವೇರಿ ಮಹಾತ್ಮೆ (ಭಾಮಿನಿ ಷಟ್ಪದಿ) - ಮೈಪರ್ಾಡಿ ವೆಂಕಟ್ರಮಣಯ್ಯ; 6. ಸಹ್ಯಾದ್ರಿ ಖಂಡ (ಕವಿ? - ಸಂಧಿ 74-84) (ನೋಡಿ - ಸಹ್ಯಾದ್ರಿಖಂಡ - ಸಂ. ವೈ. ಸಿ. ಭಾನುಮತಿ - ಪೀಠಿಕೆ)
ತುಳು ಲಿಪಿ - ತಿಗಳಾರಿ ಲಿಪಿ:
ತುಳುಲಿಪಿಯೆಂಬ ರೂಢಿಯ ಹೆಸರನ್ನು ಹೊತ್ತ ಲಿಪಿಸಂಪ್ರದಾಯವೊಂದು, ಕೇರಳದಲ್ಲೂ - ತುಳುನಾಡಿನಲ್ಲೂ ಶತಮಾನಗಳ ಹಿಂದೆಯೇ ಪ್ರಚಾರದಲ್ಲಿದ್ದರೂ, ಆ ಲಿಪಿಯು ವೈದಿಕ-ಲೌಕಿಕ-ಸಂಸ್ಕೃತ ಸಾಹಿತ್ಯಗಳ ಬರವಣಿಗೆಗಾಗಿ ಮಾತ್ರ ಬಳಸಲ್ಪಡುತ್ತಿತ್ತೇ ವಿನಾ ತುಳುಭಾಷೆಯ ಉಲ್ಲೇಖಕ್ಕೆ ಅದನ್ನು ಬಳಸುತ್ತಿರಲಿಲ್ಲವಾದ್ದರಿಂದ ಅದನ್ನು ತುಳು ಲಿಪಿಯೆಂದು ಹೇಗೆ ಕರೆಯೋಣ ಎಂಬ ಸಂಶಯ ಹಲವರಲ್ಲಿ ಮೂಡದಿರಲಿಲ್ಲ. ಆದರೆ `ಶ್ರೀಭಾಗವತೊ' ತುಳು ಮಹಾಕಾವ್ಯವನ್ನು ಬರೆದ ತಾಡವಾಲೆಗಳು ಆ ಸಂಶಯವನ್ನು ನಮಗೆ ಪರಿಹರಿಸಿಕೊಟ್ಟಿವೆ. ಸುಮಾರು ಕ್ರಿ.ಶ. 16-17ನೆಯ ಶತಮಾನಗಳಲ್ಲಿ ತುಳು ಲಿಪಿಯನ್ನು ತುಳುಭಾಷೆಯ ಬರವಣಿಗೆಗೆ ಬಳಸುತ್ತಿದ್ದರು ಎಂಬುದು ಈ ಮೂಲಕ ಸಿದ್ಧಾಂತವಾದಂತಾಗಿದೆ. `ಶ್ರೀಭಾಗವತೊ'ವನ್ನು ಬರೆದ ಕವಿ ವಿಷ್ಣುತುಂಗನು ಕನ್ನಡ ಭಾಗವತದಿಂದ ಪ್ರೇರಿತನಾದವನು ಹಾಗಾಗಿ ಅವನಿಗೆ ಕನ್ನಡಲಿಪಿಯ ಪರಿಚಯ ವಿರಲೇಬೇಕು. ಆದರೂ ಅವನು ತನ್ನ ಕಾವ್ಯದ ಬರವಣಿಗೆಗೆ ಕನ್ನಡ ಲಿಪಿಯನ್ನು ಏಕೆ ಬಳಸಲಿಲ್ಲ? ಬಹುಶಃ ತಾನು ಬರೆಯುವ ತುಳುಕಾವ್ಯವನ್ನು ತುಳುಲಿಪಿಯಲ್ಲೇ ಬರೆಯುವುದು ಸೂಕ್ತ ಎಂದು ಅವನಿಗೆ ಅನಿಸಿರಬೇಕು. ವಿಷ್ಣುತುಂಗನು ಮಾಡಿದ ಈ ಲಿಪಿಕ್ರಾಂತಿಯ ಮೂಲಕ ತುಳುಲಿಪಿಯು ತನ್ನ ಹೆಸರಿನ ಸಾರ್ಥಕತೆಯನ್ನು ಪಡೆಯಿತು. ಇದೇ ಲಿಪಿಸಂಪ್ರದಾಯವು ಬಯಲುಸೀಮೆ ಮತ್ತು ಮಲೆನಾಡುಗಳಲ್ಲಿ ತಿಗಳಾರಿ ಲಿಪಿಯೆಂಬ ನಾಮಾಂತರದಿಂದಲೂ ಪ್ರಸಿದ್ಧವಾಗಿದೆ.
`ಕಾವೇರಿ' ಕಾವ್ಯದಲ್ಲಿ ಬರುವ ಅಲಂಕಾರ ಮತ್ತು ವರ್ಣನೆಗಳು:
ಕಂಬರ್ು ಸೇವಿತಿನಂದೊಮೀ ಕಥೆ ಮಿತ್ತ್ಮಿತ್ತತಿರಮ್ಯೊನಾ
ಕಂಬರ್ು ಖಂಡಿತ್ ಜುಂಹೆಕ್ತ್ತಕ್ಣಂದೊಮೀರವೆ ಛೇದಿತ್
ಇಂಬು ಮಾಂತ್ ಪಣ್ಪ್ಪೆರೀಶ್ವರ ಬುದ್ಧಿಕೊತ್ತಿ ಪ್ರಕಾರೊಮೇನ್
ಪಿಂಬುಟೀ ಕಥೆ ಕೇಂಡ್ಣಾಯಕ್ ಪಂಡ್ನಾತೆ ಫಲಂಕುಳು (9-9)
ಕೆಂಜೆಟೆಟ್ ಚಂದ್ರಮನ ಗೆಂಗೆನ ಧರೀತ್
ಕಂಜುÙಳೆಯ ಶೂಲೊ ಮರಿಕಂಕಣೊ ಕರೊಂಟ್
ನಿಂಜ ಭಸಿತಂ ತುಡೆತ್ ಚಾತರ್ುಡೆಕ್ ಚಮರ್ೋ
ಧ - ನಂಜಯಟ ಮುಷ್ಟಿ ಪಡೆಕೊಂಡಿ ಜಯಶಂಭು (7-3)
ಮುತ್ತ ಕುಡೆ ಸತ್ಯೆಯ ಚಾಮರೊಮಾ ಬಹು ಸಾರಸಹಸ್ತೊ
ನೃತ್ತೊಂತ ಚರಿತ್ರೊಮ ಗಂಧರ್ವವಧೂಕಿನ್ನರಗೀತೊ
ಸ್ತುತ್ಯೊಂಕುಳೆ ಪಾಡ್ಸ್ಟನೇಕ ರ್ಷೀ ಪರಿಸೇವಿತೆಯಾಸ್ಟ್
ಗಾತ್ರೊಂತಣಿಯಾದ್ರ್ರವರಾಂಬರೊಮಾ ಸುಮನೋಹರಿನ್ಚೂಯೆರ್ (8-27)
ಕಾಡ್ಟೆಯ್ಯಲ ಪಣ್ಫಲೊಂಕುಳೆ ಸೇವಿತಿಂಚಿಡೆಯಾಡ್ಕೀ
ಕೋಡಕಾಕೆನ್ಕೀರೆ ಸದ್ಗತಿ ವಕರ್್ಣೇತಲ ದುರ್ಲಭೋ
ನಾಡ್ ಸಂಚರಿತ್ಪ್ಪುಕೀ ನಿಧಿ ಡಕ್ಕ್ಣಂದೊಮೆ ಸ್ಟೀರೆನೀ
ಕೂಡೊಯೇರೆನ್ಕೀ ವಿಧಾತ್ರೆ ನಮೋಸ್ತು ಬ್ರಾಹ್ಮಣ ನಟ್ಟ್ಕೇ (9-57)
ದಾಯೊಂಕುಳು ವೊಂಜೆಕನಂತಫಲೋ ಸಂಪೂಣರ್ೊಮಿ ಮಾಂತ
ಬೀಯೊಂಕುಳೆಳೆ ತನ್ನೆ ಮಿರೇ ಕೊÙಳ್ಕೀ ಪರಿಶಿತ್ತಪು ತಾನೆ (9-69)
ಪುಣ್ಯೊಮುಳ್ಳ ಗುಣೊಂತ ಕಾವ್ಯೊಮಿ ಕೇಳಪಾ ಮತಿಹೀನೆರೇ -
ಕೆಣ್ಣೆ ಮುಟ್ಟ್ಸ್ಟಿ ಸೀಗೆತಂದೊಮೆ ಕುಂದ್ಸ್ಟ ಮತಿ ತಾÙಳ್ಸ್ಟ
ಕಣ್ಣ್ ಮುಚ್ಚ್ಸ್ಟ್ ಧಾತು ಕುಂದ್ಸ್ಟ್ ಬುದ್ಧಿ ಬಿಂಹಲೊಮಾಸ್ಟ್ತ್
ತಣ್ಣೆನಾಕ್ಡ್ಸ್ಟೀ ನರೀನೆಯ್ತಂದೊಮಿಂಚ ಪ್ರಕಾಶಿಪೇ (11-3)
ಕ್ಷೀರೊ ಸರ್ಕರೆ ನೈಯಿ ವುಂಬೆನಿ ನಿಂಜ ಕೋರ್ಸ್ಟ್ ಮಾತುವೀ
ಸಾರೊಮಾಕ್ಣ ಮಾಂತ ಚೋರ್ಸ್ಟ್ ದೋಷೊ ಸಂಗ್ರಹಿತೊಳ್ಳನಾ
ಧಾರಿಣೀಟರಿಪೇತ ತುಲ್ಯಕೆರಾಸ್ಟ್ನಾಕುಳು ದೂಷಿಪೀ
ಸಾರೊ ಪಿನ್ಕಿ ಮಹತ್ತುಕುಳುಂಬೇ ಸಾರೊ ಪಿಂಬೆರ್ ಸತ್ಯೊನಾ (11-5)
ಹಸ್ತವರಪಲ್ಲವೊ ಸುಕನ್ನಟಿಟ್ ಚೂಸ್ಟ್
ಸ್ವಸ್ಥಮುಖೊಮಾಕ್ಷೆಣೊಂಟೀಕ್ಷಿಪುಕ್ಣಂದೊ
ವಿಸ್ತರಿಪೆನೊಂಜುಪಮೆ ಶಾಸ್ತ್ರಕೃತಿಟುಳ್ಳಾ.... (7-32)
ಸಾರಶುಭೆ ಮೆಂಚಿ ಮುಗಲ್ತ್ತುಡೆಕ್ಣಂದೊ
ಭೋರನಿಳತೌತರ್್ ಮುನಿಕಾರ್ ನಿಜೊಮಾಯೆರ್ (7-37)
ಆವೆಡಿನ ಭಾಂಡೊ ಲಣಾಬ್ಧಿಟ್ಡಿನಂದೊ
ಪೋವೊÙಳಿಯನೆತ್ತ್ ಮಹಪಾತಕೊ ಮುನೀಂದ್ರಾ (7-46)
ಹೀಗೆ ಕವಿಯು ನಮ್ಮ ಸುತ್ತುಮುತ್ತಲಿನ ವಸ್ತುಗಳನ್ನೇ ಆಯ್ದುಕೊಂಡು ಹೋಲಿಕೆ ಗಳನ್ನು ಮತ್ತು ವರ್ಣನೆಗಳನ್ನು ಹೆಣೆಯುತ್ತಾನೆ, ಕೆಲವು ಸ್ತುತಿಗಳನ್ನು ಒಗಟಿನಂತೆ ರಚಿಸಿ, ಓದುಗರ ವಿಚಾರವನ್ನು ಕೆಣಕುವ ಪ್ರಯತ್ನವನ್ನೂ ಮಾಡಿದ್ದಾನೆ:
ಸಂಧ್ಯೊಟುದ್ಭವಿತ್ತ್ತ್ಣಾರೆನ ಕಂದವಾಕ್ಸುಧೆ ಸೇವಿತ್
ಬಂಧನಂ ಕಳೆಸ್ಟಾತ್ಮಸನ್ಮತಿ ಸಂಧಿತೀ ಪಿತಭಾಯರ್ೆನಾ
ಬಂಧುಮಿತ್ರನ ಪುತ್ರಜ್ಯೇಷ್ಠನ ಧರ್ಮಪತ್ನಿನಿ ಧ್ಯಾನಿತ್
ಗ್ರಂಥೊಮೀ ರಚಿಪುಪ್ಪೆ ಲೋಕೆರೆ ಬಂಧನಕ್ಷಯೊಂಕಾಸ್ಟ್ತ್ (8-4)
ದೆಶಮೂಲವತಾರಸುತಾತ್ಮಜನಾ ತನಯನ್ ಸುಕುಮಾರ
ದೆಶೆ ತಪ್ಪೊಸ್ಟ್ಣಾಯನ ಸೋದರನಾ ರಿಪುತಾತಕುಲೇಶಾ
ಶಶಿವಕ್ತ್ರೆನಿ ವಂಚಿತಿ ದಾನವಕ್ ಸತಿನಿನ್ ಕೊÙಳ್ಸ್ಟ್ತ್ತೀ
ದೆಶಹಸ್ತತನೋಜಪದಾಂಬುಜೊಮೀನಭಿವಂದಿತೊಳ್ಪ್ಪೆ (9-5)
ಇವು ಕುಮಾರವ್ಯಾಸನ ``ವೇದಪುರುಷನ ಸುತನ ಸುತನ ಸಹೋದರನ.....'' ಎಂಬ ಪದ್ಯವನ್ನು ನೆನಪಿಗೆ ತರುತ್ತವೆ.
`ಕಾವೇರಿ' ಕಾವ್ಯದ ತಾಡವಾಲೆಯ ಪ್ರತಿ:
`ಕಾವೇರಿ' ಕಾವ್ಯದ ತಾಡವಾಲೆಯ ಏಕೈಕ ಪ್ರತಿಯು ಕಲ್ಲಿಕೋಟೆ ವಿಶ್ವವಿದ್ಯಾ ನಿಲಯದ ಹಸ್ತಪ್ರತಿಸಂಗ್ರಹಾಲಯದಲ್ಲಿದೆ. ಗ್ರಂಥದ ಪೂವರ್ೋತ್ತರ ಭಾಗಗಳು ಬಹಳಷ್ಟು ನಷ್ಟವಾಗಿವೆ. ತಾಡವಾಲೆಯು ಬಹಳ ಹಳೆಯದಾಗಿದ್ದರೂ ಕವಿಯ ಮೂಲಪ್ರತಿಯಂತೆ ಕಾಣಿಸುವುದಿಲ್ಲ. ಅಲ್ಲಲ್ಲಿ ಹಲವಾರು ಅಕ್ಷರಸ್ಖಾಲಿತ್ಯಗಳೂ ಛಂದೋಭಂಗವುಳ್ಳ ವೃತ್ತಗಳೂ ಇದರಲ್ಲಿವೆ. ತುಳುಲಿಪಿಯೆಂಬ ರೂಢಿಯ ಹೆಸರುಳ್ಳ (ಕೇರಳದಲ್ಲಿ ಇದನ್ನು ತುಳು ಮಲಯಾಳಂ ಲಿಪಿಯೆಂದು ಕರೆಯುತ್ತಾರೆ) ಲಿಪಿಶೈಲಿಯೊಂದರಲ್ಲಿ ಬರೆಯಲಾದ ಈ ಕಾವ್ಯವನ್ನು ಕನ್ನಡಕ್ಕೆ ಲಿಪ್ಯಂತರಮಾಡುವಾಗ ಪಾಠನಷ್ಟವಾದ ಭಾಗಗಳಲ್ಲಿ ಸಾಧ್ಯವಿರು ವಷ್ಟು ಮಟ್ಟಿಗೆ ಊಹಾತ್ಮಕಪರಿಷ್ಕರಣವನ್ನು ಮಾಡಿ ಅವನ್ನು ಕಂಸದೊಳಗೆ ಕೊಡಲಾಗಿದೆ. ಸಂಶಯವೇ ಉಳಿಯುವಲ್ಲಿ ಊಹಿಸಿದ ಪಾಠಗಳನ್ನು ಸೇರಿಸಿ ಪಾಠಾಂತರಗಳನ್ನು ಕೊಡಲಾಗಿದೆ.
ಇಂತಹ ಅಮೂಲ್ಯಕೃತಿಯನ್ನು ಸಂಪಾದಿಸಿ ಪ್ರಕಟಿಸಲು ಅನುಮತಿಯನ್ನಿತ್ತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೂ ಈ ವಿಚಾರವಾಗಿ ಪೂರ್ಣಸಹಕಾರ ನೀಡಿದ ಡಾ. ಎನ್. ವಿ. ಪಿ. ಉಣಿತ್ತಿರಿಯವರಿಗೂ ಇದರ ಪ್ರಕಟನೆಯ ಭಾರವನ್ನು ವಹಿಸಿದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿದರ್ೇಶಕ ರಾದ ಪ್ರೊ. ಕು. ಶಿ. ಹರಿದಾಸ ಭಟ್ಟರಿಗೂ ನನ್ನ ಅನಂತ ಕೃತಜ್ಞತೆಗಳು. ಈ ಕಾವ್ಯವನ್ನು ತಾಡವಾಲೆಯಿಂದ ಕನ್ನಡಕ್ಕೆ ಲಿಪ್ಯಂತರ ಮಾಡುವಲ್ಲಿ ಹಾಗೂ ಶಬ್ದಾರ್ಥಸೂಚಿಯನ್ನು ತಯಾರಿಸುವಲ್ಲಿ ನನ್ನ ಮಿತ್ರರಾದ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು ಸತತವಾದ ಸಹಕಾರ ನೀಡಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಈ ಹಸ್ತಪ್ರತಿಯ ವಿಚಾರ ತಿಳಿದಂದಿನಿಂದ ಈ ಕೃತಿಯ ಬಗೆಗೆ ಅಭಿಮಾನವನ್ನು ವ್ಯಕ್ತಪಡಿಸಿ ಈ ಗ್ರಂಥಸಂಪಾದನ ಕಾರ್ಯವನ್ನು ನಾನು ನಿರ್ವಹಿಸುವಂತೆ ನನಗೆ ಎಲ್ಲ ವಿಧದ ನೆರವನ್ನಿತ್ತು ಪ್ರೋತ್ಸಾಹಿಸಿ ದವರು ತುಳುನಿಘಂಟುಯೋಜನೆಯ ಪ್ರಧಾನಸಂಪಾದಕರಾದ ಡಾ. ಯು. ಪಿ. ಉಪಾಧ್ಯಾಯರು. ಅವರಿಗೂ ನನ್ನ ನೆನಕೆಗಳು ಸಲ್ಲುತ್ತವೆ.
[ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪ್ರಕಟಗೊಳ್ಳುತ್ತಿರುವ `ತುಳುವ' ಪತ್ರಿಕೆಯಲ್ಲಿ 19-20ನೇ ಸಂಯುಕ್ತ ಸಂಚಿಕೆ, ಜನವರಿ 1987ರಲ್ಲಿಯೂ, ಅದೇ ವರ್ಷ ಪ್ರತ್ಯೇಕ ಪುಸ್ತಕವಾಗಿಯೂ 'ಕಾವೇರಿ' ಕಾವ್ಯ ಪ್ರಕಟಗೊಂಡಿದ್ದು, ಈ ಪ್ರಸ್ತಾವನೆ ಅದರೊಳಗಿನದಾಗಿದೆ.]
`ತುಳು ದೇವೀಮಹಾತ್ಮೆ' - ಈಗ ತುಳುವಿನಲ್ಲಿ ದೊರೆತಿರುವ ಪ್ರಪ್ರಥಮ ಗದ್ಯಕೃತಿ. ಹಳೆಯ ತುಳುವಿನ ಏನೇನೂ ಪರಿಚಯವಿಲ್ಲದಿರುವ ನಮಗೆ ಈ ಭಾಷೆ ಓದಲು ತೊಡಕೆನಿಸುವುದು ಸಹಜ. ಹಿಂದಿನ ಕಾಲದ ತುಳುವರು ಹೀಗೂ ಒಂದು ಭಾಷೆಯನ್ನು ಮಾತಾಡುತ್ತಿದ್ದಿರಬಹುದೆ - ಎಂದು ಸೋಜಿಗವಾಗಬಹುದು. ಈ ಉಪ ಭಾಷೆಯ ಸ್ವರೂಪವು ಶ್ರೀಭಾಗವತೊ - ಕಾವೇರಿ ಗದ್ಯಗಳ ಭಾಷೆಗಿಂತ ಅನೇಕಾಂಶ ಗಳಲ್ಲಿ ಭಿನ್ನವಾಗಿದೆ. ಪದಪ್ರಯೋಗ, ವಾಕ್ಯರಚನೆ (Structure) ಶೈಲಿ ಎಲ್ಲವೂ ಇಲ್ಲಿ ಅಪೂರ್ವವಾಗಿ ಕಾಣಿಸುತ್ತದೆ.
ಶ್ರೀಭಾಗವತೊ-ಕಾವೇರಿ ಕೃತಿಗಳು ಪದ್ಯರೂಪದಲ್ಲಿರುವುದರಿಂದ ಅಲ್ಲಿಯ ಭಾಷೆ ಹೆಚ್ಚು `ಕಾವ್ಯಾತ್ಮಕ'ವಾಗಿದ್ದರೆ, ಇಲ್ಲಿಯ ಭಾಷೆ ಗದ್ಯರೂಪದಲ್ಲಿದ್ದು ಬಹುಮಟ್ಟಿಗೆ `ವಿವರಣಾತ್ಮಕ'ವಾಗಿದೆ.
ಮಾರ್ಕಂಡೇಯ ಪುರಾಣಾಂತರ್ಗತವಾದ ದೇವೀಮಹಾತ್ಮೆಯ ಕಥೆಯನ್ನು ತುಳುಗದ್ಯದಲ್ಲಿ ಹೇಳುವುದು ಈ ಗ್ರಂಥಕಾರನ ಉದ್ದೇಶ. ವಚನಭಾರತ, ವಚನ ಭಾಗವತ ಮುಂತಾದ ಕನ್ನಡ ಕೃತಿಗಳ ಹಾಗೆ ಇದು `ವಚನದೇವೀಮಹಾತ್ಮೆ' ಎಂದೂ ಹೆಸರಿಸಬಹುದಾದ ಒಂದು ಪ್ರಾಚೀನಕೃತಿ ಎನ್ನಬಹುದು. ಇದು ಹಳೆಯ ತುಳುಭಾಷೆ ಯಲ್ಲಿರುವುದರಿಂದ ಅತ್ಯಂತ ಮೌಲಿಕವಾಗಿದೆ. ಆಧುನಿಕತುಳುವಿನಲ್ಲಿಲ್ಲದ, ಶ್ರೀಭಾಗವತೊ - ಕಾವೇರಿಗಳಲ್ಲೂ ಇಲ್ಲದ, ಕೆಲವು ಅಪೂರ್ವ ತುಳುಪದಗಳು ಇಲ್ಲಿ ಕಾಣಸಿಗುತ್ತವೆ.
ಒÙಳ್ತ್ಳ್ಳ - ಇತರ, ಮುಚ್ಚೊ - ಜಾಗ್ರತೆ, ಅಂಬುಡಿಕೆ - ಬತ್ತಳಿಕೆ, ತೆವರ್ೆತೃ - ಬಿಲ್ಲಿನ ಹಗ್ಗ, ಜ್ಯಾತಿ - ಹಾಗೆ, ಶುÙಳ್ಯು - ಸುಳಿ, ಕಂದಿಕೆ - ಕಾಲಂದುಗೆ, ಬೆÙಳ್ಪು - ಬೆಳಕು, ಮುಂತಾದ ಪದಗಳೂ, ಉಬೆಪು- ಸೀಳು, ನೀರ್ಪು - ವಾಸಿಸು, ಒಡ್ಪು - ನಿಯಂತ್ರಿಸು, ಗುತ್ತ್ಪಾರ್ - ಜಿಗಿಯು, ಬÙಳ್ - ಬರು, ಮತಿಪು - ಆಲೋಚಿಸು ಮುಂತಾದ ಧಾತುಗಳೂ ಇಲ್ಲಿ ಕಾಣಸಿಗುತ್ತವೆ.
ಲಿಪಿಜ್ಞಾನವುಳ್ಳ ನಮ್ಮ ಪೂರ್ವಜರಾದ ತುಳುವರು ತಮ್ಮ ಅನಿಸಿಕೆಗಳನ್ನು ತಾವು ಮಾತಾಡುತ್ತಿದ್ದ ಭಾಷೆಯಲ್ಲಿ ಗದ್ಯಪದ್ಯಗಳ ರೂಪದಲ್ಲಿ ಉಲ್ಲೇಖಿಸುತ್ತಿದ್ದರೆಂಬುದಕ್ಕೆ ಈಗ ಸಾಕಷ್ಟು ಆಧಾರಗಳು ದೊರಕಿದಂತಾಗಿದೆ. ಈ ಲಿಖಿತಸಾಹಿತ್ಯ ದೊರಕಿದುದರಿಂದ ನಮ್ಮ ಹಿರಿಯರು ಮಾತಾಡುತ್ತಿದ್ದ ತುಳುವನ್ನು (ಆ ಕವಿಯ ಪ್ರದೇಶದ ಉಪಭಾಷೆ-ಆಡುಭಾಷೆ ಯನ್ನು) ಅರಿತುಕೊಳ್ಳಲು ನಮಗೆ ಸಾಕಷ್ಟು ಮಾರ್ಗದರ್ಶನ ಲಭಿಸಿದಂತಾಗಿದೆ. ಕಾವ್ಯ ದೃಷ್ಟಿಯಿಂದ ಮಾತ್ರವಲ್ಲದೆ, ಭಾಷಾವಿಜ್ಞಾನದ ದೃಷ್ಟಿಯಿಂದಲೂ ಈ ಗ್ರಂಥವು ಖಂಡಿತ ಅಧ್ಯಯನಯೋಗ್ಯವಾಗಿದೆ.
ಗ್ರಂಥಕಾರನ ಪರಿಚಯ:
ಈ ಗ್ರಂಥವನ್ನು ರಚಿಸಿದ ವಿದ್ವಾಂಸನು ಪುರಾತನ ಕುಂಬ್ಳೆಸೀಮೆ (ಈಗಿನ ಕಾಸರಗೋಡು ಜಿಲ್ಲೆ)ಯ ಮುಟ್ಟತ್ತೋಡಿ ಗ್ರಾಮದ ಪರಿಸರದಲ್ಲಿ ವಾಸವಾಗಿದ್ದವನೆಂದು ತಿಳಿಯಲಾಗಿದೆ. `ತೆಂಕಿಲ್ಲಾಯ' ಎಂಬ ಕುಲನಾಮವುಳ್ಳ ಈತನ ನಿಜವಾದ ಹೆಸರು ತಿಳಿದುಬಂದಿಲ್ಲ. ತೆಂಕಿಲ್ಲಾಯ ವಂಶಜರು ಸುಮಾರು ಐನೂರು ವರ್ಷಗಳ ಹಿಂದೆಯೇ ಬಾರಿಕ್ಕಾಡಿನಿಂದ ವಲಸೆಹೋಗಿ ಪುಲ್ಲೂರು ಎಂಬಲ್ಲಿ ನೆಲಸಿದರೆಂದು ಹೇಳಲಾಗುತ್ತಿದೆ.
ಈ ತಾಡವಾಲೆ ದೊರೆತದ್ದು ಪುಲ್ಲೂರಿನ (ಹರಿಪುರದ) ತೆಂಕಿಲ್ಲಾಯರ ಮನೆಯಲ್ಲಿ. ತೆಂಕಿಲ್ಲಾಯ ವಂಶಜರು ಬಾರಿಕ್ಕಾಡಿನಲ್ಲಿ ನೆಲಸಿದ್ದ ಕಾಲದಲ್ಲಿ (ಸುಮಾರು ಐನೂರು ವರ್ಷಗಳ ಹಿಂದೆ) ಈ ಗ್ರಂಥದ ರಚನೆಯಾಗಿರಬೇಕು. ಆ ಕಾಲದಲ್ಲಿ ಬಾರಿಕ್ಕಾಡು-ಪಾಡಿಗ್ರಾಮಗಳ ತುಳುಬ್ರಾಹ್ಮಣರಿಗೂ ಮಾಯಿಪ್ಪಾಡಿ ಅರಮನೆಗೂ ನಿಕಟ ವಾದ ಸಂಪರ್ಕವಿದ್ದಂತೆ ತಿಳಿದುಬರುತ್ತದೆ. `ತೌಳವಾಧೀಶ'ರೆಂದೇ ಬಿರುದು ಧರಿಸಿದ ಕುಂಬಳೆ ಅರಸರು ತುಳುಕವಿಗಳಿಗೆ, ತುಳುಬರಹಗಾರರಿಗೆ ಪ್ರೋತ್ಸಾಹ ನೀಡಿರಬಹುದು. ಈ ಸೀಮೆಯ ಭೂತಾರಾಧನೆಯಂಥ ಜನಪದ ಸಂಪ್ರದಾಯಗಳಿಗೆ, ಹಾಗೆಯೇ ಸೀಮೆಯೊಳಗಿನ ಬೆದ್ರಡ್ಕ, ಪುತ್ತಿಗೆ ಮುಂತಾದ ಕಡೆಗಳಲ್ಲಿರುವ ಸುಂದರ ದಾರುಶಿಲ್ಪಗಳಿಗೆ, ಪುಳ್ಕೂರು ಬಾಚನಂತಹ ಶಿಲ್ಪಿಗಳಿಗೆ, ಯಕ್ಷಗಾನ ಮುಂತಾದ ಕಲಾರೂಪಗಳಿಗೆ, ಸಂಸ್ಕೃತ ಕನ್ನಡ ಕವಿಗಳಿಗೆ (ಉದಾ: ತಳಂಗೆರೆಯ ಶಾಸನದ ಸಂಸ್ಕೃತ ಕನ್ನಡ ವೃತ್ತಗಳನ್ನು ಗಮನಿಸಿರಿ) - ಹೀಗೆ ತಮ್ಮ ಸೀಮೆಯ ಬಹುಮುಖಪ್ರತಿಭೆಗಳಿಗೆ ಪ್ರೋತ್ಸಾಹ ಸಹಕಾರ ಗಳನ್ನು ನೀಡುತ್ತ ಬಂದ ಕಾರಣದಿಂದಲೇ, ಕುಂಬಳೆ ಅರಸೊತ್ತಿಗೆ ಇಲ್ಲಿ ಜನಪ್ರಿಯತೆ ಯನ್ನು ಗಳಿಸಿರಬೇಕು. ಅರಸೊತ್ತಿಗೆಯ ಪ್ರಭಾವ ಸಂಪರ್ಕಗಳು ಕಡಮೆಯಾಗುತ್ತಾ ಬಂದಂತೆ, ಹಳೆಯ ಸಾಹಿತ್ಯವೈಭವ ಮತ್ತು ಕಲಾವೈಭವಗಳೂ ಕಣ್ಮರೆಯಾಗುತ್ತಾ ಬಂದುವು. ಏನಿದ್ದರೂ, ಈಗ ದೊರೆತಿರುವ ತುಳುಭಾಷೆಯ ಮೂರು ಪ್ರಾಚೀನ ಸಾಹಿತ್ಯಗ್ರಂಥಗಳೂ ಕುಂಬಳೆಸೀಮೆಯ ಪ್ರದೇಶದೊಳಗೇ ಲಭಿಸಿರುವುದು ಈ ಮೇಲಿನ ಅಭಿಪ್ರಾಯಕ್ಕೆ ಸೂಕ್ತ ದೃಕ್ಸಾಕ್ಷಿಯಾಗಿದೆ.
ಲಿಪಿಯ ಬಳಕೆ:
ತುಳುಲಿಪಿ, ತಿಗಳಾರಿ ಲಿಪಿ, ತುಳುಮಲೆಯಾಳಂ ಲಿಪಿ - ಮುಂತಾದ ಹೆಸರು ಗಳಿಂದ ಕಾಸರಗೋಡು, ದಕ್ಷಿಣಕನ್ನಡ, ಉತ್ತರಕನ್ನಡ ಮುಂತಾದ ಜಿಲ್ಲೆಗಳಲ್ಲಿ ಪ್ರಸಿದ್ಧ ವಾಗಿರುವ ಲಿಪಿಶೈಲಿಯೊಂದರಲ್ಲಿ ಈ ಗ್ರಂಥವನ್ನು ಬರೆಯಲಾಗಿದೆ. `ಶ್ರೀಭಾಗವತೊ- ಕಾವೇರಿ'ಗಳನ್ನು ಬರೆಯಲಾದ ಲಿಪಿಶೈಲಿಗೂ, ಈ ಗ್ರಂಥದ ಲಿಪಿಶೈಲಿಗೂ ಬಹುಮಟ್ಟಿಗೆ ಸಾಮ್ಯತೆಯಿದೆ. ಆದರೆ `ಸ್ಟ್' ಎಂಬ ಅಪೂರ್ವಧ್ವನಿಮಾದ ಉಲ್ಲೇಖ ಭಿನ್ನರೀತಿ ಯಲ್ಲಿದ್ದು, ಉಚ್ಚಾರಣೆಯ ತೊಡಕಿಗೆ ಕಾರಣವಾಗಿದೆ. ಇಲ್ಲಿ ಅದರ ರಚನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅದು `ಸ್ದ್' ಎಂದು ಓದಬಹುದಾದ ರೀತಿಯಲ್ಲಿ ಕಂಡು ಬರುತ್ತದೆ. ಇಲ್ಲಿಯ ಸಕಾರಕ್ಕೆ Silent Pronounciationನ್ನು ಒಪ್ಪಿಕೊಳ್ಳದೆ, ಇದನ್ನು ಸಲೀಸಾಗಿ ಓದುವುದಕ್ಕೆ ಕಷ್ಟವೆಂಬ ರೀತಿಯಲ್ಲಿದೆ ಅದರ ಬಳಕೆ. ಅಂತೂ ಪ್ರಾಚೀನ ತುಳುವಿನಲ್ಲಿದ್ದ ಯಾವುದೋ ಒಂದು ಅಪ್ಪಟ ದ್ರವಿಡೀಯ ಧ್ವನಿಮಾಕ್ಕೆ ಸರಿಯಾದ ಲಿಪಿಸಂಕೇತವನ್ನು ಕೊಡಲಾಗದೆ ತುಳುಭಾಷೆಯ ಲಿಪಿಕಾರರು ಚಡಪಡಿಸಿರಬಹುದೇ- ಎಂಬ ಸಂಶಯ ನಮಗೆ ಮೂಡದಿರುವುದಿಲ್ಲ. ಆದರೆ ಆ ಕಾಲದ ಸರಿಯಾದ ಉಚ್ಚಾರ ಗಳನ್ನು ಬಲ್ಲ ಅಂದಿನ ಲಿಪಿಕಾರರಿಗೆ ಇದು ಸಮಸ್ಯೆಯಾಗಿ ಕಂಡಿರಲಾರದು ಎಂಬುದೂ ಸತ್ಯವೆ.
ಸ್ದ್ಕಾರವುಳ್ಳ ಪದಗಳು:
ತುಳುಭಾಗವತದಲ್ಲಿ `ಸ್ಟ್'ಕಾರದಿಂದ ಆರಂಭವಾಗುವ ಪದಗಳು ನಮಗೆ ದೊರೆಕಿದ್ದು ಒಟ್ಟು ನಾಲ್ಕು ಮಾತ್ರ : `ಸ್ಟ್ಬೆರ್, ಸ್ಟೀಕುಳು, ಸ್ಟ್ಪ್ಪೊಡು, ಸ್ಟ್ಪ್ಪುನಾನಿ'.
ಕಾವೇರಿಯಲ್ಲಿ ಅಂಥವು ಸುಮಾರು ಹನ್ನೊಂದು ಪದಗಳು ಲಭಿಸಿವೆ : 'ಸ್ಟ್, ಸ್ಟ್ಂದ್, ಸ್ಟ್ಂದ, ಸ್ಟಿಂಗ್, ಸ್ಟಿಣೆಯಿ, ಸ್ಟಿತೆನ, ಸ್ಟುದ್, ಸ್ಟೇ, ಸ್ಟೌತರ್್'.
ಪದಾಂತ್ಯದಲ್ಲಿ ಸ್ಟ್ಕಾರ ಬಂದ ಉದಾಹರಣೆಗಳು ಈಯೆರಡು ಗ್ರಂಥಗಳಲ್ಲೂ ಸಾಕಷ್ಟು ದೊರೆಯುತ್ತವೆ. ಅತಿಪ್ರಾಚೀನ ತುಳುವಿನಲ್ಲಿದ್ದ ಈ ಧ್ವನಿಮಾವು ತುಂಗನ ಕಾಲಕ್ಕೆ ಸ್ವಲ್ಪ ಸ್ವಲ್ಪ ವಿರಳವಾಗತೊಡಗಿ ಕ್ರಮೇಣ ಬಿದ್ದುಹೋದಂತೆ ಭಾಸವಾಗುತ್ತದೆ. ಮಾತ್ರವಲ್ಲ, ಮೂಲದಲ್ಲಿ (ಈಗ ತಮಿಳು ಮಲೆಯಾಳಗಳ ವತ್ಸ್ರ್ಯ ವರ್ಣಗಳ ಹಾಗೆ) ಅದು ಒತ್ತಕ್ಷರವೇ ಆಗಿದ್ದು ತುಂಗನ ಕಾಲಕ್ಕೆ ಅದು ಶಿಥಿಲದ್ವಿತ್ವವಾಗತೊಡಗಿದುದಾದರೆ, ಅದರ ಉಚ್ಚಾರಣಪ್ರಿಯತೆ ಕಡಿಮೆಯಾಗತೊಡಗಿದುದಕ್ಕೂ ಅದೇ ಸಾಕ್ಷಿಯೆನ್ನಬಹುದು. ಈ ದೃಷ್ಟಿಯಿಂದ ವಿವೇಚನೆಮಾಡಿದಾಗ `ತುಳು ದೇವೀಮಹಾತ್ಮೆ' ಗ್ರಂಥದ ಕಾಲ ಇನ್ನಷ್ಟು ಪ್ರಾಚೀನವಾದುದೆಂದು ತಿಳಿಯಬೇಕಾಗುತ್ತದೆ. ಇದರ ಪ್ರಾಚೀನತೆಗೆ ಬೇರೆಯೂ ಕೆಲವು ಕಾರಣಗಳನ್ನು ಕೊಡಬಹುದು.
1. `ಶ್ರೀಭಾಗವತೊ - ಕಾವೇರಿ' ಕಾವ್ಯಗಳ ಪ್ರಭಾವ ಈ ಗ್ರಂಥದಲ್ಲಿ ಕಾಣಿಸುವುದಿಲ್ಲ.
2. ಈ ಗ್ರಂಥಕಾರನ ಕಾಲಕ್ಕೆ ತುಳುವಿನಲ್ಲಿ ಶಿಷ್ಟಕಾವ್ಯಗಳ ರಚನೆ ಆರಂಭ ವಾದಂತೆ ಅನಿಸುವುದಿಲ್ಲ.
3. `ಶ್ರೀಭಾಗವತೊ-ಕಾವೇರಿ'ಗಳಲ್ಲಿರುವಷ್ಟು ಪರಿಷ್ಕೃತ ಭಾಷೆ ಇದಲ್ಲ.
4. 'ಶ್ರೀಭಾಗವತೊ-ಕಾವೇರಿ'ಗಳಲ್ಲಿ ರಳದ ಬಳಕೆಯನ್ನು ಕಳಕೊಂಡಿರುವ ಪದ ಗಳು ಇಲ್ಲಿ ರಳಯುಕ್ತವಾಗಿ ಪ್ರಯೋಗಗೊಂಡಿವೆ. ಉದಾ: ಏಪÙಳ್ತಲಾ, ಅವುÙಳ್, ಒÙಳ್ತರ್ು - ಇತ್ಯಾದಿ.
5. ಸ್ದ್ಕಾರದ ಬಳಕೆ ಹೆಚ್ಚು ವ್ಯಾಪಕವಾಗಿದೆ. ಒಂದೇ ಪದದಲ್ಲಿ ಎರಡೆರಡು ಸ್ದ್ಕಾರಗಳಿದ್ದ ಉದಾಹರಣೆಗಳೂ ಇಲ್ಲಿವೆ. ಉದಾ: ಆಸ್ದ್ನಸ್ದ್, ಸ್ದ್ಂಡಾಸ್ದ್, ಸ್ದ್ಂಡಾತ್ನಸ್ದ್, ಸ್ದ್ಂಡಾಸ್ದ್ತ್ತ್, ಸ್ದ್ಂಡಾಸ್ದ್ನ್ - ಇತ್ಯಾದಿ.
ವಿಷ್ಣುತುಂಗನ ಮಾತೃಭಾಷೆ ಕನ್ನಡ. ಅವನು ಮೂಲಗ್ರಂಥವಾಗಿ ಎತ್ತಿಕೊಂಡು ವಿಷ್ಣುಭಾಗವತದ ಭಾಷೆಯೂ ಕನ್ನಡ. ಇವೆರಡರ ಪ್ರಭಾವವೂ ಅವನ ಅವನ ಕಾವ್ಯದಲ್ಲಿ ಬಿದ್ದಿರಬಹುದು. ಆದರೆ ತೇಕತ್ತಿಲ್ಲಾಯ (ತೆಂಕಿಲ್ಲಾಯ) ಕವಿಯ ಮಾತೃಭಾಷೆ ತುಳು. ಅವನಿಗೆ ಸಂಸ್ಕೃತ ದೇವೀಮಹಾತ್ಮೆಯೊಡನೆ ನೇರಸಂಬಂಧ. ಅವನ ಶಿಷ್ಟಭಾಷೆಯೆಂದರೆ ಅವನ ಕಾಲದಲ್ಲಿ ಮಾತಾಡುತ್ತಿದ್ದ ತುಳು ಆಡುಭಾಷೆ(colloquial)ಗೆ ಕೆಲವು ಸಂಸ್ಕೃತ ಪದಗಳ ಮಿಶ್ರಣ - ಅಷ್ಟೆ. ಸಂಸ್ಕೃತಪದಗಳನ್ನು ಸೇರಿಸಿ ಮಾತಾಡುವುದು ಬಹುಶಃ ಆ ಕಾಲದ ಭಾಷೆಯ ಗೌರವವಾಗಿರಬೇಕು. ವಿಷ್ಣುತುಂಗನ ಹಾಗೆ ತೇಕತ್ತಿಲ್ಲಾಯ ಕವಿಯೂ ಸಂಸ್ಕೃತ ಪದಗಳಿಗೆ ತುಳುಪ್ರತ್ಯಯಗಳನ್ನು ಹಚ್ಚಿ ಹೊಸ ಕ್ರಿಯಾಪದಗಳನ್ನು ಬಳಕೆಗೆ ತಂದಿದ್ದಾನೆ. ಉದಾ: ಅನುಗ್ರಹಿಪು, ಅನುಭಯಿಪು, ಅನುವಣರ್ಿಪು (-ವಿವರಿಸು) ಅಪ ಹರಿಪು, ಆಚರಿಪು, ಆಜ್ಞಾಪಿಪು, ಆಲೋಚಿಪು, ಆಶ್ರೈಪು, ಆಕ್ಷೇಪಿಪು (ಎಸೆಯು), ಇಚ್ಛಿಪು (ಯಿಚ್ಛಿಪು), ಈಕ್ಷಿಪು, ಕುತೂಹಲಿಪು, ಕೋಪಿಪು, ಕ್ಲೇಶಿಪು, ಕ್ಷೊಭಿಪು, ಖಂಡಿಪು, ಗಜರ್ಿಪು, ಗೃಹೀಪು, ಚೂಣರ್ಿಪು, ಜನಿಪೊ, ಜ್ವಲಿಪು, ದುಕ್ಖಿಪು (ದುಃಖೀಪು), ಧರಿಪು, ನಮಸ್ಕರಿಪು, ನಿರಾಕರಿಪೋವೊಣ್, ಪರಿಹರಿಪು, ಪೂಜಿಪು, ಪ್ರಯೋಗಿಪು, ಪ್ರವತರ್ಿಪು, ಪ್ರವಾಹಿಪು, ಪ್ರಾಪಿಪು, ಬಹುಮಾನಿಪೊವಣ್, ಭವಿಪು, ಬಾಧಿಪು, ಭುಂಜಿಪು, ಭೋಗಿಪ್ಪು, ಭ್ರಮಿಪು, ಮದರ್ಿಪು, ಮೋಹಿಪು, ಯಾತ್ರಿಪು, ರಕ್ಷಿಪು, ಲಾಭಿಪು, ವಧಿಪು, ವತರ್ಿಪು, ವಷರ್ಿಪು, ವಿಚಾರಿಪು, ವಿಭಾಗಿಪು, ವಿಶ್ರಮಿಪು, ಸಂಚರಿಪು, ಸಂತೋಷಿಪು, ಸಂಧಿಪು, ಸಂಹರಿಪು, ಸಾಧಿಪು, ಸಿದ್ಧಿಪು, ಸ್ಮರಿಪು, ಸ್ತುತಿಪು, ಸ್ನೇಹೀಪ್ಪು, ಶೋಭೀಪ್ಪು.
ÙರÙಳಾಕ್ಷರದ ಅಸ್ತಿತ್ವ:
ಈ ಗ್ರಂಥವನ್ನು ಆಮೂಲಾಗ್ರವಾಗಿ ಪರಿಶೀಲಿಸಿದಾಗ, ಶ್ರೀಭಾಗವತೊ - ಕಾವೇರಿಗಳಲ್ಲಿ ಬಳಕೆಯಾಗಿರುವ ಸಂದರ್ಭಗಳಲ್ಲದೆ, ಬೇರೆಯೂ ಕೆಲವು ಸಂದರ್ಭಗಳಲ್ಲಿ ÙರÙಳಾಕ್ಷರದ ಬಳಕೆಯು ಪ್ರಾಚೀನ ತುಳುವಿನಲ್ಲಿ ಇತ್ತೆಂದು ತಿಳಿದುಬರುತ್ತದೆ. ಉದಾ:
ಒÙಳ್ತರ್ಿ (ಒಬ್ಬಳು) ಔÙಳ್ತ್ (ಅಲ್ಲಿಂದ)
ಬೆÙಳ್ಪು (ಬೆಳಕು) ತೊÙಳ್ಪು (ತುಳಿಯು)
ಶುÙಳ್ಯು (ಸುಳಿ) ಬÙಳ್ (ಬರು)
ಒÙಳ್ತ್ಳ್ಳ (ಇತರ) ಸ್ದ್Ùಳಿಪಪ್ಪಡ್ತ್ತೀ (ಸೆಳೆಯಲ್ಪಟ್ಟ)
ಅವುÙಳ್ (ಅಲ್ಲಿ) ಬೋÙಳ್ತ್ನ್ (ಬೇಕಾಗಿದೆ)
ಒÙಳ್ಪ (ಎಲ್ಲಿ) ---ಇತ್ಯಾದಿ.
ಆದರೆ ಒÙರ್ಳ್ತಿ, ಅವುÙಳ್ ಮುಂತಾದ ಪದಗಳು ರಳರಹಿತವಾಗಿಯೂ ಕೆಲವೆಡೆ ಪ್ರಯೋಗವಾಗಿರುವುದರಿಂದ ಈ ಗ್ರಂಥದ ಪ್ರತಿಕಾರನ ಕಾಲಕ್ಕೆ ÙರÙಳಾಕ್ಷರದ ಬಳಕೆ ವಿರಳವಾಗುತ್ತಾ ಬಂದಿರಬೇಕೆಂದು ನಾವು ಊಹಿಸಬಹುದು.
ಹಸ್ತಪ್ರತಿಯ ಸ್ವರೂಪ:
ಹಸ್ತಪ್ರತಿಯನ್ನು ಸಮಗ್ರವಾಗಿ ಪರಿಶೀಲಿಸಿದಾಗ ಇದು ಕೃತಿಕಾರನ ಮೂಲಪ್ರತಿ ಯಾಗಿರುವಂತೆ ನಮಗೆ ಭಾಸವಾಗುವುದಿಲ್ಲ. ಕೃತಿಕಾರನ ಕಾಲದ ಭಾಷೆಗೂ ಲಿಪಿಕಾರನ ಕಾಲದ ಭಾಷೆಗೂ ಅಲ್ಪಸ್ವಲ್ಪ ವ್ಯತ್ಯಾಸವಿದ್ದಿರಬಹುದಾದ್ದರಿಂದ, ಹಸ್ತಪ್ರತಿಯ ಬರವಣಿಗೆಯ ವೇಳೆ, ಲಿಪಿಕಾರನ ಭಾಷೆಯ ಪ್ರಭಾವ ಈ ಗ್ರಂಥದಲ್ಲಿ ಆಗಿರುವಂತೆ ಕಂಡುಬರುತ್ತದೆ. ಗ್ರಂಥದುದ್ದಕ್ಕೂ ಅನೇಕ ಪದಗಳ ಎರಡೋ ಮೂರೋ ರೂಪಗಳು ಕಾಣಸಿಗುವುದೇ ಅದಕ್ಕೆ ಸಾಕ್ಷಿ.
ಕೊÙಳ್/ಕೊಳ್ (ಕೊಡು) ಶಿಗ್Ùಳ್ತ್ / ತಿಗ್Ùಳ್ತ್ (ಸೀಳಿ)
ಸ್ದ್ಡತ / ಇಡತ (ಎಡಭಾಗದ) ಶೆಟ್ಟೊ / ಚೆಟ್ಟೊ (ನಾಶಮಾಡು)
ಒÙರ್ಳ್ತೆ / ಒರ್ತ್ಯೆ (ಒಬ್ಬಳೇ) ಒÙಳ್ತ್ಳ್ಳ /ಒರ್ತಳ್ಳ (ಇತರ)
ಖÙಳ್ಗೊ / ಖಟ್ಗೊ (ಖಡ್ಗ) ವೇಗಿತ್ತ್ತ್/ಬೇಗಿತ್ತ್ತ್ (ಬೇಗನೆ)
ಮಗ್Ùಳಲ / ಮಗ್ಳಲ (ಮತ್ತೂ) ಅವುÙಳ್ತ್ / ಅವುಳ್ತ್ (ಅಲ್ಲಿಂದ)
ಬೂÙಳ್ತತೆ / ಬೂರ್ತತೆ (ಬೀಳಿಸಿದನು)
ಗೃಹೊಂಟ್ಪ್ಪಕ್ / ಗೃಹೊಂಟ್ಪ್ಪ / ಗೃಹೊಂಟ್ (ಗೃಹದಲ್ಲಿ)
ಜ್ಯಾಒÙರ್ಳ್ತೆ / ಜಾಸ್ದೊರ್ತಿ / ಜಾವೊರ್ತಿ (ಯಾವಳೊಬ್ಬಳು)
ಅಸ್ದ್ - ಎಂಬ ಪದದ ವಿಶ್ಲೇಷಣೆ:
ಅದು - ಆ ಎಂಬರ್ಥದಲ್ಲಿ `ಅಸ್ದ್' ಎಂಬ ಪದವು ದೇವೀಮಹಾತ್ಮೆಯಲ್ಲಿ ಧಾರಾಳವಾಗಿ ಪ್ರಯೋಗಗೊಂಡಿದೆ. ಶ್ರೀಭಾಗವತೊ-ಕಾವೇರಿಗಳಲ್ಲಿ ಈ ಪದವು `ಅಸ್ಟ್' ಎಂಬ ರೂಪದಲ್ಲಿ ಕಾಣಿಸಿಕೊಂಡಿದೆ. ಇದು ಹಳಗನ್ನಡ `ಅತ್ತು' ಎಂಬ ಪದಕ್ಕೆ ಸಂವಾದಿಯಾದುದು. ಕಿಟ್ಟೆಲ್ಕೋಶದಲ್ಲಿ `ಅತ್ತು' ಪದದ ಬಗ್ಗೆ ಹೀಗೆ ವಿವರಿಸಲಾಗಿದೆ: ಅತ್ತು ಂಣಣಣ. 1. = ಅತ್ತು Attu ನಿನತ್ತು, ಎನತ್ತು, ತನತ್ತು, ನಿಮತ್ತು, ಎಮತ್ತು, ತಮತ್ತು; ಮುನಿಸು ಇದು ನಿನತ್ತು, ಸಯ್ರಣೆ ಎನತ್ತು, ಕೆಳದಿಗೆ ತನತ್ತು ಸಂದಿಸುವ ಎಸಕಂ.
ಅತ್ತು Attu. 2. = ಅದು (-ಉದು, -ಇತು, -ಇತ್ತು, -ತು). A termination of the third person singular neuter of the imperfect. ಇರ್ದತ್ತು, ಶಿರಃಕರೋಟಿ ನಗುವಂತೆ ಇರ್ದತ್ತು. ಪಸರಿಸಿದತ್ತು ಮೂಡದೆಸೆಯೊಳ್ ಬೆಳರ್ಗೆಂಪು.
ಹೆಚ್ಚುಕಡಮೆ ಇದೇ ಅರ್ಥದಲ್ಲಿ ಪ್ರಾಚೀನ ತುಳುವಿನ ಅಸ್ದ್ ಅಥವಾ ಅಸ್ಟ್ ಪದವು ಪ್ರಯೋಗಗೊಂಡಿದೆಯೆನ್ನಬಹುದು. ಉದಾ:
ಎನಸ್ದ್ - ನನ್ನದು (ನನ್ನ + ಅದು)
ಆಕ್ಣಸ್ದ್ - ಆಗಿರುವಂಥದ್ದು (ಆಗಿರುವಂಥ +ಅದು)
ಪಂಡ್ನಸ್ದ್ - ಹೇಳಿದ್ದು (ಹೇಳಿದ + ಅದು)
ಉಳ್ಳಸ್ದ್ - ಇರುವಂಥಾದ್ದು (ಇರುವಂಥ + ಅದು)
ಕೂಡ್ತ್ನಸ್ದ್ - ಕೂಡಿದುದು (ಕೂಡಿದ + ಅದು)
ಜಾಸ್ದ್ - ಯಾವುದು (ಯಾವ + ಅದು)
`ಅಸ್ದ್' ಹೊರತಾದ ಕೇವಲ `ಸ್ದ್'ಕಾರವು ಅಪೂರ್ಣಕ್ರಿಯಾರೂಪಗಳಲ್ಲಿ ಮತ್ತು ಭೂತಕಾಲರೂಪಗಳಲ್ಲಿ ಬಳಕೆಯಾಗುತ್ತದೆ. ಉದಾ: ಆಸ್ದ್, ಆಸ್ದ್ತ್ತ್, ಶುಸ್ದ್ತ್ತ್ - ಇತ್ಯಾದಿ.
ಭಾಷೆಯ ಒಂದು ಹಂತದಲ್ಲಿ ಸ್ದ್ಕಾರ ಲೋಪಗೊಂಡ ಉದಾಹರಣೆಗಳೂ ಕಾಣಸಿಗುತ್ತವೆ.
ಪೂಜ್ಯೆಯಾ - ಉಳ್ಳಂಚಿತ್ತಿ
(ಪೂಜ್ಯೆಯಾಸ್ದ್ ಉಳ್ಳಂಚಿತ್ತಿ ಎಂದಾಗಬೇಕಿತ್ತು)
ಛಿನ್ನಾ - ಬೂಳತೊ
(ಛಿನ್ನಾಸ್ದ್ ಬೂಳತೊ ಎಂದಾಗಬೇಕಿತ್ತು)
ಸರಿಯಾ-ಉಳ್ಳ
(ಸರಿಯಾಸ್ದ್ಉಳ್ಳ ಎಂದಾಗಬೇಕಿತ್ತು)
ಸ್ದ್ಕಾರವನ್ನೊಳಗೊಂಡ ವಿವಿಧ ರೂಪದ ಪದಗಳನ್ನು ಹೀಗೆ ಸಂಗ್ರಹಿಸಬಹುದು-
ಅ್ದ್ಯಾಸ್ದ್ನ್ ಅ್ಂಡಾಸ್ದ್ನಾಯೆ
ಆಕ್ಣಸ್ದ್ ಆಸ್ದ್ತ್ತ್ಂಡ್
ಆಸ್ದ್ ಆಸ್ದ್ತ್ತ್
ಆಸ್ದ್ನವು ಆಸ್ದ್ನಾಯೆ
ಆಸ್ದ್ನಸ್ದ್ ಆಸ್ದ್ಪ್ಪುಪೊ
ಉಳ್ಳಸ್ದ್ ಕೂಡ್ತ್ನಸ್ದ್
ಬುಡ್ಸ್ದ್ ಬೋಡಾಸ್ದ್ತ್ತ್
ಪೋಸ್ದ್ತ್ತಿ ಪ್ರಾಪೀತ್ನಸ್ದ್
ಶೋಭೀಪ್ಣಸ್ದ್ ಜಾಸ್ದ್
- ಇತ್ಯಾದಿ.
ಪದಾದಿಯಲ್ಲಿ ಬರುವ ಸ್ದ್ಕಾರಗಳ ಬಳಕೆ ಇನ್ನಷ್ಟು ಸ್ವಾರಸ್ಯವಾಗಿದೆ. ಉದಾ:
ಸ್ದ್ಂಡ್ ಸ್ದ್ಡತ
ಸ್ದ್ಂಡಾತ್ನಸ್ದ್ ಸ್ದ್ಡಪುಟ್ಟ್
ಸ್ದ್ಂಡಾಪ್ಪೆರ್ ಸ್ದ್ತ್ತರ್ಪೊ
ಸ್ದ್ಂಡಾವರ್ತ್ತೆ ಸ್ದ್ತ್ತÙಳ್ತೆರ್
ಸ್ದ್ಂಡಾಸ್ದ್ ಸ್ದ್ದ್ಯೊ
ಸ್ದ್ಂಡಾಸ್ದ್ತ್ತ್ ಸ್ದ್ಪ್ಪುಪೆರ್
ಸ್ದ್ಂಡಾಸ್ದ್ನ್ ಸ್ದ್Ùಳಿತರ್ಪಿ
ಸ್ದ್ಂಬೆನಿ ಸ್ದ್ಳ್ಳಂಚಿತ್ತಿನಾಯೆ - ಇತ್ಯಾದಿ.
`ಶ್ರೀಭಾಗವತೊ' ಹಾಗೂ ಈ ಗದ್ಯಗ್ರಂಥದ ಪದಗಳಲ್ಲಿ ಕಂಡುಬರುವ ಕೆಲವು ಪ್ರಭೇದಗಳು -
ಶ್ರೀಭಾಗವತೊ ತುಳುದೇವೀಮಹಾತ್ಮೆ
ನೆತ್ತ್ಪು (ನಿಲ್ಲು) ನೆಂದ್ಪು
ನೆತ್ತ್ಪಿ (ನಿಲ್ಲಿರಿ) ನೆಂದ್ಪುಲೆ
ಚೋಜ್ (ಕಾಣು) ಶೋಜ್
ಬರ್ (ಬರು) ಬÙಳ್
ಚೂ/ಶೂ (ನೋಡು) ಶೂ/ಶು
ಅಸ್ಟ್ (ಅದು) ಅಸ್ದ್
ತೆರು (ಬಿಲ್ಲಿನಹಗ್ಗ) ತೆರ್ವೆತೃ/ತೆರುವು
ಚುÙಳಿ (ಸುಳಿ) ಶುÙಳ್ಯು
ಭಾಷೆ ಮತ್ತು ಶೈಲಿ:
ತುಳುವಿನಲ್ಲಿ ಕರ್ಮಣಿಪ್ರಯೋಗ ಇಲ್ಲವೆಂಬುದು ಈಗಾಗಲೇ ಎಲ್ಲರೂ ಹೇಳುತ್ತಾ ಬಂದ ವಿಚಾರ. ಆದುನಿಕತುಳುವಿನಲ್ಲಿ ನಾವು ಎಷ್ಟೇ ಪ್ರಯತ್ನಪಟ್ಟರೂ ಒಂದೇ ಒಂದು ಕರ್ಮಣಿಪ್ರಯೋಗವನ್ನು ರಚಿಸಲು ನಮಗೆ ಸೂಕ್ತ ಪದಗಳೇ ಸಿಕ್ಕಲಾರವು. ಆದರೆ ಈ ಗದ್ಯಕಥೆಯಲ್ಲಿ ಬರುವ ಈ ಕೆಳಗಿನ ವಾಕ್ಯಗಳು ನಮಗೆ ಅಚ್ಚರಿಯನ್ನುಂಟು ಮಾಡುತ್ತವೆ.
1. ಋಷಿಟಾವ ಬಹಮಾನಿಪೊವೊಂಡೆರ್
2. ರಾಜ್ಯೊ ಎನಟಾವ ಬುಡ್ಪೋವಪ್ಪಡ್ನ್
3. ಪೊಣಿಜೇವು ಬಾಲೆಕುಳೆಟಾವ ನಿರಾಕರಿಪೊವೊಂಡೆ
4. ಸತ್ರುಕುಳೆತ್ತಾವ ಬಾಧಿಪೊವೊಂಡೆ
5. ಶ್ರೀಹರಿಟಾವ ವಂಚಿಪೋವೊಂಡ್ನಾಕುಳು
6. ಬ್ರಹ್ಮದೇವೆರಟಾವ ಸ್ತುತಿಪೋವೊಂಡೆರ್
ಕೆಲವು ಸಮುಚ್ಚಯಬೋಧಕಾವ್ಯಯಗಳು ಆಧುನಿಕತುಳುವಿಗಿಂತ ತೀರಾ ಭಿನ್ನವಾಗಿವೆ.
1. ದಂತೊಂತಾವನಾ ಮುಷ್ಟಿಪ್ರಹಾರೊಂತಾವನಾ ಮರಣೊ ಪ್ರಾಪಿತೆ
2. ಆಯ ದೇಹೊಮಿನಾ ಶಿರೊಮಿನಾ ಬೇತೆ ಬೇತೆ ಆಕೋಯೆ
3. ಸುಂಭಾಸುರಕಾ ಪರಮೇಶ್ವರಿಕಾ ಯುದ್ಧೊ ತುಡೆಂಗ್ಸ್ದ್ನ್
4. ಮಹಿಷಾಸುರನ್ಯಾ ಅಯಕ್ಳ್ಳ ಬಲೊಮಿನ್ಯಾ ನಾಶಾಕೋಯರ್
5. ತಾಮರೆತ ಪೊಷ್ಪೊಮಿನ್ಯಾ ತಾಮರೆತ ಮಾಲೆನ್ಯಾ ಸಮುದ್ರರಾಜೆ ಇನ್ಕ್ತ್ತತ್ಡ್ತೆ
6. ದೇವೇಕ್ಳೆಕ್ ಶತ್ರುವಾ ಉಳ್ಳಂಚಿತ್ತಿ ಚಾಮರೆಯ ದೇವಿಕ್ ವಾಹನೊಮಾ ಉಳ್ಳಂಚಿತ್ತಿ ಸಿಂಹೊಮ ಎಡ್ಡೆಂದೊ ಬಾಹುಕುಳೆಟಾವ ಯುದ್ಧೊಮಿನಿ ಬೆಂದೆರ್
ಶ್ರೀಭಾಗವತೊ ಕಾವೇರಿಗಳಲ್ಲಿ ಇರುವ ವಿಭಕ್ತಿಪ್ರತ್ಯಯಗಳಲ್ಲದೆ, ಅಲ್ಲಿ ಇಲ್ಲ್ಲದಿರುವ ಕೆಲವು ವಿಭಕ್ತಿಪ್ರತ್ಯಯಗಳೂ ಈ ಗ್ರಂಥದಲ್ಲಿ ಕಾಣಸಿಗುತ್ತವೆ. ಉದಾ :
ದ್ವಿತೀಯಾ ವಿಭಕ್ತಿ : ಒಮಿನಿ (ಪ್ರಸಂಗೊಮಿನಿ, ಬಲೊಮಿನಿ)
ತೃತೀಯಾವಿಭಕ್ತಿ : ಒಂತವ, ಒಂತಾವ (ಸಾಮಥ್ಯರ್ೊಂತವ, ವಿಸ್ತಾರೊಂತಾವ)
ತ್ತಾ (ಬುದ್ಧಿತ್ತಾ, ಅಯೆತ್ತಾ)
ತ್ತಾವ (ಏಕಾಗ್ರಮನಸ್ತ್ತಾವ)
ಎತ್ತಾವ (ಶತ್ರುಕುಳೆತ್ತಾವ)
ಟಾವ, ಎಟಾವ (ಬಡವುಟಾವ, ಬಾಲೆಕ್ಳೆಟಾವ)
ಚತುಥರ್ೀವಿಭಕ್ತಿ : ಎಕಾವ (ಕೌಷ್ಟಿಕೆರೆಕಾವ, ಈರೆಕಾವ)
ಒಂಕಾವ (ವನೊಂಕಾವ, ಸಮೀಪೊಂಕಾವ)
ಸಪ್ತಮೀ ವಿಭಕ್ತಿ : ಎಟ್ (ಗಜೊಂಕುಳೆಟ್)
ಎಟ (ಮಾರ್ಕಂಡೇಯೆರೆಟ)
ಎಟ್ಪ್ಪ (ರಾತ್ರಿಕ್ಳೆಟ್ಪ್ಪ)
ಒಂಟ್ಪ್ಪ (ಮನ್ವಂತರೊಂಟ್ಪ್ಪ)
ಒಂಟ್ಪ್ಪಕ್ (ಸೃಷ್ಟಿಕಾಲೊಂಟ್ಪ್ಪಕ್)
ಉಪ್ಪ (ಅವುಳುಪ್ಪ)
ಕಥೆಯ ಕೊನೆಯ ಭಾಗದಲ್ಲಿ ಬರುವ, ಶಾಂತರಸವನ್ನು ಪ್ರತಿಪಾದಿಸುವ ಒಂದು ಉತ್ತಮ ವರ್ಣನಾಭಾಗ ಹೀಗಿದೆ -
``ಅವುÙಳ್ ಸುಂಭಾಸುರೆಯಾಸ್ದ್ನಾಯೆ ಮರಣಾಯಿ ಸಮಯೊಂಟ್, ಗಂಧರ್ವೇರ್ಕುಳು ಹರ್ಷೊಂತಾವ ಗಾನಾಕೊಯೆರ್ | ವಾಯುದೇವೆರ್ ಪೂಜ್ಯೊಮಾಪ್ಪ ವೀಜ್ಯೆರ್ | ದಿವಸೊಂಕ್ಳೆಕ್ ಸ್ವಾಮಿಯಾ ಉಳ್ಳಂಚಿತ್ತಿ ಸೂರ್ಯ ದೇವೆರಾಕ್ಣಾರ್, ಯೆಡ್ಡ ಪ್ರಭೆಳ್ಳಾರಾಸ್ದ್ ಭವಿತೆರ್ | ಅಂಚನೆ ಒÙಳ್ತ್ಳ್ಳ ಎಕ್ಷಕಿನ್ನರಾದಿಕುಳುಲ ವಾದ್ಯ ಖೋಷೊಮಿನಾಕೊಯೆರ್ | ಅಪ್ಸರ ಸ್ತ್ರೀಕುಳು ನೃತ್ತಾಕೊಯೆರ್ | ಶಾಂತೊಮಾಸ್ದ್ ನಂಚಿತ್ತಿ ಅಗ್ನಿಕುಳುಲ ಯೆಡ್ಡೆಂದೊ ಜ್ವಲಿತೆರ್ |''
ಹೀಗೆ `ತುಳು ದೇವೀಮಹಾತ್ಮೆ'ಯ ಗದ್ಯಶೈಲಿಯು ಅಲ್ಲಲ್ಲಿ ಕೆಲವೆಡೆ ಲಘು ಕಾವ್ಯಗುಣಗಳನ್ನೂ ಮೆಯ್ಗೂಡಿಸಿಕೊಂಡು ಓದಲು ಹೃದ್ಯವಾಗಿದೆ.
ಈ ಅಪೂರ್ವ ತುಳುಗದ್ಯವನ್ನು ಸಂಪಾದಿಸಿ ಪ್ರಕಟಿಸಲು ಅನುಮತಿ ನೀಡಿದ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊ. ಯನ್. ವಿ. ಪಿ. ಉಣಿತ್ತಿರಿಯವರಿಗೂ ಲಿಪ್ಯಂತರಕಾರ್ಯದಲ್ಲಿ ಸಹಕರಿಸಿದ ಶ್ರೀಮತಿ ಪಿ. ಸರಸ್ವತಿಯವರಿಗೂ, ಹಸ್ತಪ್ರತಿಯನ್ನು ಓದಿ ಸೂಕ್ತಸಲಹೆಯನ್ನಿತ್ತ ಡಾ. ಯು. ಪಿ. ಉಪಾಧ್ಯಾಯರಿಗೂ, ಇದರ ಪ್ರಕಟನೆಯ ಭಾರವನ್ನು ವಹಿಸಿದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿದರ್ೇಶಕರಾದ ಪ್ರೊ. ಕು. ಶಿ. ಹರಿದಾಸ ಭಟ್ಟರಿಗೂ ನನ್ನ ಅನಂತ ಕೃತಜ್ಞತೆಗಳು.
[ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ 1991ರಲ್ಲಿ ಪ್ರಕಟಿತವಾದ 'ತುಳು ದೇವೀಮಹಾತ್ಮೆ' (ಪ್ರಾಚೀನ ಗದ್ಯಕಾವ್ಯೊ) ಕೃತಿಯ ಪ್ರಸ್ತಾವನೆ]
`ಹರಿಯಪ್ಪ' ಎಂಬ ಹೆಸರಿನಿಂದ ಪ್ರಸಿದ್ಧನಾದ ಈ ಅರಸನನ್ನು ಎರಡನೆಯ ಹರಿಹರ ಎಂದು ಚರಿತ್ರೆಯಲ್ಲಿ ಗುರುತಿಸಿದ್ದಾರೆ. ಮಹಾಜ್ಞಾನಿಯಾದ ಸಾಯಣಾ ಚಾರ್ಯರು ಇವನ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಅರಸನ ಸಲಹೆಯಂತೆ ಸಾಯಣಾ ಚಾರ್ಯರು ಋಗ್ವೇದ-ಯಜುರ್ವೇದ-ಸಾಮವೇದಗಳಿಗೆ ಭಾಷ್ಯ ಬರೆದರೆಂದು ಇತಿಹಾಸ ಹೇಳುತ್ತದೆ. ತುಳುಲಿಪಿಯಲ್ಲಿ ಬರೆದ ಸಾಯಣಭಾಷ್ಯದ ತಾಳೆಯೋಲೆಯ ಹಸ್ತಪ್ರತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿಸಂಶೋಧನ ಗ್ರಂಥಾಲಯದಲ್ಲಿದೆ. ಒಂದು ಕಾಲ ದಲ್ಲಿ ವಿಜಯನಗರ ಅರಸರ ಅರಮನೆಯಲ್ಲಿ ತುಳುಭಾಷೆ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಹರಿಯಪ್ಪನ ತುಳು ಕರ್ಣಪರ್ವವೇ ಸಾಕ್ಷಿ.
ಕೊಡವೂರಿನ ಅರುಣಾಬ್ಜ ಎಂಬ ಕವಿ ಬರೆದ `ಮಹಾಭಾರತೊ'ದಲ್ಲೂ ಹರಿಯಪ್ಪನ ಕಾವ್ಯದ ಪ್ರಸ್ತಾಪವಿದೆ:
ಹರಿಯಪ್ಪಾ ನೃಪತೀ ತಾ
ನರಸಾಸ್ಟ್ ರಾಜ್ಯೊಮಿನ್
ಪರಿಪಾಲಿತ್ಪ್ಪಾ ಭಾರತೊಂಟ್ತ್ತೋಂಪೆ
ತೆರಿತ್ ಸಂಭವ ಪರ್ವೊ
ಮರುಣಾಬ್ಜೇ ವಿರಚೀತೆ
ಧರಣೀಟುತ್ತಮೆರ್ ಮಾನಿಪುಕ್ಣಂದೊ? (ಸಂಧಿ-1 ಪಾಡ್ -13)
ನಮ್ಮ ರಾಜ್ಯವನ್ನು ಆಳುತ್ತಿರುವ ಹರಿಯಪ್ಪ ಬರೆದ [ಕರ್ಣಪರ್ವದ ಭಾಗವನ್ನು ಬಿಟ್ಟು] ಸಂಭವ ಪರ್ವದ ಭಾಗವನ್ನು ತೆಗೆದುಕೊಂಡು ಅರುಣಾಬ್ಜ ಎಂಬ ಹೆಸರಿನ ನಾನು ಲೋಕದ ಸಜ್ಜನರು ಗೌರವಿಸುವಂತೆ ಈ ಕಾವ್ಯವನ್ನು ಬರೆದಿದ್ದೇನೆ ಎಂದು ಅರುಣಾಬ್ಜ ಹೇಳಿಕೊಂಡರೆ, ಹರಿಯಪ್ಪ ತನ್ನ ಕಾವ್ಯಾರಂಭದಲ್ಲಿ ಹೀಗೆ ಹೇಳಿಕೊಂಡಿ ದ್ದಾನೆ:
ನೀತಿಜ್ಞೇ ಹರಿಯಪ್ಪೇ
ಭೂತಲಾಧಿಪೆ ತಾನ್
ಭೀತಿ ಕೊಂಡೆದ್ರ್ತ್ತೀ ವಿಷಯೊಂಟೆಡ್ಡಾ
ಸೂತನ್ನಂದನ್ ಪಾರ್ಥೇ
ಜೈತೀನಾ ಕಥೆನೀ ಪ್ರ-
ಖ್ಯಾತೋಮಾವ ರೆಚಿಪ್ಪೇರುಡರೀಪುಪ್ಪೆ?
ಭಾರತ ಕಥೆತುಳೈ
ಸಾರಾಯೊಮಾ ಉಳ್ಳ
ಸೂರ್ಯನಂದನ ಪರ್ವೊ ಪಣ್ಕೇನೆಂದ್
ವಾರಿಜಾಸನಭಾರ್ಯೆ-
ನೇರ ಪ್ರಾರ್ಥಿತೊಳ್ಪ್ಪೆ
ಯೀರ್ ನಿತ್ತಿರವೋಡು ರಸನಾಗ್ರಂಟ್
`ಮಹಾಭಾರತದಲ್ಲಿರುವ ಕರ್ಣಪರ್ವದ ಕಥೆಯನ್ನು ನಾನು ತುಳುವಿನಲ್ಲಿ ಕಾವ್ಯರೂಪದಲ್ಲಿ ರಚಿಸುತ್ತಿದ್ದೇನೆ, ಓ ಸರಸ್ವತೀ ದೇವೀ, ನೀವು ನನ್ನ ನಾಲಗೆಯ ತುದಿ ಯಲ್ಲಿ ನಿಂತು ನನಗೆ ಅನುಗ್ರಹ ಮಾಡಬೇಕು' ಎಂದು ಪ್ರಾಥರ್ಿಸುತ್ತಾನೆ. ಅರುಣಾಬ್ಜನೂ ಹರಿಯಪ್ಪನೂ ಸಮಕಾಲೀನರು. ಅದರಲ್ಲೂ ಹರಿಯಪ್ಪ ಹಿರಿಯ ಕವಿ. ಆತನ ಕಾಲ ಚರಿತ್ರೆಯ ಆಧಾರದಂತೆ ಕ್ರಿಸ್ತ ಶಕ 13ನೇ ಶತಮಾನ. ಆದರೆ ಹರಿಯಪ್ಪ ಹೇಳುವಂತೆ ಆತನಿಗಿಂತ ಹಿಂದೆಯೇ ಕಾವ್ಯ ಬರೆದವರಿದ್ದಾರೆ. ಅವರ ಅನುಗ್ರಹ ಪಡೆದು ಈ ಕರ್ಣಾರ್ಜುನರ ಕಾಳಗದ ಕಥೆಯನ್ನು ನಾನು ಕಾವ್ಯರೂಪದಲ್ಲಿ ಬರೆಯುತ್ತೇನೆ ಎನ್ನುತ್ತಾನೆ. ಆ ಕಾಲದಲ್ಲಿ ಸಾಕಷ್ಟು ವಿದ್ವದ್ಗೋಷ್ಠಿಗಳೂ, ಕವಿಕಾವ್ಯವಿಮರ್ಶೆಯೂ ನಡೆಯು ತ್ತಿತ್ತೆಂದು ಕೆಳಗಿನ ಪದ್ಯದಿಂದ ತಿಳಿಯಬಹುದು:
ದುಷ್ಟೆರೆಯ್ಯೆನ ಕಾವ್ಯೊ
ಭ್ರಷ್ಟ್ಂದ್ ತೆಳಿತಾರ್ಪೆರ್
ನಷ್ಟಮಾವೆರ್ ಸಾಕ್ಷಿಮುಡೆಪಿನಂತೆ
ಪುಷ್ಟೊಮಾವಧಿಕೊ ಸಂ-
ತುಷ್ಟೆರಾಸ್ಟ್ಂದೆ ಕೇಂಡೀ
ಶಿಷ್ಟೆರ್ ಸದ್ಗತಿನೀ ಪ್ರಾಪಿಪೆರಂತ್ಯೊಂಕ್
ಈತ ಜತೆಗೆ ತನ್ನ ಕಾವ್ಯರಚನೆಯಾದ ಕಾಲದ ಒಂದು ಗ್ರಹಕುಂಡಲಿಯನ್ನು ಪದ್ಯರೂಪದಲ್ಲಿ ಕೊಟ್ಟಿದ್ದಾನೆ:
ಧರಣಿಜೆಯರ್ಕೆಯಾ
ತುಲೆಟ್ತ್ತೆರುರಗೆಯಾ
ಗುರುವಾ ಕರ್ಕಟಕಂಟ್ ವೃಷಭಂಟಿಂದು
ಹರಿಸೂನು ಮಿಥುನೊಂಟ್
ಧನುಟ್ ಶುಕ್ರೆಲ ನಿಲ್ಪಾ
ಚರತೊಂಟೇ ರಚಿಯಿತೀ ಕಥೆಭಾರತೊನ್
ಈ ಕೆಳಗಿನ ಗ್ರಹಕುಂಡಲಿಯ ಆಧಾರದಂತೆ ಕರ್ಣಪರ್ವದ ಕಾಲ 1380ನೇ ಇಸವಿ [ಶಾಲಿವಾಹನ ಶಕ 1302] ಕ್ರೋಧನ ಸಂವತ್ಸರದ ಆಶ್ವೀಜ ಮಾಸ ಕೃಷ್ಣ ಪಕ್ಷದ ತದಿಗೆ, ಎಂದರೆ ಕ್ರಿಸ್ತ ಶಕ 1380ಕ್ಕೆ ಸರಿಹೊಂದುತ್ತದೆ ಎಂದು ಖ್ಯಾತ ಖಗೋಳತಜ್ಞ, ಪಂಚಾಂಗಕರ್ತ ಶ್ರೀ ವೆಂಕಟರಮಣ ಬನ್ನಿಂತಾಯರು ತಿಳಿಸಿದ್ದಾರೆ.
- |
- |
ಚಂದ್ರ |
ಶನಿ |
- |
|
ಗುರು ರಾಹು |
|
ಕೇತು |
- |
||
ಶುಕ್ರ |
- |
ರವಿ ಕುಜ |
ಬುಧ |
ಹರಿಯಪ್ಪ ಕವಿ ದೊಡ್ಡ ರಸಿಕ. ಕಾವ್ಯಾರಂಭದ ಗಣಪತಿಯ ಸ್ತುತಿಯಲ್ಲೇ ಆತನ ರಸಿಕತನ ಗೊತ್ತಾಗುತ್ತದೆ.
ಕದಳೀ ಪಕ್ವೊಮಿರೆಪ್ಪೋ
ಮದನಂ ಚಾಪೊಮ, ಬಕ್ಕೆ
ಪದಪಂರ್ದಾಸ್ಟ್ತ್ತೀ, ಬೆಲ್ಲೊಮ ನೆಯ್ಯಪ್ಪೊ
ಮೃದುವಾಸ್ಟುಳ್ಳಿಲು ಭಕ್ಷೊಂ-
ತಳೆನೀ ಸಾಧಿತಯೇ ತ್ರೈ -
ಮಧುರೊಂಟೇ ನನೆತೇ ಪೂಜಿಪೊ ಭಕ್ತೇರ್ಕ್ಳು
ಗಣಪತಿ ದೇವರಿಗೆ ಬಾಳೆಹಣ್ಣು, ಕಡುಬು, ಕಬ್ಬು, ಹದವಾಗಿ ಹಣ್ಣಾದ ಹಲಸಿನ ಕಾಯಿ, ಬೆಲ್ಲ, ತುಪ್ಪ, ಮೆತ್ತಗಿರುವ ಉಂಡ್ಲಿಕ್ಕ ಮುಂತಾದ ಭಕ್ಷ್ಯಗಳನ್ನು ತ್ರಿಮಧುರ ದೊಂದಿಗೆ ಕಲಸಿ ತಾನು ಸಮಪರ್ಿಸುವುದಾಗಿ ಕವಿ ಬರೆದಿದ್ದಾನೆ.
ತುಳುವಿನಲ್ಲಿ ಈಗ ಒಟ್ಟು ಹದಿಮೂರು ಕಾವ್ಯಗಳು ರಚಿತವಾಗಿವೆ ಎಂಬುದಕ್ಕೆ ಲಿಖಿತದಾಖಲೆಗಳಿವೆ. ಈಗ ದೊರೆತಿರುವ ಪ್ರಾಚೀನಕೃತಿಗಳಲ್ಲಿ ತುಳುಮಹಾಭಾರತವೇ ಅತ್ಯಂತ ಪ್ರೌಢವಾದುದು. ಹಾಗೆಂದು ಮಹಾಭಾರತವೂ ತುಳುವಿನ ಆದಿಕಾವ್ಯವಲ್ಲ. ಅದಕ್ಕಿಂತಲೂ ಮೊದಲು ತುಳುವಿನಲ್ಲಿ ರಾಮಾಯಣ ಕಾವ್ಯ ರಚನೆಯಾಗಿತ್ತು ಎಂದು ಆತನೇ ಸೂಚಿಸುತ್ತಾನೆ.
ತೆಳಿವುಳ್ಳಾಕುಳು ಭೂಮಿ
ತುಳೈ ರಾಮಾಯಣ ಕಾವ್ಯೊ
ತುಳುಭಾಷೆ ಕವಿಕುಳು ವಿಸ್ತಿರಿತೇರೈಯೇರ್
ಅಳಿಯೇನಾಕುಳೆ ಪಾದ-
ನಳಿನೊಂತಾ ಮಧುವುಣ್ಕೀ
ಯಿಳೆಟ್ ಭಾರತ ಕಾವ್ಯೊ ರೆಚಿಯೀಪುಪ್ಪೆ (ಸಂಧಿ-1, ಪಾಡ್-9)
`ತುಳುಭಾಷೆ ಕವಿಕುಳು' ಎಂದು ಬಹುವಚನವನ್ನು ಹೇಳಿರುವುದರಿಂದ ಕನಿಷ್ಠ ಪಕ್ಷ ಇಬ್ಬರಾದರೂ ತುಳುವಿನಲ್ಲಿ ರಾಮಾಯಣವನ್ನು ರಚಿಸಿರಬೇಕು ಎಂಬ ಊಹೆಗೆ ಅವಕಾಶವಿದೆ. ಅಂತಹ ಅಜ್ಞಾತಕವಿಗಳ ಪಾದಕಮಲಗಳ ತುಂಬಿ ನಾನು ಎಂಬ ಮಾತಿನಲ್ಲಿ ಆತನಿಗೆ ಪೂರ್ವಕವಿಗಳ ಬಗ್ಗೆ ಇರುವ ಗೌರವಭಾವವು ವ್ಯಕ್ತವಾಗುತ್ತದೆ.
ಅರುಣಾಬ್ಜನಿಗಿಂತ ಸುಮಾರು ಎರಡು ತಲೆಮಾರುಗಳ ಮೊದಲೇ ತುಳುವಿನಲ್ಲಿ ಕಾವ್ಯಪ್ರಕ್ರಿಯ ಆರಂಭವಾಗಿತ್ತು ಎನ್ನಬಹುದು. ಯಾಕೆಂದರೆ ಅವನ ಗುರುವಿನ ಗುರು ಒಬ್ಬ ಜಾಣ ಕವಿ ಎಂದು ಅವನೇ ಪ್ರಸ್ತಾವಿಸಿದ್ದಾನೆ.
ಏಣಾಪಾಣಿ ಮುಕುಂದ
ನಾಣಿಲ್ತಾಯೆ ಭಜೀತೆ
ಕ್ಷೊಣೀಟುತ್ತಮೆಯಾಸ್ಟೀ ದ್ವಿಜಕುಲಾಢ್ಯೆ
ಜಾಣೇ ನಿರ್ಮಿತೆ ಕಾವ್ಯೊ
ಮಾಣಾನೇ ವಿಕಸೀತ್
ಮಾಣೀಯೇನಾಯನ್ ಶಿಷ್ಯೆರೆಕ್ ಶಿಷ್ಯೆ (ಸಂಧಿ-1, ಪಾಡ್-8)
ನಾಣಿಲ್ತಾಯ ಕುಲದ ಏಣಾಪಾಣಿ ಮುಕುಂದ (ಶಂಕರನಾರಾಯಣ) ಎಂಬ ಪ್ರಸಿದ್ಧ ಕವಿಯ ಶಿಷ್ಯನ ಶಿಷ್ಯ ನಾನು - ಎನ್ನುತ್ತಾನೆ ಅರುಣಾಬ್ಜ. ಅರುಣಾಬ್ಜ ಕವಿಯ ಮೂಲಕ ನಮಗೆ ದೊರೆಯುವ ಕಾವ್ಯಗಳ ವಿಚಾರವನ್ನು ಈಗ ಪರಿಶೀಲಿಸೋಣ
ಹರಿಶ್ರೀ ರುಕ್ಮಿಣೀದೇವೀ
ವರಿಯೀತಿನ್ ಕಥೆ, ಭೀಮೆ
ಕೆರ್ಯೇ ಕೀಚಕನೆನ್ಕೀ ಚರಿತೇ, ಬಾಣನ್
ಕರೊ ಸಾರಾ ಮುರವೈರೀ
ತರಿತೀ ಕಥೆಯಾ ವಿ
ಸ್ತರಿತ್ ಗುಡ್ಡೆತರಾಯೆ ನಿಮರ್ಿತೆ ಲೋಕೊಂಟ್
(ಸಂಧಿ-1, ಪಾಡ್-10)
ರುಕ್ಮಿಣೀಸ್ವಯಂವರ, ಕೀಚಕವಧೆ, ಬಾಣಾಸುರ ವಧೆ - ಎಂಬೀ ಮೂರು ಕೃತಿ ಗಳನ್ನು `ಗುಡ್ಡೆತರಾಯೆ' ಎಂಬ ಕವಿ ರಚಿಸಿರುವನು ಎಂಬ ವಿಚಾರವು ಮೇಲಿನ ಪದ್ಯದಿಂದ ತಿಳಿದು ಬರುತ್ತದೆ. 'ಏಕಾದಶ್ಯುಪವಾಸೊಂತಾ ಕಾವ್ಯೊ' (ಅಂಬರೀಷೋ ಪಾಖ್ಯಾನವೆಂಬ ಕಾವ್ಯವನ್ನು) ರಚಿಸಿ, ಶ್ರೀಕೃಷ್ಣನ ಒಲುಮೆಗೆ ಪಾತ್ರನಾಗಿ, ಸಾಕ್ಷಾತ್ ಮುಕ್ತಿಯನ್ನು ಪಡೆದ ಒಬ್ಬ ಹಿರಿಯ ಕವಿಯನ್ನೂ ಆತ ಸ್ಮರಿಸುತ್ತಾನೆ.
ವಿದೇಶೀ ವಿದ್ವಾಂಸರಾದ ರೆ| ಜೆ. ಬ್ರಿಗೆಲ್ ಎಂಬರು `A Grammer of the Tulu Language’ಎಂಬ ಗ್ರಂಥದಲ್ಲಿ (ಪುಟ 133) Tulu Poetry : According to Metrical rules’ ಎಂಬ ಶೀರ್ಷಿಕೆಯ ಕೆಳಗೆ ಯಾವುದೋ ಅಜ್ಞಾತಕಾವ್ಯದ ನಾಲ್ಕು ಪದ್ಯಗಳನ್ನು ಉದಾಹರಿಸಿದ್ದಾರೆ. ಇಲ್ಲಿ ಉದಾಹರಣೆ ಕೊಟ್ಟದ್ದು ಆ ಕಾವ್ಯದ ಕೊನೆಯ ಪದ್ಯಗಳೆಂದೇ ಊಹಿಸಿದರೂ ಕಾವ್ಯದಲ್ಲಿ ಒಟ್ಟು 54 ಪದ್ಯಗಳಿವೆ ಎಂಬ ಸತ್ಯವನ್ನು ಅಲ್ಲಗಳೆಯು ವಂತಿಲ್ಲ. ಇಲ್ಲಿ 'ಗಿರಿಜಾಕಲ್ಯಾಣ' ಕಥೆಯ ಒಂದು ಛಾಯೆ ಕಾಣುತ್ತದೆ. ಅಂತು ತುಳುವಿ ಗೊಂದು ಪ್ರಾಚೀನ ಕಾವ್ಯಪರಂಪರೆ ಇತ್ತು ಎಂಬುದನ್ನು ಮೇಲಿನ ವಿಚಾರವು ಸ್ಪಷ್ಟಪಡಿಸುತ್ತದೆ.
ಅರುಣಾಬ್ಜನ ಕಾವ್ಯದಲ್ಲಿ ತುಳು ಕರ್ಣಪರ್ವವನ್ನು ಬರೆದ ವಿಜಯನಗರದ ಅರಸ ಹರಿಯಪ್ಪ ಕವಿಯ ಪ್ರಸ್ತಾಪವು ಬರುತ್ತದೆ. ಹರಿಯಪ್ಪನ ಕಾವ್ಯದಲ್ಲಿ ಅವನಿಗಿಂತಲೂ ಪೂರ್ವಕವಿಗಳನ್ನು ಅವನು ಸ್ತುತಿಸಿದ ಉದಾಹರಣೆ ದೊರೆಯುತ್ತದೆ. ಅಂತೂ ಕ್ರಿ.ಶ. 12-13ನೇ ಶತಮಾನವು ತುಳುಕಾವ್ಯಜಗತ್ತಿನ `ಸ್ವರ್ಣಯುಗ'ವಾಗಿತ್ತೆಂದು ಹೇಳಬಹುದು.
[ತುಳುಕರ್ಣಪರ್ವೊ, ಸಂ.: ವೆಂಕಟರಾಜ ಪುಣಿಂಚತ್ತಾಯ, ಪ್ರ: ಕೇರಳ ತುಳು ಆಕಾಡೆಮಿ, ಮಂಜೇಶ್ವರ, 2010 ಈ ಕೃತಿಯ ಮೊದಲ ಮಾತು.]
ಹಸ್ತಪ್ರತಿಗಳಲ್ಲಿರುವ ಹಳೆಯ ಸಾಹಿತ್ಯಕೃತಿಗಳನ್ನು ಹುಡುಕಿ ಓದುವುದು ಮತ್ತು ಅವುಗಳ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ನನಗೆ ಬಾಲ್ಯದಿಂದಲೂ ಆಸಕ್ತಿ ಯಿತ್ತು. ನನ್ನ ಪುಂಡೂರು ಮನೆತನದ ಹಿರಿಯರಲ್ಲಿ ಹಲವರು ಯಕ್ಷಗಾನಾಸಕ್ತರು; ಕೆಲವರು ಯಕ್ಷಗಾನಪ್ರಸಂಗಕರ್ತರು; ಕೆಲವರು ಪ್ರಸಂಗಗಳ ಪ್ರತಿಕಾರರು. ಈ ಹಿನ್ನೆಲೆ ಯಿಂದ ಬಂದ ನನಗೆ ಯಕ್ಷಗಾನಪ್ರಸಂಗಗಳೂ ಸೇರಿದಂತೆ ನಮ್ಮ ಪರಿಸರದಲ್ಲಿರುವ ಕಾಗದದ ಮತ್ತು ತಾಡವಾಲೆಯ ಹಸ್ತಪ್ರತಿಗಳನ್ನು ಸಂಗ್ರಹಿಸುವ ಮತ್ತು ಸಂಶೋಧನೆ ಮಾಡುವ ಅಭ್ಯಾಸ ಬೆಳೆಯಿತು.
ಹೀಗೆ ನಾನು ಸಂಗ್ರಹಿಸಿದವುಗಳಲ್ಲಿ ಕೆಲವನ್ನು ಉಪಯೋಗಿಸಿ ಮಾಹಿತಿ ಪಡೆದು, ಆಯಾ ಹಸ್ತಪ್ರತಿಗಳನ್ನು ರಕ್ಷಿಸಿಕೊಂಡುಬಂದವರಲ್ಲೇ ಕೊಟ್ಟು ಅದನ್ನು ಮುಂದೆಯೂ ಸಂರಕ್ಷಿಸಿಕೊಂಡು ಬರುವಂತೆ ಸೂಚನೆಗಳನ್ನು ಕೊಟ್ಟುದುಂಟು. ಕೆಲವನ್ನು ಆಯಾ ವಿಷಯದಲ್ಲಿ ಆಸಕ್ತರಾದ ಸಂಶೋಧಕವಿದ್ವಾಂಸರಿಗೆ ಉಪಯೋಗಕ್ಕಾಗಿ ನೀಡಿದ್ದುಂಟು. ಕೆಲವನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕೊಟ್ಟದ್ದುಂಟು. ಕಲ್ಲಿಕೋಟೆ ವಿಶ್ವವಿದ್ಯಾ ನಿಲಯದವರು ಪ್ರೊ. ಉಣಿತ್ತಿರಿಯವರ ನೇತೃತ್ವದಲ್ಲಿ ಕಾಸರಗೋಡು ಪರಿಸರಲ್ಲಿ ಹಸ್ತಪ್ರತಿ ಗಳ ಸಂಶೋಧನೆ ನಡೆಸುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ನಾನು ಅದಾಗಲೇ ಒಂದಿಷ್ಟು ದುಡಿದವನಾದುದರಿಂದ ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡರು. ಈ ಪರಿಸರದ ಹಲವಾರು ಹಳೆಯ ಮನೆಗಳಲ್ಲಿ ಸಂರಕ್ಷಿತವಾದ ಅನೇಕ ತಾಡವಾಲೆ ಗ್ರಂಥಗಳನ್ನು ಆಗ ಸಂಗ್ರಹಿಸಲಾಯಿತು. ಅವೆಲ್ಲ ಇಂದು ಕಲ್ಲಿಕೋಟೆ ವಿಶ್ವಿವಿದ್ಯಾನಿಲಯದಲ್ಲಿ ಸಂರಕ್ಷಿಸಿ ಇಡಲ್ಪಟ್ಟಿವೆ.
ಇಷ್ಟು ಹಸ್ತಪ್ರತಿಗಳನ್ನು ನಾನು ಪರಿಶೀಲಿಸಿದ್ದರೂ ಪ್ರಾಚೀನ ತುಳುಭಾಷೆಯಲ್ಲಿ ರಚಿತವಾದ ಲಿಖಿತ ಕೃತಿಗಳು ಉಪಲಬ್ಧವಾಗಬಹುದೆಂಬ ಯಾವ ಯೋಚನೆಯೂ ನನ್ನಲ್ಲಿರಲಿಲ್ಲ. ನನ್ನಲ್ಲಿ ಎಂದೇಕೆ, ತುಳುವಿನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಾರಿಗೂ ಆ ಕಲ್ಪನೆಯಿರಲಿಲ್ಲ. ತುಳುವಿನ ಪ್ರಾಚೀನಸಾಹಿತ್ಯವೆಂದರೆ ಪಾಡ್ದನಗಳು ಮಾತ್ರ ಎಂಬುದೇ ಎಲ್ಲರೂ ತಿಳಿದ ವಿಚಾರವಾಗಿತ್ತು. ತುಳುಲಿಪಿಯೇನೋ ನಮ್ಮಲ್ಲಿ ಹಳಬರಿಗೆ ಬಹಳ ಮಂದಿಗೆ ತಿಳಿದಿತ್ತು. ತುಳುಲಿಪಿಯಲ್ಲಿ ಬರೆದ ತಾಡವಾಲೆಯ ಮತ್ತು ಕಾಗದದ ಹಸ್ತ ಪ್ರತಿಗಳು ಇದ್ದುವು. ಆದರೆ ಆ ಗ್ರಂಥಗಳಲ್ಲಿ ಹೆಚ್ಚಿನವು ಸಂಸ್ಕೃತಭಾಷೆಯವು ಮತ್ತು ಮಂತ್ರ ಹಾಗು ವೈದಿಕಪ್ರಯೋಗಗಳು ಮೊದಲಾದುದಕ್ಕೆ ಸಂಬಂಧಪಟ್ಟವುಗಳಾಗಿದ್ದುವು. ತುಳುಲಿಪಿಯಲ್ಲಿ ಬರೆದ ತುಳುಗ್ರಂಥಗಳಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ಪಾಡ್ದನ ಗಳಂತೂ ಅಲಿಖಿತವಾಗಿಯೇ ಇದ್ದುವಷ್ಟೆ. ಅಲ್ಲದೆ ತುಳು ಭಾಷೆಗೆ ಕನ್ನಡಲಿಪಿಯನ್ನು ಅಳವಡಿಸಿ ಬರಹದ ರೂಪಕ್ಕೆ ತಂದವರು ಪಾಶ್ಚಾತ್ಯ ಕ್ರೈಸ್ತಮಿಶನರಿಗಳೆಂದು ಎಲ್ಲರೂ ತಿಳಿದಿದ್ದರು. ಆದರೆ ಅದಕ್ಕೂ ಮೊದಲೇ ತುಳು ಬರವಣಿಗೆಗೆ ತುಳುಲಿಪಿಯನ್ನೇ ಉಪಯೋಗಿಸಿಕೊಂಡು ನಮ್ಮವರೇ ಲೇಖನಕೃಷಿ ಮಾಡಿದ್ದರೇ ಎಂಬುದು ಯಾರಿಗೂ ತಿಳಿದಿರದ ವಿಚಾರವಾದುದರಿಂದ ತುಳುವೆಂಬುದು ಅಲಿಖಿತರೂಪದ ಆಡುಭಾಷೆ ಮಾತ್ರ ವೆಂದೇ ವ್ಯವಹಾರವಿತ್ತು. ಆದರೆ ಇತರ ಪ್ರಸಿದ್ಧ ಭಾಷೆಗಳಂತೆಯೇ ತುಳುವಿಗೂ ಸಾಹಿತ್ಯಕ ಪರಂಪರೆಯಿದೆಯೆಂಬುದನ್ನು ತೋರಿಸುವ ಅಪೂರ್ವವಾದ ಒಂದು ಸಂದರ್ಭವು ನನಗೊದಗಿ ಬಂದುದು ನಿಜವಾಗಿಯೂ ದೈವಸಂಕಲ್ಪವೇ ಸರಿ. ಹಸ್ತಪ್ರತಿಪರಿಶೀಲನೆಯ ನನ್ನ ಹವ್ಯಾಸ ಇಷ್ಟೊಂದು ದೊಡ್ಡ ಮಟ್ಟದ ಫಲ ನೀಡೀತೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ಮಧೂರಿನ ಶಿವನಾರಾಯಣ ಸರಳಾಯರ ಮನೆಯಲ್ಲಿ ಅವರಿಗೇ ತಿಳಿದಿರದ, ತುಳುನಾಡಿಗೂ ತುಳುಸಂಶೋಧಕರಿಗೂ ತಿಳಿದಿರದ ಒಂದು ಅಮೂಲ್ಯನಿಧಿ ತಾಡವಾಲೆ ಹಸ್ತಪ್ರತಿಯ ರೂಪದಲ್ಲಿ ಅಡಗಿಕುಳಿತಿತ್ತು. ತುಳುಸಾಹಿತ್ಯದ ಸುವರ್ಣಯುಗದ ಇತಿಹಾಸದ ಒಂದು ಅಂಶ ಅಲ್ಲಿ ಓಲೆಪುಸ್ತಕದ ರೂಪದಲ್ಲಿ ತಪಸ್ಸು ಮಾಡುತ್ತಿತ್ತು. ಸುಮಾರು ಸಾವಿರದ ಒಂಬೈನೂರ ಅರವತ್ತೊಂಬತ್ತರ ಒಂದು ಸುದಿನದಲ್ಲಿ ಆ ತಾಡವಾಲೆ ನನ್ನ ಕೈಸೇರಿದಾಗ ನನಗೆ ಆಶ್ಚರ್ಯವಾಯಿತು. ತುಳುಲಿಪಿಯನ್ನು ನಾನು ಆಗಲೇ ಓದಲು ಅಭ್ಯಾಸಮಾಡಿದ್ದೆ. ಆ ಹಸ್ತಪ್ರತಿ ತುಳುವಿನಲ್ಲಿ ಬರೆದ ತುಳುಭಾಷೆಯ ಅಮೂಲ್ಯಕಾವ್ಯ ವಾಗಿತ್ತು. ಆ ಕಾವ್ಯವೇ ತುಳುಭಾಗವತವೆಂದು ಅನಂತರ ಪ್ರಸಿದ್ಧಿ ಪಡೆದ `ಶ್ರೀಭಾಗವತೊ'.
ತುಳುವಿಗೆ ಸಾಹಿತ್ಯಕ್ಷೇತ್ರದ ಸ್ಥಾನಮಾನದಲ್ಲಿ ಹಿರಿಮೆಯನ್ನು ತಂದುಕೊಡಬಲ್ಲ, ಸಂಗತಿಯಾದುದರಿಂದ ಈ ಸಂಶೋಧನೆಯ ಕುರಿತು ಪತ್ರಿಕೆಗಳಿಗೆ ಬರೆದೆ. ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು. ಆದರೆ ಈ ಸುದ್ಧಿಯ ಬಗೆಗೆ ಜನರು ನಿರ್ಲಕ್ಷ್ಯವನ್ನೇ ತಾಳಿದರು. ತುಳುನಾಡಿನ ಜನಕ್ಕೆ ಅದೊಂದು ಅದ್ಭುತಸಂಗತಿಯೆನಿಸಲೇ ಇಲ್ಲ. ತಮಿಳುನಾಡಿನ ಹಸ್ತಪ್ರತಿ ಸಂಶೋಧಕ ಉ. ವೆ. ಸ್ವಾಮಿನಾಥ ಅಯ್ಯರ್ ಅವರಿಗೆ ತಮಿಳುಭಾಷೆಯ ಸಂಘಕಾಲದ ಕೃತಿಗಳ ಹಸ್ತಪ್ರತಿಗಳು ಉಪಲಬ್ಧವಾದಾಗ ಯಾವ ಒಂದು ರೋಮಾಂ ಚನವುಂಟಾಗಿತ್ತೋ (ನೋಡಿರಿ- ಬೆಳದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧ ಗಳು), ಭಾಸನ ನಾಟಕಕೃತಿಗಳ ಹಸ್ತಪ್ರತಿ ಮಹಾಮಹೋಪಾಧ್ಯಾಯ ಟಿ. ಗಣಪತಿ ಶಾಸ್ತ್ರಿಗಳಿಗೆ ಉಪಲಬ್ಧವಾದಾಗ ಯಾವ ಸಂತೋಷವುಂಟಾಗಿತ್ತೋ ಆ ಅನುಭವ ನನಗೆ ಅಂದು ಆಗಿತ್ತಾದರೂ ಆ ಅನುಭವವನ್ನು ತುಳುಜನತೆಗೆ ನಾನು ಮಾಡಿಸಿಕೊಡುವು ದೆಂತು? ನನ್ನ ತುಳುತಾಯಿ ಬಡವಳಲ್ಲವೆಂದು ಸಂತೋಷಿಸುತ್ತಾ ಆ ತುಳು ಭಾಗವತದ ಹಸ್ತಪ್ರತಿಯನ್ನು ತಂದು ನಮ್ಮ ಮನೆಯಲ್ಲಿ ಜೋಪಾನವಾಗಿರಿಸಿದೆ. ಸುಮಾರು ಹದಿನಾಲ್ಕು ವರ್ಷಗಳ ಕಾಲ ಆ ಹಸ್ತಪ್ರತಿಯನ್ನು ಏನು ಮಾಡಲಿಕ್ಕೂ ನನಗೆ ಸಾಧ್ಯವಾಗಲಿಲ್ಲ.
ತುಳುವಿನ ಈ ಪ್ರಾಚೀನಸಾಹಿತ್ಯಕೃತಿಯನ್ನು ತುಳುನಾಡಿನ ಜನತೆ ಗಮನಿಸಲೇ ಇಲ್ಲವೆಂಬುದಕ್ಕೆ ಅಪವಾದವೆಂಬಂತೆ ಮಂಗಳೂರಿನ ತುಳುಕೂಟದವರು ಅವರ ಸದಸ್ಯರು ಸೇರಿದ ನಾಲ್ಕಾರು ಜನರ ಸಭೆಯೊಂದರಲ್ಲಿ ಈ ಕೃತಿಯ ಬಗೆಗೆ ನನ್ನಿಂದ ಒಂದು ಉಪನ್ಯಾಸವನ್ನೇರ್ಪಡಿಸಿದರು. ಈ ಉಪನ್ಯಾಸದಿಂದಾಗಿ ಈ ತುಳುಕೃತಿಗೆ ವಿಶೇಷವಾದ ಪ್ರಚಾರವೂ ಸಿಕ್ಕಲಿಲ್ಲ. ಪ್ರಕಟನೆಗೆ ಯಾವೊಂದು ಸಹಾಯವೂ ಆಗಲಿಲ್ಲ.
ತುಳುಭಾಗವತಕ್ಕೆ ಹದಿನಾಲ್ಕು ವರ್ಷಗಳ ವನವಾಸ :
ತುಳುಭಾಗವತವು ಹದಿನಾಲ್ಕು ವರ್ಷಗಳ ಕಾಲ ನಮ್ಮ ಮನೆಯಲ್ಲೇ ಅನಾಥ ವಾಗಿ ಉಳಿಯಿತು. 1983ರಲ್ಲಿ ಈ ಹಸ್ತಪ್ರತಿಯ ಬಗೆಗೆ ಕೇಳಿ ತಿಳಿದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶ್ರೀನಿವಾಸ ಹಾವನೂರರ ನೇತೃತ್ವದಲ್ಲಿ ಡಾ. ಕೆ. ಸುಬ್ರಹ್ಮಣ್ಯ ಭಟ್ಟರೇ ಮುಂತಾದವರು ನಮ್ಮ ಮನೆಗೆ ಬಂದು, ಈ ತಾಡವಾಲೆಯ ಯೋಗಕ್ಷೇಮ ವಿಚಾರಿಸಿ, ಇದೊಂದು ಅಪೂರ್ವಕೃತಿ, ಇದನ್ನು ನಾವು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಕಟಿಸಬಹುದು. ಆದರೆ ಈ ತಾಡವಾಲೆ ನಿಮ್ಮ ಮನೆ ಯಲ್ಲೇ ಇದ್ದರೆ, ನಾವು ಏನು ಮಾಡಲೂ ಸಾಧ್ಯವಿಲ್ಲ. ಇದನ್ನು ನೀವು ವಿಶ್ವವಿದ್ಯಾ ನಿಲಯಕ್ಕೆ ದಾನಮಾಡಿದರೆ, ಅದರ ಮುದ್ರಣಕ್ಕೆ ನಾವು ಒಂದು ಯೋಜನೆಯನ್ನು ತಯಾರಿಸಬಹುದು - ಎಂದರು. ಅವರ ಸಲಹೆಯಂತೆ ನಾನು ತಾಡವಾಲೆಯನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದೆ. ಒಂದೇ ತಿಂಗಳೊಳಗೆ ಡಾ. ಹಾವನೂರರು ಮತ್ತು ಅವರ ಪರಿವಾರದವರು ಅದಕ್ಕೊಂದು ಯೋಜನೆಯನ್ನು ಸಿದ್ಧಪಡಿಸಿ, ಗ್ರಂಥಸಂಪಾದನಕಾರ್ಯ ಕ್ಕಾಗಿ ಗ್ರಂಥವನ್ನು ನನಗೆ ಮರಳಿಸಿದರು.
ನನ್ನ ಕಾರ್ಯ ಆರಂಭವಾಯಿತು. ಹಸ್ತಪ್ರತಿಯನ್ನು ಅಮೂಲಾಗ್ರವಾಗಿ ಒಮ್ಮೆ ಪರಿಶೀಲಿಸಿದೆ. ಮೊದಲಿಗೆ ಕನ್ನಡದಲ್ಲಿ ಲಿಪ್ಯಂತರ ಮಾಡಿ ಪ್ರತಿಮಾಡಬೇಕೆಂದು ಯೋಚಿ ಸಿದೆ. ಏಕೆಂದರೆ ಆ ತುಳುಲಿಪಿ ಇಂದಿನ ಕಾಲದಲ್ಲಿ ತೀರ ಅಪರಿಚಿತವಾದುದೇ ಆಗಿತ್ತು.
ಹಸ್ತಪ್ರತಿಯ ಅಕ್ಷರಗಳು ತುಂಬ ಚಿಕ್ಕದಾಗಿ ಮತ್ತು ಮೋಡಿಯಾಗಿ ಇದ್ದುದರಿಂದ ಭೂತಗನ್ನಡಿ ಹಿಡಿದೇ ಓದಬೇಕಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯವು ಅದನ್ನು ಪ್ರಕಟಿಸಲು ಮುಂದಾದಾಗ, ನಾನು ಅದರ ಗ್ರಂಥಸಂಪಾದನಕಾರ್ಯವನ್ನು ಆದಷ್ಟು ಜಾಗರೂಕತೆಯಿಂದ ನಡೆಸಲು ಸಿದ್ಧನಾಗಬೇಕಾಯಿತು. ಹೆಚ್ಚು ಪರಿಚಯವಿಲ್ಲದ ಲಿಪಿ, ಎಲ್ಲಿಯೂ ಓದದ, ಕೇಳದ ಹೊಸ ಪದಗಳು - ಇಂಥ ಗ್ರಂಥವೊಂದನ್ನು ನಾನೇ ಓದಿ, ನಾನೇ ಪ್ರತಿ ಮಾಡುವುದು ತುಂಬ ಕಷ್ಟದ ಕೆಲಸ ಎಂದು ನನಗೆನಿಸಿತು. ತುಳುಲಿಪಿಯಲ್ಲಿ ಹಾಗೂ ತುಳುಭಾಷೆಯಲ್ಲಿರುವ ಈ ಗ್ರಂಥವನ್ನು ನಾನು ಓದಿ ಹೇಳಿದ ಹಾಗೆ, ಕನ್ನಡದಲ್ಲಿ ಲಿಪ್ಯಂತರ ಮಾಡುವ ಕಾರ್ಯದಲ್ಲಿ ನನ್ನಾಕೆ ತುಂಬ ಸಹಕರಿಸಿದಳು.
ತಾಳೆಗರಿಯ ಗ್ರಂಥಗಳಲ್ಲಿ ಪದಪದಗಳ ನಡುವೆ ಅಂತರ(ಉಚಿಠಿ)ವಿರುವ ಪದ್ಧತಿಯಿಲ್ಲ. ಒಟ್ಟು ಉದ್ದಕ್ಕೆ ಬರೆಯುತ್ತಾ ಹೋಗುವುದೇ ರಿವಾಜಿ. ಒಂದು ಪದ್ಯ ಮುಗಿಯುವಲ್ಲಿ ಮೇಲಿಂದ ಕೆಳಕ್ಕೆ ಎಳೆಯಲಾರದ ಎರಡು ಗೆರೆಗಳು ಹಾಗು ಪದ್ಯಸಂಖ್ಯೆ ಬರೆದಿರುತ್ತದೆ. ಪದ್ಯಸಂಖ್ಯೆಯನ್ನು ಬರೆಯುವಾಗ ಕನ್ನಡ ಅಂಕೆಯನ್ನೇ ಬಳಸುವುದು ತುಳುಲಿಪಿಯ ಸಂಪ್ರದಾಯ. ಕನ್ನಡ ಅಂಕೆಯನ್ನು ಬಲ್ಲ ತುಳುವರೇ ಈ ಲಿಪಿಯನ್ನು ಕಂಡುಹಿಡಿದಿದ್ದಾರೆ ಎನ್ನುವುದಕ್ಕೇ ಇದೂ ಒಂದು ಪುರಾವೆಯಾಗಬಹುದು.
ವಿಷ್ಣು ತುಂಗನ ಕಾಲನಿರ್ಣಯ :
ತುಳುಭಾಗವತದಲ್ಲಿ ವಾಸ್ತವಿಕವಾಗಿ ಬಂದಿರುವ ಜಾತಕದ ವಿವರವೊಂದು ಕವಿಯ ಕಾಲ ನಿರ್ಣಯಕ್ಕೆ ಸಹಾಯಮಾಡಿತು. ತುಳುಭಾಗವತದಲ್ಲಿ ಬಂದು `ಗುರು ಕನ್ಯೆಟ್....' ಎಂದು ತೊಡಗುವ ಪದ್ಯವೊಂದನ್ನು ಪ್ರಸಿದ್ಧ ಜ್ಯೋತಿಷಿಗಳೂ ಪಂಚಾಂಗ ಕರ್ತರೂ ಆಗಿದ್ದ ಶ್ರೀ ಕರಿಂಕ ಕೃಷ್ಣ ಬನ್ನಿಂತಾಯರಿಗೆ ಕಳುಹಿಸಿ ಕೊಟ್ಟೆ. ಅವರು ಅದನ್ನು ಪರಿಶೀಲಿಸಿ ಜಾತಕಪದ್ಯದ ಆಧಾರದ ಪ್ರಕಾರ ಕವಿಯ ಕಾಲ ಕ್ರಿ. ಶ. 1636 ಆಗಿರಬೇಕು ಎಂದರು. ಅವರ ಸಲಹೆಯಂತೆ ವಿಷ್ಣು ತುಂಗನಿಗೆ ಹದಿನೇಳನೆಯ ಶತಮಾನದ ಪಟ್ಟ ಕಟ್ಟಲಾಯಿತು. ಕವಿಯ ಊರು ಹೇರೂರು ಇರಬಹುದೇ ಎಂಬ ಒಂದು ಊಹೆಯನ್ನು ನಾನೇ ಮಾಡಿದೆ.
ಅರ್ಥನಿರ್ಣಯ :
ಭಾಗವತವನ್ನು ಸಂಪಾದಿಸುವಾಗ ಅಲ್ಲಿ ಉಪಯೋಗಿಸಿದ ಭಾಷೆಗೆ ಅರ್ಥ ಹೇಳುವ ಹೊಣೆಗಾರಿಕೆ ನನ್ನ ಮೇಲೆ ಬಂತು. ಪದ್ಯಗಳ ಸಂಖ್ಯೆಯನ್ನು ನಮೂದಿಸಿ ಅಡಿಟಿಪ್ಪಣಿಯಲ್ಲಿ ಅರ್ಥಗಳನ್ನು ಬರೆದೆ. ಹಲವು ಶಬ್ದಗಳ ಸಂದರ್ಭಗಳನ್ನು ಚಿಂತಿಸುತ್ತಾ ನಿದ್ದೆ ಬಿಡಬೇಕಾಯಿತು. ಬ್ರಾಹ್ಮಣರ ಆಡುಮಾತಿನಿಂದ ತೊಡಗಿ ಹರಿಜನ-ಗಿರಿಜನರ ವರೆಗಿನ ವಿವಿಧ ಸಮಾಜದ ತುಳುಪ್ರಭೇದಗಳ ಮತ್ತು ವಿವಿಧಪ್ರದೇಶಗಳ ತುಳು ಆಡು ನುಡಿಗಳ ಸಾಮಾನ್ಯಪರಿಚಯ ನನಗಿದ್ದುದರಿಂದ, ಹಿಂದುಳಿದವರೆಂದು ದೂರೀಕರಿಸಲ್ಪಟ್ಟ ಸಮಾಜಗಳ ಅನೇಕ ವಯೋವೃದ್ಧರ ಪರಿಚಯವೂ ಇದ್ದುದರಿಂದ ಸಹಾಯವಾಯಿತು. ಅರ್ಥನಿರ್ಣಯಕ್ಕೆ ವ್ಯಾಕರಣವು ಮೊದಲ ಆಧಾರವಂತೆ. ಹಳೆ ತುಳುಭಾಷೆಯ ವ್ಯಾಕರಣ ವನ್ನು ತುಳುಭಾಗವತದ ಆಧಾರದಿಂದ ಮೊದಲಿಗೆ ನಾನು ಕಂಡುಕೊಳ್ಳಬೇಕಾಯಿತು. ಮೂಲಭಾಗವತವನ್ನೂ ಕನ್ನಡಭಾಗವತವನ್ನು ಇರಿಸಿಕೊಂಡು ಸಂದರ್ಭವನ್ನು ನೋಡಿ ಕೊಂಡು ಅರ್ಥಗಳನ್ನೂ ವ್ಯಾಕರಣಪ್ರಯೋಗಗಳನ್ನೂ ಗುರುತಿಸುತ್ತಾ ಹೋದೆ. ಅಧ್ಯಯನ ಮಾಡುತ್ತಾ ಹೋದಂತೆ ಹಳೆಯ ತುಳು ನನಗೆ ತನ್ನನ್ನು ತೆರೆದು ಪ್ರದರ್ಶಿಸುತ್ತಾ ಹೋಯಿತು. ಹಳೆಯ ತುಳುವಿನ ಅರ್ಥವಿವರಣೆಗಳಲ್ಲಿ ಭಿನ್ನಾಭಿಪ್ರಾಯಗಳಿರಬಹು ದಾದರೂ ಹೆಚ್ಚಿನ ಸಂದರ್ಭಗಳಲ್ಲಿ ಸಾಕಷ್ಟು ತೃಪ್ತಿಕರವಾದ ಅರ್ಥವನ್ನು ಕಂಡುಕೊಂಡ ಆತ್ಮವಿಶ್ವಾಸ ನನ್ನದು. ಭಾಗವತದ ಸಂಪಾದನೆಯಲ್ಲಿ ನಾನು ಪಟ್ಟ ಪರಿಶ್ರಮದಿಂದಾಗಿ, ಮುಂದೆ ದೊರಕಿದ ಕಾವೇರಿ, ದೇವೀಮಹಾತ್ಮೆ, ಮಹಾಭಾರತಗಳ ಅರ್ಥನಿರ್ಣಯಕ್ಕೆ ನನಗೆ ಸುಲಭವೇ ಆಯಿತೆನ್ನಬಹುದು. ಈ ಕೃತಿಗಳನ್ನೂ ದೈವವು ನನ್ನ ಮೂಲಕ ತುಳುನಾಡಿಗೆ ತೆರೆದು ತೋರಿಸಿದ್ದು ನನಗೊದಗಿದ ದೈವಕೃಪೆಯಲ್ಲದೆ ಬೇರಿನ್ನೇನು ಹೇಳಬೇಕೆಂದು ತೋಚುವುದಿಲ್ಲ.
ತುಳುವಿನಲ್ಲಿ ÙರÙಳ :
ಕನ್ನಡ ಮಲೆಯಾಳ ತಮಿಳು ಭಾಷೆಗಳಲ್ಲಿ 'ÙರÙಳ'ವಿರುವುದು ನಮಗೆ ಗೊತ್ತು. ಆದರೆ ತುಳುವಿನಲ್ಲೂ 'ÙರÙಳ'ವಿದೆಯೆಂಬುದಕ್ಕೆ ಯಾವುದೇ ಆಧಾರ ನಮಗೆ ಸಿಕ್ಕಿರಲಿಲ್ಲ. ಸುಮಾರು ಹನ್ನೆರಡನೆಯ ಶತಮಾನದ್ದೆಂದು ಊಹಿಸಲಾದ ಕಾಸರಗೋಡು ಜಿಲ್ಲೆಯ ಅನಂತಪುರ ಶಾಸನದಲ್ಲಿ ÙರÙಳಾರಳಾಕ್ಷರದ ಬಳಕೆ ಕಂಡುಬರುತ್ತದೆ. ಹಾಗೆಯೇ ತುಳು ಭಾಗವತ, ತುಳುಕಾವೇರಿ, ತುಳುಮಹಾಭಾರತ, - ಮುಂತಾದ ತುಳುಕಾವ್ಯಗಳಲ್ಲೂ ÙರÙಳಾಕ್ಷರವಿದೆ. ಕನ್ನಡದಲ್ಲಿ ಸುಮಾರು ಹನ್ನೆರಡನೆಯ ಶತಮಾನದ ಮೊದಲು ÙರÙಳವು ಬಳಕೆಯಲ್ಲಿತ್ತು. ಅನಂತರದ ಕಾವ್ಯಗಳಲ್ಲಿ ಅದು ಕಂಡುಬರುವುದಿಲ್ಲ. ವಿಷ್ಣು ತುಂಗನು ಕನ್ನಡಭಾಗವತವನ್ನೋದಿ ಅದರ ಆಧಾರದಲ್ಲಿ ತುಳುಭಾಗವತವನ್ನು ರಚಿಸಿದವನು. ಅವನಿಗೆ ÙರÙಳಾಕ್ಷರದ ಬಳಕೆ ಅನಿವಾರ್ಯವಾಗಿತ್ತು. ಎಂದರೆ, ಆ ಕಾಲದಲ್ಲಿ ತುಳುವಿನಲ್ಲಿ ÙರÙಳಾಕ್ಷರವಿತ್ತು ಎಂದು ಅರ್ಥ. ಮಲೆಯಾಳಲಿಪಿಯಿಂದ ತುಳುಲಿಪಿ ಹುಟ್ಟಿದ್ದಾದರೆ, ಮಲೆಯಾಳದಲ್ಲಿ ಬರೆಯುವ ಹಾಗೆಯೇ ರಳ(Ùಳ)ವನ್ನು ತುಳುವಿನಲ್ಲೂ ಬರೆಯಬೇಕಿತ್ತು. ಆದರೆ ತುಳುವಿನ ÙರÙಳದ ಸಂಕೇತ ಬೇರೆಯೇ ರೀತಿಯಲ್ಲಿದೆ. ಅದು ಮಲೆಯಾಳದ ಹಾಗಿಲ್ಲ. ಅದು ಬಹುಮಟ್ಟಿಗೆ ಕನ್ನಡದ ÙರÙಳವನ್ನೇ ಹೋಲುತ್ತಿದೆ.
ಸ್ಟ್ ಎಂಬ ಧ್ವನಿಮಾ :
ಆಧುನಿಕ ತುಳುವರಿಗೆ ತುಂಬ ಅಪ್ರಿಯವಾಗಬಹುದಾದ 'ಸ್ಟ್' ಎಂಬ ಅಪೂರ್ವ ಅಕ್ಷರದ ಬಳಕೆಯನ್ನು ಎಲ್ಲ ಪ್ರಾಚೀನ ತುಳುಕಾವ್ಯಗಳಲ್ಲೂ ಕಾಣಬಹುದು. ಇದರ ಉಚ್ಚಾರ 'ಸ್ಟ್' ಎಂದೇ ವ್ಯಕ್ತವಾಗಿ ಇರಲಾರದು. ಇದಕ್ಕೆ ಶಿಥಿಲದ್ವಿತ್ವವೂ ಇದೆ. ಇದು ಪ್ರಾಚೀನತುಳುವಿನ ಯಾವುದೋ ಒಂದು ವಿಶಿಷ್ಟ ಧ್ವನಿಮಾ ಆಗಿರಬೇಕು. ನಿಂಜಿಸ್ಟ್, ಪಾಡ್ಸ್ಟ್, ಉದ್ಸ್ಟ್ - ಹೀಗೆ ಅಪೂರ್ಣಭೂತಕಾಲದಲ್ಲಂತೂ ಇದರ ಪ್ರಯೋಗ ಸವರ್ೇ ಸಾಮಾನ್ಯ. ಇತರ ಕೆಲವು ಕಡೆಗಳಲ್ಲಿಯೂ, ಇದು ಕಾಣಿಸಿಕೊಳ್ಳುತ್ತದೆ. ಪದಾದಿಯಲ್ಲೂ ಇದರ ಬಳಕೆಯಿದೆ. ಉದಾ: ಸ್ಪೇನ್ (ನಾನು), ಸ್ಟೀಯ್ಯ್ (ನೀನು), ಸ್ಟ್ಬೆರ್ (ಇವರು) ಇತ್ಯಾದಿ. ತುಳುಮಹಾಭಾರತದಲ್ಲಂತೂ ಅಕಾರದಿಂದ ಆರಂಭವಾಗುವ ನಾಮಪದಗಳಿಗೂ ಇದು ಸೇರಿಕೊಂಡಿದೆ. ಉದಾ: ಸ್ಟಶ್ವತ್ಥಾಮಾ(ಅಶ್ವತ್ಥಾಮ) - ಇತ್ಯಾದಿ. ಕೆಲವೆಡೆ ಇದು ಅ್ಕಾರದ ಪಯರ್ಾಯವಾಗಿ ಬಳಕೆಯಾಗಿದೆ. ಹಾಗಾದರೆ ಇವರ ನಿಜವಾದ ಉಚ್ಚಾರ ಹೇಗೆ? ಊಹಿಸಲಿಕ್ಕೆ ಅಸಾಧ್ಯವಾಗಿದೆ! ಆಧುನಿಕ ಕನ್ನಡಿಗರು 'ÙರÙಳ'ವನ್ನು ಮರೆತಂತೆ, ಆಧುನಿಕ ತುಳುವರೂ ಕ್ರಮೇಣ 'ಸ್ಟ್' ಧ್ವನಿಮಾವನ್ನು ಮರೆಯುತ್ತಾ ಬಂದಿರಬೇಕು. ಆದರೆ ತುಳುವಿನ ಪ್ರಾಚೀನಗ್ರಂಥಗಳನ್ನು ಓದುವವರು ಈ 'ಧ್ವನಿಮಾ'ವನ್ನು ಜೀಣರ್ಿಸಿಕೊಳ್ಳದೆ ನಿವರ್ಾಹವಿಲ್ಲ. `ತುಳುಮಹಾಭಾರತ', `ಭಾಗವತ', `ಕಾವೇರಿ' ಕಾವ್ಯಗಳಲ್ಲಿ ಇದು 'ಸ್ಟ್' ಎಂದಿದ್ದರೆ, ತುಳುದೇವೀಮಹಾತ್ಮೆಯಲ್ಲಿ 'ಸ್ದ್' ಆಗಿ, ಅನಂತರದ ಕಾಲಘಟ್ಟದ ತುಳುವಿನಲ್ಲಿ, ಇದು 'ಸ್ತ್' ಆಗಿ ರೂಪುಗೊಂಡ ಉದಾಹರಣೆಗಳಿವೆ.
ಅರ್ಥ ತಿಳಿದ ಸಂದರ್ಭಗಳು :
ತುಳು ಭಾಗವತವನ್ನು ಸಂಪಾದಿಸುತ್ತಿದ್ದ ಸಂದರ್ಭದಲ್ಲಿ ನನ್ನ ಮನಸ್ಸಿನ ತುಂಬ ಹಳೆಯ ತುಳುವಿನ ಶಬ್ದಗಳು, ಕಠಿನಪದಗಳು ಹೊಯ್ದಾಡುತ್ತಿದ್ದವು. ನಿಂತಲ್ಲಿ ಕುಳಿತಲ್ಲಿ ನಡೆಯುವಲ್ಲಿ ಇವು ನನ್ನ ಮುಂದೆ ಪ್ರಶ್ನಾರ್ಥಕ ಚಿಹ್ನೆಯಿಂದ ಕುಣಿಯುತ್ತಿದ್ದುವು. ನಿದ್ದೆ ಬಿಟ್ಟು ಚಿಂತಿಸಿದರೂ ಅವು ತಿಳಿಯುತ್ತಿರಲಿಲ್ಲ. ಆದರೆ ಅನಿರೀಕ್ಷಿತವಾಗಿ ಅರ್ಥ ತಿಳಿದು ಸಮಸ್ಯಾಪರಿಹಾರವಾದ ಹಲವು ಸಂದರ್ಭಗಳನ್ನು ನಾನು ಮರೆಯುವಂತಿಲ್ಲ. ಆ ಅರ್ಥವು ಸಂದರ್ಭಕ್ಕೆ ಸುಯೋಗ್ಯವಾಗಿ ಹೊಂದಾಣಿಕೆಯಾಗಿ ಮುಂದಿನ ದಾರಿ ನನಗೆ ಕಂಡಾಗ ಆದ ಸಂತೋಷದ ಕ್ಷಣಗಳನ್ನು ಹಲವು ವರ್ಷಗಳ ಅನಂತರ ಇಂದೂ ನೆನೆದು ಸಂತೋಷಪಡುತ್ತಿದ್ದೇನೆ. ಪ್ರಾಚೀನ ತುಳುಕಾವ್ಯಗಳ ಸಂಪಾದನೆಯ ಕಾಲದ ಅಂತಹ ಒಂದೆರಡು ಸಂದರ್ಭಗಳನ್ನಾದರೂ ಇಲ್ಲಿ ಹೇಳಬೇಕು.
ತುಳುಭಾಗವತದಲ್ಲಿ ಇಂಗ್ಲಿಷ್ ಪದವೆ ...?
ತುಳುಭಾಗವತದ ಪೀಠಿಕಾಭಾಗದಲ್ಲಿರುವ ಒಂದು ಪದ್ಯ ಹೀಗಿದೆ:
ಲೆಕ್ಕೊಮಾಂಪೊಳಿನಂಬರ್ಟ್ಪ ಜೋಜಕೀನುಡುಸಂಕುಲಂ
ಲೆಕ್ಕೊಮಾಂಪೊಳಿ ಭೂಮಿಟ್ ನಿದೆಸ್ಟ್ತ್ತಿ ಧೂಳಿತ ರಾಶಿನೀ
ಲೆಕ್ಕೊಮಾಂಪೊಳಿ ವರ್ಷಧಾರೆನಿ, ಸಾಗರಾತಿರಮಾಲೆನೀ
ಲೆಕ್ಕೊಮಾಂಪಿಯರೇರ್ ಶ್ರೇಷ್ಠರನಂತಮೂರ್ತಿಗುಣೊಂಕುಳೇ (1-2-32)
ಇಲ್ಲಿ ಲೆಕ್ಕೊಮಾಂಪೊಳಿ ನಂಬರಂಟ್ಪ ಎಂದರೇನು? ನಂಬರ್ ಹಾಕಿ ಲೆಕ್ಕ ಮಾಡಬಹುದೆಂದೇ? ಹಾಗೆ ಬರೆದರೆ ಕಾವ್ಯದ ಗೌರವ ಎಲ್ಲಿ ಉಳಿಯಿತು? ಕ್ರಿ.ಶ. ಹದಿನೇಳನೆ ಶತಮಾನದ ಒಂದು ಕಾವ್ಯದಲ್ಲಿ ಇಂಗ್ಲಿಷ್ ಪದ ಇರಲು ಸಾಧ್ಯವೇ - ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದುವು. ನನ್ನ ತಲೆಗೆ ಉಷ್ಣವೇರಿತು. ಸುಮಾರು ದಿನಗಳ ವರೆಗೆ ಅದೇ ತಲೆಯಲ್ಲಿ ಸುಳಿಯುತ್ತಿತ್ತು.
ಗ್ರಂಥಸಂಪಾದನೆಯ ಕೆಲಸ ಮುಂದುವರೆಸುತ್ತಾ ಹೋದಂತೆ, ಮುಂದೆ ಒಂದೆಡೆ 'ಪೋಯಿರಿನ' ಎಂಬೊಂದು ಕ್ರಿಯಾಪದ ಕಾಣಸಿಕ್ಕಿತು. ಇನ್ನೂ ಮುಂದೆ ಹೋದಾಗ ಮತ್ತೂ ಅಂತಹ ಕ್ರಿಯಾಪದಗಳೇ ಎದುರಾದುವು. ಈಗ ನನ್ನ ಸಮಸ್ಯೆ ಪರಿಹಾರ ವಾಯಿತು. ಹಳೆಯ ತುಳುವಿನಲ್ಲಿ ಈ 'ನ' ಪ್ರತ್ಯಯ ಸರ್ವೇಸಾಮಾನ್ಯವಾದುದು ಎಂದು ತಿಳಿಯಿತು. 'ಲೆಕ್ಕೊಮಾಂಪೊಳಿನ+ಅಂಬರಂಟ್ಪ ಜೋಜಕೀನ ಉಡುಸಂಕುಲಂ' (ಆಕಾಶದಲ್ಲಿ ಕಾಣುವ ನಕ್ಷತ್ರಗಳ ಗುಂಪನ್ನಾದರೂ ಲೆಕ್ಕಮಾಡಬಹುದು) ಎಂದು ಪದವಿಂಗಡಣೆ ಮಾಡಿದಾಗ ಅರ್ಥ ಸುಲಭವಾಯಿತು. 'ನಂಬರ'ವೂ ಮಾಯವಾಯಿತು.
'ವಿಶ' ಪ್ರಯೋಗ :
ಅಶರೀರತೆಟೆಂಕ್ ವಚೀತಿ ಹಿತಂ
ವಿಶ ಸಂಗ್ರಹಿತಾರೆಕ್ ವಂದಿತೆನ್
ದೃಶಿಟೀಕ್ಷಿಪನಂದೊಮೆ ಜ್ಞಾನರವಿ
ಪ್ರಸವೀತ್ಣ್ ನಿಂಜ ಮನೊಂತುಳೆಯಿ (1-5-32)
ಮೇಲಿನ ಪದ್ಯದಲ್ಲಿ 'ವಿಶ ಸಂಗ್ರಹಿತ್' ಎಂದರೇನು? ವಿಷ್ಣು ತುಂಗನ 'ವಿಶ' ಪ್ರಯೋಗ ನನಗೆ ವಿಷಪ್ರಾಯವೇ ಆಯಿತು. ಸಂಸ್ಕೃತ ಶಬ್ದಕೋಶದಲ್ಲಿ 'ವಿಶ' ಎಂಬ ಪದಕ್ಕೆ ಸಂಪೂರ್ಣವಾಗಿ (Entirely - Apte ) ಎಂಬ ಅರ್ಥವಿದೆ. ಈ ಅರ್ಥವನ್ನು ಆಯ್ದುಕೊಂಡರೆ ಪದ್ಯವನ್ನು ಹೀಗೆ ಅರ್ಥ ಮಾಡಬಹುದು.
ಅಶರೀರವಾಣಿಯು ನನಗೆ ಹೇಳಿದ ಹಿತವಚನವನ್ನು ಸಂಪೂರ್ಣವಾಗಿ ಮನನ ಮಾಡಿ ನಾನು ಅವರಿಗೆ ವಂದಿಸಿದೆ. ಹೊರಗಣ್ಣಿನಿಂದ ಕಾಣಲು ಸಾಧ್ಯವಾಗದ ಜ್ಞಾನ ರವಿಯ ಅನಂತರಾಶಿಯು ನನ್ನ ಮನದೊಳಗೆ ಸೃಷ್ಟಿಯಾಯಿತು.''
ಮುಂದೆ ಇನ್ನೊಂದು ಪದ್ಯದಲ್ಲಿ 'ವಿಶಾ ಪೋಲಾಂದೆ ಮಹೀಶೆ' ಎಂಬೊಂದು ವಾಕ್ಯವು ಕಾಣಸಿಕ್ಕಿತು. ಇಲ್ಲಿ 'ವಿಶಾ' ಎಂಬುದಕ್ಕೆ ಏನರ್ಥ? ಈ ಹಿಂದೆ ಕೊಟ್ಟಿರುವ ಅರ್ಥವನ್ನೇ ಆಯ್ದುಕೊಂಡರೆ 'ವಿಶಾ ಪೋಲಾ' `ಸಂಪೂರ್ಣವಾಗಿ ಹೋಗು' ಎಂದು ಅರ್ಥ ಹೇಳಬೇಕಾಗುತ್ತದೆ. ಆಗ ಅದು ಅನರ್ಥಪ್ರಯೋಗವಾಗುತ್ತದೆ. 'ವಿಶಾ' ಶಬ್ದ ಮತ್ತೆ ನನ್ನ ತಲೆಗೆಡಿಸಿತು. ಆ ದಿನವಿಡೀ ನನ್ನ ತಲೆಯಲ್ಲಿ ಅದೇ ಶಬ್ದ ಕಿರಿಕಿರಿ ಮಾಡುತ್ತಿತ್ತು. ಸಂಜೆ ಎಡನೀರು ಸಂಕ ದಾಟುತ್ತಿದ್ದಾಗ ಒಂದು ಘಟನೆ ನಡೆಯಿತು. ಆ ಕಡೆಯಿಂದ ಒಂದು ಲಾರಿ ಬರುತ್ತಿತ್ತು. ನನ್ನ ಹಿಂದೆ ಬರುತ್ತಿದ್ದ ವೃದ್ಧೆಯೊಬ್ಬಳು ಆಕೆಯ ಒಟ್ಟಿಗಿದ್ದ ಮಗುವಿನೊಡನೆ ಬೀಸ ಪೋಲ; ಲಾರಿ ಬರ್ಪುಂಡು (ಬೇಗನೆ ಹೋಗು; ಲಾರಿ ಬರುತ್ತದೆ) ಎಂದಳು. ಮುದುಕಿ ಹೇಳಿದ `ಬೀಸ ಪೋಲ'ಕ್ಕೂ ತುಳುಭಾಗವತದ 'ವಿಶಾ ಪೋಲ'ಕ್ಕೂ ಏನಾದರೂ ಸಂಬಂಧವಿದೆಯೇ? ನನ್ನ ಮನಸ್ಸು ಅದನ್ನೇ ಯೋಚಿಸು ತ್ತಿತ್ತು. ನೇರವಾಗಿ ಮನೆಗೆ ಹೋದೆ ಎಲ್ಲೆಲ್ಲಿ 'ವಿಶಾ' ಪ್ರಯೋಗವಿದೆಯೋ ಅಲ್ಲೆಲ್ಲ ಬೀಸ (ಬೇಗ) ಎಂಬ ಅರ್ಥವನ್ನು ಹೊಂದಿಸಿನೋಡಿದಾಗ, ವಾಕ್ಯಾರ್ಥವು ಸರಿಯಾಗಿ ಮೂಡಿ ಬಂತು.
'ಕುಡಿಕೂರೆ'ಯ ಅರ್ಥ :
ತುಳುಭಾಗವತದಲ್ಲಿ 'ಕುಡಿಕೂರೆ' ಎಂಬೊಂದು ಪದವಿದೆ. ಮೆರವಣಿಗೆ ಹೋಗು ವಾಗ ಸತ್ತಿಗೆ-ಪತಾಕೆಗಳನ್ನು ಹಿಡಿಯುವಂತೆ ಕೂಡಿಕೊರೆಯನ್ನೂ ಹಿಡಿಯುತ್ತಿದ್ದರೆಂದು ಅಲ್ಲಿ ವರ್ಣಿಸಿದೆ. ಕುಡಿಕೂರೆಯೆಂದರೇನು? ಅರ್ಥವಾಗಲೇ ಇಲ್ಲ. ಪ್ರತಿವರ್ಷವೂ ಎಡನೀರಿಗೆ ಪಾಡಿಯಿಂದ ಒಂದು ಭೂತದ ಮೆರವಣಿಗೆ ಬರುವ ಪದ್ಧತಿಯಿದೆ. ಆಗ ಮೆರವಣಿಗೆಯ ಮುಂಭಾಗದಲ್ಲಿ ಕೆಲವರು, ಪಕ್ಕೆ ನಿಶಾನಿ ಮುಂತಾದ ಹೆಸರುಗಳುಳ್ಳ ಕೆಲವು ಬಾವುಟಗಳನ್ನು ಹಿಡಕೊಂಡು ಬರುತ್ತಿದ್ದರು. ಅವರಲ್ಲೊಬ್ಬನನ್ನು ಕರೆದು 'ಕುಡಿಕೂರೆ' ಎಂದರೇನು? ಎಂದು ವಿಚಾರಿಸಿದೆ. ಆತನಿಂದ ನನಗೆ ಸರಿಯಾದ ಉತ್ತರ ಸಿಕ್ಕೀತು ಎಂಬ ಭರವಸೆ ಇರಲಿಲ್ಲ. ಆದರೆ, ಆತ ಹೇಳಿದ ಕುಡಿಕೂರೆ ಅಂದರೆ ಮನುಷ್ಯಾಕೃತಿಯ ಚಿತ್ರವುಳ್ಳ ಒಂದು ತರಹದ ಬಾವುಟ. ಹಿಂದೆ ನಾವು ಭೂತದ ಮೆರವಣಿಗೆಯಲ್ಲಿ ಅದನ್ನು ಬಳುಸುತ್ತಿದ್ದೆವು. ಈಗ ಅಂಥದನ್ನೆಲ್ಲ ಹೊರಲು ಜನ ಸಿಕ್ಕುವುದಿಲ್ಲ; ಹಾಗೆ ಕೈ ಬಿಟ್ಟಿದ್ದೇವೆ.
ಅಂತೂ ಕುಡಿಕೂರೆಯ ಅರ್ಥ ಆತನಿಂದ ನನಗೆ ತಿಳಿದು ಬಂತು.
ಮೇಗಾಳಿ - ಕಿಗ್ಗಾಳಿ :
ಡಿ. ಎಲ್. ನರಸಿಂಹಾಚಾರ್ಯರು ಹರಿಶ್ಚಂದ್ರಕಾವ್ಯವನ್ನು ಅಧ್ಯಯನ ಮಾಡುತ್ತಿ ದ್ದಾಗ ಅವರಿಗೂ ಇಂಥದೇ ಒಂದು ಅನುಭವವಾಯಿತಂತೆ. ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರನ ಬೇಟೆಯ ಸಂದರ್ಭದಲ್ಲಿ 'ಮೇಗಾಳಿ-ಕಿಗ್ಗಾಳಿ' ಎಂಬ ಎರಡು ಪದಗಳು ಬಳಕೆಗೊಂಡಿವೆ. ಅವರಿಗೆ ಅವರ ಅರ್ಥ ಸರಿಯಾಗಿ ಗೊತ್ತಿರಲಿಲ್ಲ. ಅವರು ಚಿಕ್ಕಮಗ ಳೂರಿನಲ್ಲಿ ಒಂದು ಹೋಟೆಲಲ್ಲಿ ಕಾಫಿ ಕುಡಿಯುತ್ತಿದ್ದಾಗ, ಅವರಿಗಿಂತ ಮುಂದಿನ ಬೆಂಚಿನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಇಬ್ಬರು ಲೇ, ಬೇಗ ಕಾಫಿ ಕುಡಿಯೋ. ಈಗ ಮೇಗಾಳಿಯ ಸಮಯ. ಈಗ ಬೇಟೆಗೆ ಹೋದರೆ ಏನಾದರೂ ಸಿಕ್ಕಾವು. ಇನ್ನು ಕಿಗ್ಗಾಳಿ ಸುರುವಾದರೆ ಇವತ್ತಿನ ನಮ್ಮ ಬೇಟೆ ಮುಗಿದ್ಹಾಂಗೇ ಸೈ ಎಂದು ಮಾತಾಡಿಕೊಳ್ಳು ತ್ತಿದ್ದರಂತೆ. ಕೂಡಲೇ ಅವರನ್ನು ಸಮೀಪಿಸಿ ಏನಪ್ಪಾ ಮೇಗಾಳಿ ಕಿಗ್ಗಾಳಿಂತಂದ್ರೇನು? ಸ್ವಲ್ಪ ಹೇಳ್ತೀರಾ?'' ಎಂದು ನರಸಿಂಹಾಚಾರ್ಯರು ಕೇಳಿದರಂತೆ. ಅದಕ್ಕವರು ``ಮೃಗದ ಕಡೆಯಿಂದ ನಮ್ಮ ಕಡೆಗೆ ಬೀಸುವ ಗಾಳಿಗೆ ಮೇಗಾಳಿಯೆಂದೂ, ನಮ್ಮ ಕಡೆಯಿಂದ ಮೃಗದ ಕಡೆಗೆ ಬೀಸುವ ಗಾಳಿಗೆ ಕಿಗ್ಗಾಳಿಯೆಂದೂ ಹೇಳ್ತಾರೆ.... ಮೇಗಾಳಿ ಬೇಟೆಗೆ ಒಳ್ಳೆಯ ಸಮಯ. ಕಿಗ್ಗಾಳಿಯಲ್ಲಿ ನಮ್ಮ ಪರಿಮಳ ಅವಕ್ಕೆ ಗೊತ್ತಾಗಿ ಬಿಡುತ್ತೆ. ಅವು ಓಡಿ ಬಿಡುತ್ತವೆ.... ಎಂದರಂತೆ. ಅಂತೂ 'ಮೇಗಾಳಿ ಕಿಗ್ಗಾಳಿ'ಗಳ ಅರ್ಥ ನಿಜವಾದ ಬೇಟೆ ಗಾರರಿಂದಲೇ ನರಸಿಂಹಾಚಾರ್ಯರಿಗೆ ತಿಳಿದು, ಅವರಿಗೆ ತುಂಬ ಸಂತೋಷವಾಯಿತು.
ಒಬ್ಬ ಗ್ರಂಥಸಂಪಾದಕನಿಗೆ ಈ ರೀತಿಯ ಅನುಭವವಾಗುವುದು ಸರ್ವೇ ಸಾಮಾನ್ಯವೆನ್ನಬಹುದು. ಒಮ್ಮೆ ಮಧೂರು ಉಳಿಯತ್ತಾಯರ ಮನೆಗೆ ಹೋಗಿದ್ದಾಗ ಅಲ್ಲಿ ಖ್ಯಾತ ಯಕ್ಷಗಾನ ಅರ್ಥಧಾರಿ ಡಾ. ಕೋಟೆಕುಂಜ ನಾರಾಯಣ ಶೆಟ್ಟರು ಕಾಣಸಿಕ್ಕಿದರು. ದಾನೆ ಸೆಟ್ರೆ, ಎಂಚ ಉಳ್ಳರ್ ? (ಏನು ಶೆಟ್ರೆ ? ಹೇಗಿದ್ದೀರಿ) ಎಂದು ಕೇಳಿದೆ. 'ಇಂಚ ಉಳ್ಳೆಂದೆ, ಮುಳ್ಪ ಮುಕ್ಕೋಳ್ ಉಂಡೊಂದು' (ಹೀಗೆ ಇದ್ದೇನೆ ಇಲ್ಲಿ, ಮೂರು ಹೊತ್ತು ಊಟ ಮಾಡಿಕೊಂಡು) ಎಂದು ತಮಾಷೆಯಾಗಿ ನಗುತ್ತಾ ಹೇಳಿದರು. ಮುಕ್ಕೋಳು ಪದ ನನಗೆ ಹೊಸದು. ಅವರಲ್ಲೇ ಅದರ ಅರ್ಥ ಕೇಳಿದೆ. ಮುಕ್ಕೋಳ್ ಅಂದ್ರೆ ಮೂರು ಬಾರಿ ಎಂದರ್ಥ ಎಂದರು. ಈ ಮುಕ್ಕೋಳುವೇ ತುಳು ಭಾಗವತದಲ್ಲಿ 'ಮುಕ್ಕಳ್' ಆಗಿದೆಯೆಂದು ಊಹಿಸಲು ನನಗೆ ಕಷ್ಟವಾಗಲಿಲ್ಲ.
ಸುತೆಯೆಂದರೆ ಮಗಳಲ್ಲ - ಸುಣ್ಣ :
ತುಳುಮಹಾಭಾರತದಲ್ಲಿ ದ್ರೌಪದೀಸ್ವಯಂವರದ ಭಾಗ ತುಂಬ ಸ್ವಾರಸ್ಯಕರ ವಾದುದು. ಸ್ವಯಂವರಕ್ಕೆ ಆಗಮಿಸುವ ಅತಿಥಿಗಳಿಗೆ ದ್ರುಪದನು ಕುಡಿಯಲು 'ಹಿಮಾಂಬು' ವ್ಯವಸ್ಥೆ ಮಾಡಿದ್ದನು. ತುಳು ಮಹಾಭಾರತದ ಕವಿಯಾದ ಅರುಣಾಬ್ಜನು ಈ ತಂಪು ಪಾನೀಯವನ್ನು ತಯಾರಿಸುವ ವಿಧಾನವನ್ನು ತಿಳಿಸಿದ್ದಾನೆ.
ಕೂಪೊಂಕುಳೆ ತೋಡ್ಸ್ಟ್ ಕಟ್ಟವೆಕ್ ಸುತೆ ಪೂಜಿಸ್ಟ್ ನಿಂಜ
ಪೋಯ್ಪೋಸ್ಟ್ ಹಿಮಾಂಬುಡ್ಪೋಸ್ಟ್ ಪಣೇ ಉಳೈ ಪೋಯಿ ಜನೊಂಕ್
ಚೂಪೋಯೆರ್ ನೀರಪ್ರಕಾರೊಮಿನೀ ಕೊಳಿಯೆರ್ ಕಡೆಕೂಡ
ಜಾಪಣ್ಕೊ ಸ್ವಯಂವರ ಸಂಭ್ರಮೊಮೀ ಪಾಂಚಾಲೆ ಸೃಜೀತೀ (11-23)
ನೆಲದಲ್ಲಿ ಬಾವಿಗಳನ್ನು ತೋಡುವುದು; ತೋಡಿದ ಬಾವಿಗೆ ಸುತ್ತಲೂ ಕಲ್ಲು ಕಟ್ಟುವುದು; ಅದರ ಒಳ ಬದಿಗೆ ಸುಣ್ಣದ ಗಾರೆ ಮಾಡುವುದು; ಅದರಲ್ಲಿ ಹಿಮಾಂಬು (ತಣ್ಣೀರು)ವನ್ನೂ, ಪಣೆನೀರನ್ನೂ (ಪನ್ನೀರನ್ನೂ)1 ಸೇರಿಸಿ ಜಲಸಂಗ್ರಹ ಮಾಡಿಡುವುದು; - ಇದು ಹಿಮಾಂಬು ತಯಾರಿಯ ವಿಧಾನ. ಇಲ್ಲಿ 'ಸುತೆ'ಯೆಂದರೇನು? ಫಕ್ಕನೆ ಹೊಳೆಯುವ ಅರ್ಥ 'ಮಗಳು' ಅಂತ. ಆ ಅರ್ಥ ಇಲ್ಲಿಗೆ ಅನ್ವಯವಾಗುವುದಿಲ್ಲ. ಸುತೆಯೆಂಬ ಪದಕ್ಕೆ ಇನ್ನೇನು ಅರ್ಥವಿರಬಹುದೆಂದು ಎಲ್ಲ ಕೋಶಗಳನ್ನು ಮಗುಚಿ ದ್ದಾಯಿತು. ಕೊನೆಗೆ ಕಿಟ್ಟೆಲ್ದೊರೆಗಳ ಆಶ್ರಯ ಪಡೆದಾಗ, ಅಲ್ಲಿ ಒಂದೆಡೆ ಸುದೆಗೆ ಸುಣ್ಣ (ಐಟಜ) ಎಂಬ ಅರ್ಥಕೊಟ್ಟದ್ದು ಕಂಡು ಬಂತು. ಆ ಸುದೆಯೇ ಇಲ್ಲಿ ಸುತೆಯಾಗಿದೆಯೆಂದು ಊಹಿಸಲು ಕಷ್ಟವಾಗಲಿಲ್ಲ.
ಅಪೂರ್ವ ತುಳು ಪದಗಳು :
ತುಳು ಕಾವ್ಯಗಳಲ್ಲಿ ಇನ್ನೂ ಅರ್ಥೆಸಲಾಗದ ಅನೇಕ ತುಳು ಪದಗಳಿವೆ.
ತುಳು ಭಾಗವತದಲ್ಲಿ : ಒಂಪಾಲೊ, ಶರಭಾಕ್ತಿನ, ಕಾಯಕಲ್ಪನೆ, ಬಲಸ್ಸ್, ಓವತ್ತೆ, ಕೈಪಡನಾ, ಧೂಸ, ಮುಡಮಿತ್ತ್, ಮುಡುಪಾಯ್ ಇತ್ಯಾದಿ.
ತುಳು ಕಾವೇರಿಯಲ್ಲಿ : ಅಂಜಿ (ಹೆದರು ಎಂಬ ಅರ್ಥವಲ್ಲ) ಅತ್ರೈಳೆ, ಮೆಲ್ಲಿ, ವಾಂತಾರ, ತಿರಿ (ಚಿಗುರು ಎಂಬ ಅರ್ಥವಲ್ಲ).
ತುಳು ದೇವೀಮಹಾತ್ಮೆಯಲ್ಲಿ : ಒಸ್ದ್ನ್, ವಲ್ಲಚಮರ್ೊ, ಕಬ್ಬಲ - ಇತ್ಯಾದಿ
ತುಳು ಮಹಾಭಾರತದಲ್ಲಿ : ಧಮರೊ, ಪÙಳ್ಸ್ಟೀ ಮುÙಳ್ಸ್, (ಒಂದು ವಿಧದ ವಾದ್ಯ) ಕಡುವೈ (ಒಂದು ವಿಧದ ವಾದ್ಯ) - ಇತ್ಯಾದಿ.
ತುಳು ಭಾಗವತದ ಪ್ರಕಟನೆ :
ಪರಿಶ್ರಮದಿಂದ ಟಿಪ್ಪಣಿಗಳನ್ನು, ವಿಸ್ತಾರವಾದ ಪೀಠಿಕೆಯನ್ನೂ ಕೊನೆಗೆ ಶಬ್ದ ಕೋಶವನ್ನೂ ಸಿದ್ಧಪಡಿಸಿ ಕೊಟ್ಟ ಮೇಲೆ, ಮಂಗಳೂರು ವಿಶ್ವವಿದ್ಯಾನಿಲಯವು ತುಳು ಭಾಗವತವನ್ನು ಪ್ರಕಟಿಸಲು ಎತ್ತಿಕೊಂಡಿತು. ಆ ಕಾಲದಲ್ಲಿ ಡಾ. ಶ್ರೀನಿವಾಸ ಹಾವನೂರರು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿ ಹೋಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿಯೂ ವಿಭಾಗದ ಮುಖ್ಯಸ್ಥರಾಗಿಯೂ ಇದ್ದ ಡಾ. ಬಿ. ಎ. ವಿವೇಕ ರೈ ಅವರು ಪ್ರಕಾಶನಕ್ಕೆ ಬೇಕಾದ ಪ್ರೋತ್ಸಾಹವನ್ನಿತ್ತರು. 1984ರಲ್ಲಿ ತುಳು ಭಾಗವತವು ಪ್ರಕಟಗೊಂಡಿತು. ಹೀಗೆ ಭಾಗವತದ ಹದಿನಾಲ್ಕು ವರ್ಷಗಳ ವನವಾಸ ಕೊನೆಗೊಂಡಿತು.
ಈ ಕೃತಿಯ ಪ್ರಕಟನೆಯೊಂದಿಗೆ ಕೆಲವರು ಅಲ್ಲಲ್ಲಿ ಪ್ರಾಚೀನ ತುಳು ಭಾಷೆ ಮತ್ತು ಸಾಹಿತ್ಯದ ಬಗೆಗೆ ಮಾತಾಡತೊಡಗಿದರು. ಮಂಗಳೂರು ಆಕಾಶವಾಣಿಯವರು ಈ ಕೃತಿಯ ಬಗೆಗೆ ಕೆಲವು ಉಪನ್ಯಾಸಗಳನ್ನು ಪ್ರಸಾರ ಮಾಡಿದರು. ತುಳು ಸಂಬಂಧವಾದ ಕಾರ್ಯಕ್ರಮಗಳಲ್ಲಿ ಸಾಂದಭರ್ಿಕವಾಗಿ ತುಳು ಭಾಗವತ ಮತ್ತು ಕವಿ ವಿಷ್ಣು ತುಂಗನ ಬಗೆಗೆ ಪ್ರಸ್ತಾವಗಳಾಗತೊಡಗಿದುವು. ಆದರೂ ಈ ಕೃತಿಯ ಕುರಿತು ತುಳುಜನತೆಯಲ್ಲಿ ಅಂತಹ ಅದ್ಭುತವಾದ ಸ್ವಾಗತವೇನೂ ದೊರೆಯಲಿಲ್ಲ. ಏಕೆಂದರೆ ಭಾಗವತದ ತುಳು ಭಾಷೆ ಈಗಿನ ಆಡುಮಾತಿಗಿಂತ ತುಂಬ ಭಿನ್ನವಾಗಿತ್ತು. ಈ ಭಾಷೆಯಲ್ಲಿ ಸಂಸ್ಕೃತಪದಗಳು ಹಾಗೂ ಸಂಸ್ಕೃತದಿಂದ ಸಾಧಿಸಿದ ಪದಗಳ ವೈಪುಲ್ಯವಿತ್ತು. ಬ್ರಾಹ್ಮಣರ ತುಳು ಉಪಭಾಷೆಯ ಪ್ರಯೋಗಗಳು ಹೆಚ್ಚಾಗಿದ್ದು, ಸಾಮಾನ್ಯ ತುಳುವಿನ ಬಳಕೆ ಕಡಮೆಯಾಗಿತ್ತು. `ಸ್ಟ್' ಎಂಬ ಧ್ವನಿಮಾ ಉಚ್ಚಾರಣೆಗೂ ಓದುವಿಕೆಗೂ ತೊಡಕ ನ್ನುಂಟುಮಾಡುತ್ತಿತ್ತು. ಅಲ್ಲಿಯ ಛಂದೋಬಂಧಗಳು ಕನ್ನಡದ ಕಾವ್ಯಗಳ ಬಳಕೆಯವು ಗಳಿಗಿಂತ ಭಿನ್ನವಾಗಿದ್ದುವು. ಆದುದರಿಂದ ಇದು ತುಳುಕಾವ್ಯವೇ? ಅದರಲ್ಲಿರುವುದು ತುಳುಭಾಷೆಯೇ? - ಎಂಬ ಕುರಿತೂ ಕೆಲವರು ಸಂದೇಹಪಟ್ಟರು. ತಮಗೆ ಅಪರಿಚಿತವಾದ ಒಂದು ಭಾಷಾರೂಪ ಇದಿರಾದಾಗ ಅದರ ಬಗೆಗೆ ಮುಕ್ತಮನಸ್ಸಿನಿಂದ ನೋಡುವ ಪ್ರಬುದ್ಧತೆ ಬಹಳ ಮಂದಿಗಿಲ್ಲದಿರುವುದು ಸಹಜವೇ ಆಗಿದೆ.
ತುಳುಭಾಗವತ ಪ್ರಕಟಗೊಂಡು ಇಂದಿಗೆ ಸುಮಾರು ಹದಿನೈದು ವರ್ಷಗಳಾ ದರೂ, ಕೆಲವರು ಭಾಷಣಗಳಲ್ಲಿ ಕೂಡ ತುಳುಭಾಷೆ ಎಂದರೆ ಆಡುಮಾತು ಮಾತ್ರ. ಅದಕ್ಕೆ ಸಾಹಿತ್ಯದ ಪರಂಪರೆ ಇಲ್ಲ ಎಂದೇ ಹೇಳುತ್ತಿರುವುದು ದುಭರ್ಾಗ್ಯದ ಸಂಗತಿ. ಇನ್ನು ಕೆಲವರು ತುಳುವಿನ ಪ್ರಾಚೀನ ಸಾಹಿತ್ಯ ಪರಂಪರೆ ಎಂದಕೂಡಲೇ 'ಲಿಪಿ ಯಾವುದು?' ಎಂದು ಪ್ರಶ್ನೆಯಿಕ್ಕುತ್ತಾರೆ. ಲಿಪಿಗೂ ಭಾಷೆಗೂ ಇರುವ ಸಂಬಂಧದ ಕುರಿತು ಅವರಿಗೆ ಹೆಚ್ಚಿನ ಅರಿವಿಲ್ಲ. ಪ್ರಕಟಿತ ತುಳುಭಾಗವತದಲ್ಲಿ ನೀಡಿದ ತುಳು ಅಕ್ಷರಮಾಲೆ ಮತ್ತು ಭಾಗವತದ ತಾಡವಾಲೆಯ ಪಡಿಯಚ್ಚನ್ನು ನೋಡಿದ ಹಲವರು ಲಿಪಿಸ್ವರೂಪದ ಯಾವ ಅಧ್ಯಯನವನ್ನೂ ಮಾಡದೆ ಇದು ಮಲೆಯಾಳಿ ಲಿಪಿಯೇ ಎಂದು ತೀರ್ಮಾನ ಹೇಳಿದ್ದೂ ಉಂಟು. ಹಲವರಿಗೆ ತುಳುಭಾಗವತವನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿದ್ದು ಏಕೆಂಬ ವಿಷಯದಲ್ಲಿ ಸಂದೇಹ. ಆದರೆ ತುಳು ಗ್ರಂಥಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸದೆ ಅದೇ ತುಳುಲಿಪಿಯಲ್ಲಿ ಮುದ್ರಿಸಿದರೆ ಇಂದು ಅದನ್ನು ಓದುವವರ ಸಂಖ್ಯೆ ಎಷ್ಟಿರಬಹುದು? ಕನ್ನಡ ಲಿಪಿಯಲ್ಲಿ ಮುದ್ರಿತವಾದ ಪ್ರಾಚೀನ ತುಳು ಗ್ರಂಥಗಳನ್ನು ಓದಿದವರ ಸಂಖ್ಯೆಯೇ ಸೀಮಿತವಾಗಿರುವಾಗ ಅಪರಿಚಿತವಾದ ತುಳು ಲಿಪಿಯಲ್ಲಿ ಮುದ್ರಿಸಿದರೆ ಏನು ಸಾಧಿಸಿದ ಹಾಗಾಗುತ್ತಿತ್ತು?
ತುಳುಭಾಗವತ ಮತ್ತು ತುಳುನಿಘಂಟು:
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ತುಳು ನಿಘಂಟು ಯೋಜನೆ ತೊಡಗಿದ್ದು 1979ರಲ್ಲಿ. ಅದರ ಸಂಪಾದಕೀಯ ಸಲಹಾ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ. ಪಾಡ್ದನಗಳು ಮತ್ತು ಲಿಖಿತಮೂಲಗಳಿಂದ ಹಾಗೂ ಕ್ಷೇತ್ರಕಾರ್ಯದ ಮೂಲಕ ಜನವ್ಯವಹಾರದಿಂದ ಸಾಕಷ್ಟು ಶಬ್ದಗಳನ್ನೂ ಪ್ರಯೋಗಗಳನ್ನೂ ವ್ಯಾಪಕವಾಗಿಯೇ ಸಂಗ್ರಹಿಸಿ ನಿಘಂಟುಕಾರ್ಯ ನಡೆಯುತ್ತಿತ್ತು. ಪ್ರಾಚೀನಸಾಹಿತ್ಯಕೃತಿಯೊಂದು ಉಪಲಬ್ಧವಾದಾಗ ನಿಘಂಟುಕಾರರಿಗೆ ಅದೊಂದು ಅಮೂಲ್ಯಭಂಡಾರವೇ ಆಗಿರುತ್ತದೆ. ತುಳುಭಾಗವತದ ಉಪಲಬ್ಧಿ ತುಳುನಿಘಂಟುವಿಗೂ ಹಾಗೆಯೇ ಆಯಿತು. ತುಳುವಿನ ಅನೇಕ ಶಬ್ದಗಳ ಭಿನ್ನರೂಪಗಳು, ಪ್ರಾಚೀನರೂಪಗಳು, ಪ್ರಾಚೀನಪ್ರಯೋಗಗಳು, ವಿಶಿಷ್ಟಪ್ರಯೋಗಗಳು, ತುಳುಭಾಗವತದಲ್ಲಿದ್ದುವು. ಅವನ್ನು ಸೇರಿಸದಿದ್ದರೆ ತುಳುನಿಘಂಟು ಅಪೂರ್ಣವೆನಿಸುತ್ತದೆ. ಆದುದರಿಂದ ಅಂತಹ ಪ್ರಯೋಗ ಗಳನ್ನೆಲ್ಲ ನಿಘಂಟುವಿನೊಳಗೆ ಸೇರಿಸಬೇಕೆಂದು ನಿರ್ಣಯಿಸಲಾಯಿತು. ಆದರೆ ತುಳು ಭಾಗವತದಲ್ಲಿರುವ ಸಂಸ್ಕೃತ ಶಬ್ದಗಳನ್ನು ಸೇರಿಸಿಕೊಳ್ಳಬೇಕೇ? ಬಿಡಬೇಕೇ? ಈ ಬಗೆಗೆ ಸಂಪಾದಕೀಯ ಸಲಹಾಸಮಿತಿಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಕನ್ನಡವೇ ಮೊದಲಾದ ಇತರ ನಿಘಂಟುಗಳು ಅನುಸರಿಸಿದ ಮಾದರಿಯಲ್ಲಿ ಅಂತಹ ಶಬ್ದಗಳ ತುಳು ಸಂದರ್ಭಗಳನ್ನು ಉಪಯೋಗಿಸಿ ಅರ್ಥವನ್ನು ನೀಡಬೇಕೆಂದು ಕೊನೆಗೆ ನಿರ್ಣ ಯಿಸಲಾಯಿತು.
1988ರಲ್ಲಿ ತುಳುನಿಘಂಟುವಿನ ಮೊದಲನೆಯ ಸಂಪುಟ ಪ್ರಕಟಗೊಂಡಿತು. ಅದರಲ್ಲಿ ತುಳುಭಾಗವತ ಮತ್ತು ಕಾವೇರಿ ಕಾವ್ಯಗಳ ಸಾಕಷ್ಟು ಪ್ರಯೋಗಗಳು ಸೇರಿದ್ದುವು. (ಮಿತ್ರರಾದ ಪಾದೇಕಲ್ಲು ವಿಷ್ಣು ಭಟ್ಟರು ತುಳುನಿಘಂಟು ಕಚೇರಿಯಲ್ಲಿ ಸಹಾಯಕ ಸಂಪಾದಕರಾಗಿ ಸೇರಿದಾಗ ನಿಘಂಟುವಿನ ಪ್ರಧಾನಸಂಪಾದಕ ಡಾ. ಯು. ಪಿ. ಉಪಾಧ್ಯಾಯರು ತುಳುಭಾಗವತದಿಂದ ಶಬ್ದಗಳನ್ನೂ ಪ್ರಯೋಗಗಳನ್ನೂ ಆರಿಸುವ ಕೆಲಸವನ್ನು ಅವರಿಗೆ ವಹಿಸಿದ್ದರು. ಶ್ರೀಯುತ ವಿಷ್ಣು ಭಟ್ಟರು ಈ ವಿಷಯದಲ್ಲಿ ಸಾಕಷ್ಟು ಪರಿಶ್ರಮವಹಿಸಿದ್ದಾರೆ.) ಅನಂತರದ ತುಳುನಿಘಂಟು ಸಂಪುಟಗಳಲ್ಲಿ ತುಳು ದೇವೀ ಮಹಾತ್ಮೆಯಿಂದಲೂ ಆಯ್ದ ಶಬ್ದಗಳು ಮತ್ತು ಪ್ರಯೋಗಗಳಿವೆ. ಒಟ್ಟಿನಲ್ಲಿ ತುಳು ಭಾಗವತ ಮತ್ತು ಇತರ ಪ್ರಾಚೀನಕೃತಿಗಳ ಆದಷ್ಟು ಹೆಚ್ಚಿನ ಉಪಯೋಗ ನಡೆದುದು ನಿಘಂಟು ಯೋಜನೆಯಲ್ಲಿಯೇ ಆಗಿದೆ.
ಕಾವೇರಿ ಮತ್ತು ದೇವೀಮಹಾತ್ಮೆ:
`ಕಾವೇರಿ' ಎಂಬ ಪದ್ಯಕಾವ್ಯ ಮತ್ತು `ದೇವೀಮಹಾತ್ಮೆ' ಎಂಬ ಗದ್ಯಕೃತಿ ಇವೆರಡೂ ನನಗೆ ಲಭ್ಯವಾದದ್ದು ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಹಸ್ತಪ್ರತಿಭಂಡಾರದಲ್ಲಿ. ಪ್ರೊ. ಉಣಿತ್ತಿರಿಯವರ ನೇತೃತ್ವದಲ್ಲಿ ಕಾಸರಗೋಡು ಪರಿಸರದ ಹಸ್ತಪ್ರತಿಗಳ ಸಂಗ್ರಹ ಕಾರ್ಯ ನಡೆಸುವಾಗ ನಾನೂ ಅವರೊಂದಿಗೆ ಇದ್ದೆನೆಂದು ಈ ಮೊದಲೇ ಹೇಳಿರುತ್ತೇನೆ. ಈ ಎರಡು ಗ್ರಂಥಗಳೂ ಕಾಸರಗೋಡು ಪರಿಸರದಿಂದಲೇ ದೊರೆತದ್ದು ಎಂಬುದು ಅಭಿಮಾನದ ವಿಷಯವಾಗಿದೆ. `ಕಾವೇರಿ' ಮತ್ತು `ತುಳುದೇವೀಮಹಾತ್ಮೆ' ಇವೆರಡೂ ಕೃತಿಗಳನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದವರೇ ಪ್ರಕಟಿಸಿದರು. ತತ್ಕಾಲದ ಉಪಯೋಗಕ್ಕಾಗಿ ಈ ಕೃತಿಗಳ ಹಸ್ತಪ್ರತಿಗಳನ್ನು ಕಲ್ಲಿಕೋಟೆಯಿಂದ ತಂದು ಉಪಯೋಗಿಸಿಕೊಂಡೆ. ಕಾವೇರಿ ಕಾವ್ಯವಂತೂ ತ್ರುಟಿತ. ಇದರ ಪೂರ್ಣಪ್ರತಿ ತುಳು ನಾಡಿನ ಯಾವ ಮನೆಯ ಅಟ್ಟದಲ್ಲಡಗಿದೆಯೋ ತಿಳಿಯದು.
ತುಳು ಕಾವೇರಿ ಗ್ರಂಥಸಂಪಾದನೆಯ ಸಂದರ್ಭದಲ್ಲಿ ಮಿತ್ರರಾದ ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು ನನ್ನೊಂದಿಗಿದ್ದು ನನ್ನ ಪರಿಶ್ರಮಗಳಿಗೆ ಆತ್ಮೀಯವಾಗಿ ಸ್ಪಂದಿಸಿ ದ್ದಾರೆ.(ಮಾತ್ರವಲ್ಲ, ಪ್ರಾಚೀನ ಕಾವ್ಯಗಳನ್ನು ಕಾವ್ಯಭಾಷೆಯನ್ನು ಅಧ್ಯಯನ ಮಾಡಿ, ಆ ಭಾಷೆಯಲ್ಲೇ ಒಂದು ಕವನವನ್ನೂ ಅವರು ರಚಿಸಿದ್ದುಂಟು). ತುಳುಭಾಗವತದಲ್ಲಿ ನನ್ನ ಗಮನಕ್ಕೆ ಬಾರದ ಅಂಶಗಣಷಟ್ಪದಿಯನ್ನು ಅವರೇ ಗುರುತಿಸಿಕೊಂಡಿದ್ದಾರೆ. ಆ ವಿಷಯದಲ್ಲಿ ಅವರು ಒಂದು ಲೇಖನವನ್ನೂ ಬರೆದಿದ್ದಾರೆ. ತುಳು ದೇವೀಮಹಾತ್ಮೆಯ ಸಂಪಾದನೆಯ ಸಂದರ್ಭದಲ್ಲಿ ಮಿತ್ರರಾದ ಡಾ. ಪದ್ಮನಾಭ ಕೇಕುಣ್ಣಾಯರಿಂದ ನನಗೆ ತುಂಬ ಸಹಕಾರ ದೊರೆತಿದೆ.
ತುಳುಮಹಾಭಾರತ :
ತುಳುನಿಘಂಟು ಪ್ರಕಟವಾದ ಮೇಲೆ ನನಗೆ ದೊರೆತ ಒಂದು ಹಸ್ತಪ್ರತಿ ತುಳುವಿನ ಪ್ರಾಚೀನ ಕಾವ್ಯಸಂಪ್ರದಾಯ ಸಾಕಷ್ಟು ಪ್ರಬಲವಾಗಿದ್ದುದನ್ನು ದಾಖಲು ಮಾಡುವಂತಹ ದಾಗಿದೆ. 1988ರಲ್ಲಿ ನಾನು ಔಷಧೋಪಚಾರಕ್ಕಾಗಿ ನಮ್ಮ ಪರಿಚಯದವರೊಬ್ಬರ ಮನೆಯಲ್ಲಿದ್ದೆ. ಪುತ್ತೂರು ತಾಲೂಕು ಅಮರ ಮೂಡನೂರು ಗ್ರಾಮದ ಮುಂಡ್ಯ ಶಿವರಾಮ ಕೇಕುಣ್ಣಾಯರು ನನ್ನ ತಾಡವಾಲೆ ಹಸ್ತಪ್ರತಿ ಸಂಗ್ರಹದ ಆಸಕ್ತಿಯನ್ನು ತಿಳಿದು ತಮ್ಮಲ್ಲಿದ್ದ ಒಂದು ಓಲೆ ಪ್ರತಿಯನ್ನು ನನಗಿತ್ತರು. ಅದೇ `ತುಳುಮಹಾಭಾರತ'. ಆ ಕೃತಿಯ ಕವಿ ಅರುಣಾಬ್ಜ. ಅವನ ಊರು ಕೊಡವೂರು - ಉಡುಪಿಯ ಸಮೀಪದ್ದು. ಶರೀರದ ಆರೋಗ್ಯಸುಧಾರಣೆಗಾಗಿ ಹೋದವನಿಗೆ ಮಾನಸಿಕಸಂತೋಷ ಮತ್ತು ಬೌದ್ಧಿಕ ಪರಿಶ್ರಮಕ್ಕೆ ಕಾರಣವಾಗುವ ಮಹತ್ತ್ವಪೂರ್ಣ ವಿಷಯ ದೊರಕಿ ಸಂತೋಷವಾಯಿತು.
ಹಲವಾರು ದೃಷ್ಟಿಗಳಿಂದ ಮುಖ್ಯವಾದ ಕೃತಿ ತುಳು ಮಹಾಭಾರತ. ತುಳು ಭಾಗವತದಲ್ಲಿ ಸೀಮಿತಸಂಖ್ಯೆಯಲ್ಲಿ ಉಪಯೋಗಿಸಲ್ಪಟ್ಟ ಅಂಶಷಟ್ಪದಿ (ತ್ರಿಮೂರ್ತಿಗಣ ಷಟ್ಪದಿ) ಈ ಕೃತಿಯಲ್ಲಿ ಬಹಳವಾಗಿ ಬಳಸಲ್ಪಟ್ಟಿದೆ. ಅಲ್ಲದೆ ಪ್ರಾಚೀನ ತುಳುವಿನಲ್ಲಿ ರಾಮಾಯಣ, ರುಕ್ಮಿಣೀ ಸ್ವಯಂವರ, ಬಾಣಾಸುರ ವಧೆ, ಕೀಚಕವಧೆ, ಅಂಬರೀಷೋ ಪಾಖ್ಯಾನ ಎಂಬ ಕೃತಿಗಳು ರಚಿತವಾಗಿದ್ದುವೆಂಬ ಮಾಹಿತಿಯನ್ನೂ ಏಣಾಪಾಣಿ ಮುಕುಂದ (ಶಂಕರನಾರಾಯಣ?) ಮತ್ತು ಮತ್ತು ಗುಡ್ಡೆತರಾಯೆ ಎಂಬ ಕವಿಗಳ ಹೆಸರುಗಳನ್ನೂ ಇದು ತಿಳಿಸುತ್ತದೆ. ತುಳುವಿನ ಸಾಹಿತ್ಯಪರಂಪರೆಯ ಬಗೆಗೆ ಖಚಿತ ಆಧಾರವು ಒದಗಿಬರುವುದು ಈ ಕೃತಿಯಲ್ಲಿ. ಇದು ನಿಡಂಬೂರು ಬಲ್ಲಾಳ ಮನೆ ತನವನ್ನು ಉಲ್ಲೇಖಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ಇದು ಮುಖ್ಯವಿಷಯ. ಈ ಕೃತಿಯ ಪ್ರತಿ ತಯಾರಿ ಮತ್ತು ಸಂಪಾದನೆಯ ಕೆಲಸ ಪೂರೈಸಿದೆ. (ಮಿತ್ರರಾದ ಡಾ. ಪದ್ಮನಾಭ ಕೇಕುಣ್ಣಾಯರು ನನಗೆ ಈ ಕಾರ್ಯದಲ್ಲಿ ಬಹಳ ಸಹಕರಿಸಿದ್ದಾರೆ.) ಇನ್ನು ಮುದ್ರಣ ಕಾಣಬೇಕಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದನ್ನು ಮುದ್ರಿಸಿ ಪ್ರಕಟಿಸಲು ಮುಂದೆ ಬಂದಿದೆ.
ಈ ಎಲ್ಲಾ ಕೃತಿಗಳ ಒಂದೊಂದೇ ಪ್ರತಿಗಳು ಇದುವರೆಗೆ ದೊರಕಿದ್ದು ಏಕೈಕ ಹಸ್ತಪ್ರತಿಯ ಆಧಾರದಿಂದ ಗ್ರಂಥಸಂಪಾದನೆ ಮಾಡಲಾಗಿದೆ. ಹುಡುಕಿದಲ್ಲಿ ತುಳುನಾಡಿನ ಭಾಗ್ಯದಿಂದ ಈ ಕೃತಿಗಳ ಇತರ ಹಸ್ತಪ್ರತಿಗಳೂ, ಇಂದಿಗೆ ತಿಳಿದಿಲ್ಲದ ಇತರ ಕೃತಿಗಳ ಹಸ್ತಪ್ರತಿಗಳೂ ಸಿಕ್ಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. `ತುಳುಕರ್ಣಪರ್ವ' ಎಂಬೊಂದು ಕಾವ್ಯದ ಒಂದೆರಡು ಓಲೆಗರಿಗಳು ಮಾತ್ರ ದೊರಕಿದ್ದು ಒಂದು ಆಸೆ ಹುಟ್ಟಿಸಿದೆ. ಏನಿದ್ದರೂ ತುಳುವಿನ ಪ್ರಾಚೀನಸಾಹಿತ್ಯಕ್ಕೆ ಸಾಕಷ್ಟು ಶ್ರೀಮಂತವಾದ ಒಂದು ಇತಿಹಾಸವಿತ್ತೆಂಬುದು ಈಗ ಸ್ಥಿರವಾದ ಮಾತಾಗಿದೆ. ಈ ಕಾವ್ಯರಚನೆಯ ಕ್ಷೇತ್ರ ಉಡುಪಿಯಿಂದ ಕಾಸರಗೋಡಿನವರೆಗೆ ಹಬ್ಬಿರುವುದು ಈಗ ರುಜುವಾತಾಗಿರುವ ಸಂಗತಿಯಾಗಿದೆ. ಇದೊಂದು ಚಾರಿತ್ರಿಕ ಸತ್ಯವಾಗಿದೆ.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತುಳು ತಿಗಳಾರಿ ಲಿಪಿಯ ತಾಡವಾಲೆಗಳು ಹಲವಾರು ಲಭ್ಯವಾಗಿವೆ. ಒಂದು ಕಾಲದಲ್ಲಿ ತುಳು ತಿಗಳಾರಿ ಲಿಪಿಗಳು ಈ ಪ್ರದೇಶಗಳಲ್ಲಿ ಸಾಕಷ್ಟು ಪ್ರಚಾರದಲ್ಲಿದ್ದುವು ಎಂದು ತಿಳಿಯ ಲಾಗಿದೆ. ಕ್ರಮೇಣ ಕನ್ನಡಲಿಪಿಯ ಬಳಕೆ ಹೆಚ್ಚಾಗುತ್ತಾ ಹೋದಂತೆ, ಜನರು ತುಳು-ತಿಗಳಾರಿಲಿಪಿಗಳನ್ನು ಮರೆಯುತ್ತಾ ಬಂದರು.
ಸುಮಾರು ಐವತ್ತು ವರ್ಷಗಳ ಹಿಂದೆ, ಕಾಸರಗೋಡಿನಲ್ಲಿ ತುಳುಲಿಪಿಯನ್ನು ಬಲ್ಲ ಹಲವು ಮಂದಿ ವಿದ್ವಾಂಸರನ್ನು ನಾನು ಕಂಡಿದ್ದೇನೆ. ಆ ತಲೆಮಾರು ಹೋದಾಗ ತುಳು ಲಿಪಿಜ್ಞಾನವೂ ನಷ್ಟವಾಯಿತು. ಆ ರೀತಿಯ ಗ್ರಂಥಗಳೂ ನಾಶವಾದವು. ಈ ಮೇಲಿನ ತಲೆಮಾರಿನವರಿಗೆ ತುಳುಲಿಪಿ ಪರಿಚಯ ಅನವಶ್ಯಕವಾಯಿತು.
ಹೀಗೆ ತುಳುಕಾವ್ಯಗಳ ಗ್ರಂಥಸಂಪಾದನಸಂದರ್ಭದಲ್ಲಿ ನನಗಾದ ಅನುಭವಗಳು ಅಪಾರ. ತುಂಬ ಪರಿಶ್ರಮದ ಕೆಲಸವಾಗಿದ್ದರೂ, ಈ ಅನುಭವಗಳು ನನಗೆ ಮುದ ನೀಡಿವೆ. ನನಗೆ ಜೀವನದಲ್ಲಿ ಧನ್ಯತೆಯ ಭಾವವನ್ನು ತಂದಿವೆ. ಹೊಸಕಾಲದಲ್ಲಿ ಹಸ್ತಪ್ರತಿಗಳು ಪೂರ್ಣ ನಾಶವಾಗುವ ಮೊದಲು ತುಳುನಾಡಿನಲ್ಲಿ ಆಮೂಲಾಗ್ರ ಪರಿಶೀಲನೆ ನಡೆಯುವ ಅಗತ್ಯವಿದೆ. ಆಗ ಇನ್ನಷ್ಟು ಹೊಸ ಬೆಳಕು ತೋರಿಬರಬಹುದು.
[`ಏರ್ಯ', ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಭಿನಂದನಗ್ರಂಥ, ಸಂ.: ಪ್ರೊ. ಅಮೃತ ಸೋಮೇಶ್ವರ ಮತ್ತಿತರರು, ಪ್ರ.: ಅಭಿನಂದನ ಸಮಿತಿ, ಮಂಗಳೂರು, 1999 -ಇದರಲ್ಲಿ ಪ್ರಕಟಿತ]